Tuesday, 5 July 2016

ಗುರುಗ್ರಹದ ಕಕ್ಷೆ ಸೇರುತ್ತಿರುವ ಜುನೋ

 ನಾಸಾದ ಮಹತ್ವಾಕಾಂಕ್ಷೆಯ ಸೌರಶಕ್ತಿ ಚಾಲಿತ ‘ಜುನೋ’ ಸ್ಪೇಸ್​ಕ್ರಾಫ್ಟ್ ಐದು ವರ್ಷಗಳ ಕಾಲ 280 ಕೋಟಿ ಕಿ.ಮೀ. ಪ್ರಯಾಣ ಮಾಡಿ ಜುಲೈ 4ರಂದು ಭಾರತೀಯ ಕಾಲಮಾನ ರಾತ್ರಿ 10.30ರ ಹೊತ್ತಿಗೆ ಗುರುಗ್ರಹದ ಕಕ್ಷೆಗೆ ಸೇರ್ಪಡೆಯಾಗುತ್ತಿದೆ. ಜುಲೈ 5ರಂದು ಬೆಳಗ್ಗೆ 10.30ರ ವೇಳೆಗೆ ಈ ಪಕ್ರಿಯೆ ಪೂರ್ಣಗೊಳ್ಳುತ್ತದೆ. ಇದರ ನೇರಪ್ರಸಾರವನ್ನು ನಾಸಾ ಮಾಡುತ್ತಿದ್ದು, ಇದು ಮಂಗಳವಾರ (ಜು.5) ಬೆಳಗ್ಗೆ 9 ಗಂಟೆಗೆ ಆರಂಭವಾಗುತ್ತದೆ. ಸ್ಪೇಸ್ ಕ್ರಾಫ್ಟ್ ಒಂದರ ಸುದೀರ್ಘ ಪ್ರಯಾಣ ಇದಾಗಿದ್ದು, ಕಕ್ಷೆ ಸೇರ್ಪಡೆಗೊಂಡ ಬಳಿಕ ಒಂದು ವರ್ಷ ಕಾಲ ಗುರುಗ್ರಹಕ್ಕೆ ಪ್ರದಕ್ಷಿಣೆ ಹಾಕಲಿದೆ. ಆ ಸಂದರ್ಭದಲ್ಲಿ ಅದು ಗುರುಗ್ರಹದ ಸಮೀಪದ ಛಾಯಾಚಿತ್ರಗಳನ್ನು ತೆಗೆದು ನಾಸಾಕ್ಕೆ ರವಾನಿಸಲಿದೆ. 2018ರ ವೇಳೆಗೆ ಈ ಸ್ಪೇಸ್​ಕ್ರಾಫ್ಟ್ ಗುರುಗ್ರಹದ ಚಂದ್ರನಿಗೆ ಡಿಕ್ಕಿ ಹೊಡೆದು ನಾಶವಾಗುವ ಸಾಧ್ಯತೆ ಇದೆ.

ಗುರಿ ಮತ್ತು ಉದ್ದೇಶ

ಗುರು ಗ್ರಹದ ವಾತಾವರಣ ಬಹುತೇಕ ಜಲಜನಕ ಮತ್ತು ಹೀಲಿಯಂ ಮುಂತಾದವುಗಳಿಂದಲೇ ಕೂಡಿದೆ. ಮಂಗಳ ಗ್ರಹಕ್ಕೆ ಸಮೀಪದಲ್ಲಿರುವ ಈ ಗ್ರಹ, ಸೌರ ಮಂಡಲದ ಐದನೇ ಗ್ರಹವಾಗಿದೆ. ಗುರುಗ್ರಹದ ಕಕ್ಷೆ ಸೇರುವ ಜುನೋ ಸ್ಪೇಸ್​ಕ್ರಾಫ್ಟ್ ಆ ಗ್ರಹದಲ್ಲಿ ನೀರಿನ ಅಂಶ ಎಷ್ಟಿದೆ ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡಲಿದೆ. ಸೌರ ಮಂಡಲ ರಚನೆ ಹಾಗೂ ಗುರುಗ್ರಹದ ರಚನೆ ಹೇಗಾಯ್ತು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಸ್ಪೇಸ್​ಕ್ರಾಫ್ಟ್ ಕಳುಹಿಸುವ ಚಿತ್ರ ಹಾಗೂ ದತ್ತಾಂಶಗಳು
ಸಹಕಾರಿಯಾಗಲಿವೆ.

ಸ್ಪೇಸ್​ಕ್ರಾಫ್ಟ್​ನಲ್ಲಿರುವ ಉಪಕರಣಗಳು

ಗುರುತ್ವ/ರೇಡಿಯೋ ಸಿಸ್ಟಂ – ಗುರುಗ್ರಹದ ಗಾತ್ರವನ್ನು ಅಂದಾಜಿಸುವುದು
ಮೈಕ್ರೋವೇವ್ ರೇಡಿಯೋ ಮೀಟರ್ – ಉಷ್ಣತೆಯನ್ನು ಅಳತೆ ಮಾಡುವುದು
ಮ್ಯಾಗ್ನೋಮೀಟರ್ – ಮ್ಯಾಗ್ನೆಟಿಕ್ ಶಕ್ತಿಯನ್ನು ಅಂದಾಜಿಸುವುದು
ಪಾರ್ಟಿಕಲ್ ಡಿಟೆಕ್ಟರ್ – ಸಂಚಿತ ಶಕ್ತಿ ಹೊಂದಿದ ಕಣಗಳ ಶಕ್ತಿಯ ಅಳತೆ
ಪ್ಲಾಸ್ಮಾ-ರೇಡಿಯೋ ತರಂಗಗಳನ್ನು ಅಳತೆ ಮಾಡುವ ಉಪಕರಣ
ಸ್ಪೆಕ್ರೋಗ್ರಾಫ್ – ಅಲ್ಟ್ರಾವಯೋಲೆಟ್ ಉರ್ತÕನದ ಮಾಪಕ
ಇನ್​ಫ್ರಾರೆಡ್ ಮ್ಯಾಪರ್ – ಉದಯ ಕಾಲದ ಚಿತ್ರ ಸಂಗ್ರಹಿಸುವಂಥದ್ದು
ಬಣ್ಣದ ಕ್ಯಾಮರಾ – ಗುರುಗ್ರಹದ ಧ್ರುವಗಳ ಚಿತ್ರ ಸೆರೆಹಿಡಿವಂಥದ್ದು

No comments:

Post a Comment