Saturday 9 July 2016

ಉದ್ಯೋಗಖಾತರಿ ಅನುಷ್ಠಾನದಲ್ಲಿ ಬೆಳಗಾವಿ ನಂ.1


ಮಹಾತ್ಮಗಾಂಧೀಜಿರಾಷ್ಟ್ರೀಯಗ್ರಾಮೀಣಉದ್ಯೋಗಖಾತರಿ (ಎಂಎನ್​ಆರ್​ಇಜಿ) ಯೋಜನೆ ಅನುಷ್ಠಾನ ಹಾಗೂ ಮಾನವದಿನಗಳ ಸೃಷ್ಟಿಯಲ್ಲಿ ಬೆಳಗಾವಿ ಜಿಲ್ಲಾಪಂಚಾಯಿತಿ ರಾಜ್ಯದಲ್ಲಿ ನಂ.1 ಸ್ಥಾನದಲ್ಲಿದೆ.9 ತಿಂಗಳ ಅವಧಿಯಲ್ಲಿ 80.28 ಕೋಟಿರೂ.ಖರ್ಚುಮಾಡಿ, ಅತಿಹೆಚ್ಚು ಮಾನವದಿನ ಅಂದರೆ, 27.47ಲಕ್ಷದಿನಗಳನ್ನುಸೃಷ್ಟಿಮಾಡಿದೆ. 69.37 ಕೋಟಿರೂ. ವ್ಯಯಿಸಿ, 24.05 ಲಕ್ಷ ಮಾನವದಿನ ಸೃಷ್ಟಿಸಿರುವ ರಾಯಚೂರು ಜಿಲ್ಲೆರಾಜ್ಯಕ್ಕೆ 2ನೇಸ್ಥಾನದಲ್ಲಿದೆ. 59.40 ಕೋಟಿರೂ
. ಖರ್ಚುಮಾಡಿ, 18.75 ಲಕ್ಷ ಮಾನವದಿನ ನಿರ್ವಿುಸಿರುವ ರಾಮನಗರ ಜಿಲ್ಲೆ ತೃತೀಯಸ್ಥಾನದಲ್ಲಿದೆ. 2014-15ನೇಸಾಲಿನಲ್ಲಿ ಬೆಳಗಾವಿ ಮೂರನೇಸ್ಥಾನದಲ್ಲಿತ್ತು. ಚಿತ್ರದುರ್ಗ ಜಿಲ್ಲೆ ಮೊದಲನೇ ಸ್ಥಾನದಲ್ಲಿತ್ತು.

ಉದ್ಯೋಗಖಾತ್ರಿಯೋಜನೆಯಡಿ 2015-16ನೇಸಾಲಿನಲ್ಲಿ 9 ತಿಂಗಳ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸ ಹಾಗೂ ಮಾಡಿರುವ ಪ್ರಗತಿಯನ್ನುಅವಲೋಕಿಸಿದಾಗ ಕೇವಲ 16,348 ಮಾನವದಿನಗಳನ್ನು ನಿರ್ಮಾಣ ಮಾಡುವುದರ ಮೂಲಕ ಬೆಂಗಳೂರು ನಗರ ಜಿಲ್ಲೆ ಕೊನೆಯಸ್ಥಾನದಲ್ಲಿದೆ.

2.51 ಕೋಟಿ ಮಾನವದಿನ ನಿರ್ಮಾಣ ರಾಜ್ಯದಲ್ಲಿ 30 ಜಿಲ್ಲೆಗಳಲ್ಲಿ 9 ತಿಂಗಳಅವಧಿಯಲ್ಲಿ 2.51 ಕೋಟಿ ಮಾನವದಿನಗಳನ್ನು ಸೃಷ್ಟಿಸಲಾಗಿದೆ

ಇಲ್ಲಿಯವರೆಗೆ 940.85 ಕೋಟಿರೂ.ಗಳನ್ನು ಉದ್ಯೋಗ ಖಾತರಿ ಯೋಜನೆ ಅನುಷ್ಠಾನಕ್ಕಾಗಿ ಖರ್ಚುಮಾಡಲಾಗಿದೆ. ಉದ್ಯೋಗ ಖಾತರಿಯ ಕೂಲಿ ಹಣವನ್ನು ಈಗಾಗಲೇ ಇಲೆಕ್ಟ್ರಾನಿಕ್ನಿ ಧಿ ನಿರ್ವಹಣೆಪದ್ಧತಿ (ಇಎಫ್​ಎಂಎಸ್) ಮೂಲಕ ಆಯಾಫಲಾನುವಿಗಳ ಬ್ಯಾಂಕ್ಖಾ ತೆಗೆ ಸಂದಾಯ ಮಾಡುತ್ತಿರುವುದರಿಂದ ಮಧ್ಯವರ್ತಿಗಳ ಹಾವಳಿ ಕಡಿಮೆಯಾಗಿದೆ. 


No comments:

Post a Comment