Saturday, 9 July 2016

ಈಗ ಚೀನಾ ಭಾರತಕ್ಕೆ ತಲೆಬಾಗಲೇಬೇಕು!

ಹೊಸದಿಲ್ಲಿ: ಕಾಲ ಯಾವತ್ತೂ ಒಂದೇ ರೀತಿ ಇರುವುದಿಲ್ಲ ಎನ್ನುವುದಕ್ಕೆ ಚೀನಾದ ಸ್ಥಿತಿ ಉತ್ತಮ ಉದಾಹರಣೆ.ಎನ್‌ಎಸ್‌ಜಿ ಸೇರಲು ಭಾರತ ನಡೆಸಿದ ಪ್ರಯತ್ನ ವಿಫಲವಾಗಿದೆ. ಬದ್ಧ ವೈರಿ ಚೀನಾ ಅದರ ಸದಸ್ಯ.ಎಂಟಿಸಿಆರ್‌ ಸೇರಲು ಚೀನಾ ನಡೆಸುತ್ತಿರುವ ಪ್ರಯತ್ನ ಸಫಲವಾಗಿಲ್ಲ. ಭಾರತ ಈಗ ಅದರ ಸದಸ್ಯ.ಚೀನಾಕ್ಕೆ ಈಗ ಶತಾಯಗತಾಯ ಎಂಟಿಸಿಆರ್‌ ಸೇರಲೇಬೇಕಾದ ಪರಿಸ್ಥಿತಿ. ಆದರೆ, ಎನ್‌ಎಸ್‌ಜಿ ಪ್ರವೇಶಕ್ಕೆ ಅಡ್ಡಗೋಡೆಯಾಗಿ ನಿಂತ ಕಾರಣಕ್ಕೆ ಭಾರತ ತಾನೂ ಚೀನಾದ
ವಿರುದ್ಧ ನಿಲ್ಲುವುದು ಖಂಡಿತ.ಹೀಗಾಗಿ ಚೀನಾ, ನಮಗೆ ಎಂಟಿಸಿಆರ್‌ ಸದಸ್ಯತ್ವಕ್ಕೆ ಬೆಂಬಲ ಕೊಡಿ, ನಾವು ಎನ್‌ಎಸ್‌ಜಿ ಸದಸ್ಯತ್ವಕ್ಕೆ ಬೆಂಬಲ ಕೊಡುತ್ತೇವೆ ಎಂದು ತಲೆಬಾಗಬೇಕಾದ ಅನಿವಾರ್ಯತೆ ಬಂದೊದಗಿದೆ.
ಚೀನಾ 2004ರಲ್ಲಿ ಎಂಟಿಸಿಆರ್‌ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿತ್ತು. ಆದರೆ, ಅದರ ನಿಶಸ್ತ್ರೀಕರಣ ದಾಖಲೆ ಅಪ್ರಾಮಾಣಿಕವಾಗಿದೆ ಎಂದು ಭಾವಿಸಿದ ಸದಸ್ಯ ರಾಷ್ಟ್ರಗಳು ಅವಕಾಶ ನೀಡಲಿಲ್ಲ. ಚೀನಾ ಈಗಲೂ ಖಂಡಾಂತರ ಕ್ಷಿಪಣಿ ಅಭಿವೃದ್ಧಿಗಾಗಿ ಸೂಕ್ಷ್ಮ ತಂತ್ರಜ್ಞಾನವನ್ನು ಉತ್ತರ ಕೊರಿಯಾದಂಥ ರಾಷ್ಟ್ರಗಳಿಗೆ ಒದಗಿಸುತ್ತಿದೆ ಎಂಬ ಕಳವಳ ಎಂಟಿಸಿಆರ್‌ ಸದಸ್ಯ ರಾಷ್ಟ್ರಗಳಿಗಿದೆ.
2004ರಲ್ಲಿ ಅಮೆರಿಕ, ಚೀನಾದ ಎಂಟು ಕಂಪನಿಗಳ ಮೇಲೆ ಅಣ್ವಸ್ತ್ರ ಪ್ರಸರಣ ತಡೆ ನಿರ್ಬಂಧಗಳನ್ನು ಹಾಕಿತ್ತು. ಅಷ್ಟಾದರೂ, ಚೀನಾ ಅದೇ ವರ್ಷ ಎನ್‌ಎಸ್‌ಜಿ ಸದಸ್ಯತ್ವ ಪಡೆಯಲು ಸಫಲವಾಗಿತ್ತು.
ಎನ್‌ಎಸ್‌ಜಿಗೆ ಭಾರತ ಅರ್ಹ: ಅಮೆರಿಕ
ಹೊಸದಿಲ್ಲಿ: ಎನ್‌ಎಸ್‌ಜಿ ಸೇರಲು ಭಾರತ ಅರ್ಹ ರಾಷ್ಟ್ರ. ಸೋಲ್‌ ಅಧಿವೇಶನದಲ್ಲಿ ಅದಕ್ಕೆ ಅವಕಾಶ ಸಿಗದಿರುವುದು ಅಮೆರಿಕಕ್ಕೆ ನಿರಾಶೆಯಾಗಿದೆ. ಮುಂದಿನ ದಿನಗಳಲ್ಲಿ ಭಾರತ ಸೇರ್ಪಡೆ ವಿಷಯದಲ್ಲಿ ಅಮೆರಿಕದ ಬೆಂಬಲ ಮುಂದುವರಿಯಲಿದೆ ಎಂದು ಭಾರತದಲ್ಲಿರುವ ಅಮೆರಿಕ ರಾಯಭಾರಿ ರಿಚರ್ಡ್‌ ವರ್ಮಾ ಹೇಳಿದ್ದಾರೆ.
ದಿಲ್ಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜಾಗತಿಕ ಸಂಸ್ಥೆಗಳಲ್ಲಿ ಭಾರತದ ಉಪಸ್ಥಿತಿಗೆ ಅಮೆರಿಕ ಪ್ರಬಲ ಬೆಂಬಲ ನೀಡುತ್ತಾ ಬಂದಿದೆ. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ನೀಡುವುದನ್ನೂ ಅಮೆರಿಕ ಬೆಂಬಲಿಸಿದೆ ಎಂದು ಹೇಳಿದರು.
ಭಾರತವನ್ನು ತಡೆದದ್ದು ನಾವು:ಪಾಕ್‌
ಇಸ್ಲಾಮಾಬಾದ್‌: ಪಾಕಿಸ್ತಾನದ ತೀವ್ರತರ ರಾಯಭಾರ ಪ್ರಯತ್ನಗಳು, ಪ್ರಧಾನಿ ನವಾಜ್‌ ಶರೀಫ್‌ ಅವರು 17 ರಾಷ್ಟ್ರಗಳಿಗೆ ಪತ್ರ ಬರೆದದ್ದರಿಂದ ಭಾರತದ ಎನ್‌ಎಸ್‌ಜಿ ಪ್ರವೇಶಕ್ಕೆ ತಡೆ ಬಿತ್ತು ಎಂದು ವಿದೇಶಾಂಗ ವ್ಯವಹಾರಗಳಲ್ಲಿ ಪ್ರಧಾನಿಗೆ ಸಲಹೆಗಾರರಾಗಿರುವ ಸರ್ತಾಜ್‌ ಅಜೀಜ್‌ ಹೇಳಿದ್ದಾರೆ.

No comments:

Post a Comment