Saturday 9 July 2016

ಭಾರತ-ಆಫ್ರಿಕಾ ನಡುವೆ ಭದ್ರತೆ, ಗಣಿಗಾರಿಕೆ ಒಪ್ಪಂದ


ಪ್ರಿಟೋರಿಯಾ: ತಮ್ಮ ಸಾಂಪ್ರದಾಯಿಕ ಸಂಬಂಧಗಳನ್ನು ಇನ್ನಷ್ಟು ಸುಭದ್ರಗೊಳಿಸಿಸುವುದರ ಜೊತೆಗೆ ಉತ್ಪಾದನೆ, ರಕ್ಷಣೆ, ಗಣಿಗಾರಿಕೆ ಮತ್ತು ಖನಿಜ ಕ್ಷೇತ್ರಗಳಲ್ಲಿ ಸಂಬಂಧಗಳನ್ನು ಹೆಚ್ಚಿಸಲು ಮುಂದಾಗಿದೆ. ಅಲ್ಲದೇ ಭಯೋತ್ಪಾದನೆ ಮತ್ತು ಬಹುಪಕ್ಷೀಯ ಸಮಸ್ಯೆಗಳನ್ನು ಸಕ್ರಿಯವಾಗಿ ನಿವಾರಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.ದಕ್ಷಿಣ ಆಫ್ರಿಕಾ ಅಧ್ಯಕ್ಷ ಜಾಕೋಬ್ ಝುಮಾ ಜೊತೆ ಮಾತುಕತೆ ನಡೆಸಿದ ಪ್ರಧಾನಿ ಮೋದಿ, ಭಾರತ ರಕ್ಷಣಾ ಉಪಕರಣಗಳ
ಉತ್ಪಾದನೆಗೆ ಉತ್ತಮ ವೇದಿಕೆಯಾಗಿದೆ. ಎರಡೂ ರಾಷ್ಟ್ರಗಳು ಪರಸ್ಪರ ಅಗತ್ಯತೆಗಳನ್ನು ಪೂರೈಸುದು ಮಾತ್ರವಲ್ಲದೇ ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳನ್ನು ನಿಭಾಯಿಸಲು ಸಹಕರಿಸುವುಸುದಾಗಿ ಹೇಳಿದ್ದಾರೆ.

ವ್ಯಾಪಾರ ಮತ್ತು ಬಂಡವಾಳ ಹೂಡಿಕೆ, ವಿಶೇಷವಾಗಿ ಖನಿಜ ಮತ್ತು ಗಣಿಗಾರಿಕೆ, ರಾಸಾಯನಿಕ ಮತ್ತು ಔಷಧ, ಉತ್ಪಾದನೆ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರ ಅಗತ್ಯ ಎಂದು ಮೋದಿ ಹೇಳಿದ್ದಾರೆ.

ಭಾರತ ರಕ್ಷಣಾ ವಲಯದ ಸಂಪೂರ್ಣ ರೂಪಾಂತರಗೊಳ್ಳುತ್ತಿದ್ದು, ರಕ್ಷಣಾ ಕ್ಷೇತ್ರದಲ್ಲಿ ಅವಕಾಶಗಳನ್ನು ಕಲ್ಪಿಸುತ್ತಿದೆ. ಭಾರತದ ಕಂಪೆನಿಗಳು ರಕ್ಷಣಾ ಉಪಕರಣಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸುವ ಸಾಮರ್ಥ ಹೊಂದಿವೆ ಎಂದು ಮೋದಿ ಹೇಳಿದ್ದಾರೆ.

ನ್ಯೂಕ್ಲಿಯರ್ ಸಪ್ಲಯರ್‍ಸ್ ಗ್ರೂಪ್‌ಗೆ ಭಾರತದ ಸದಸ್ಯತ್ವಕ್ಕೆ ಆಫ್ರಿಕಾದ ಬೆಂಬಲಕ್ಕೆ ಧನ್ಯವಾದ ಸೂಚಿಸಿದ ಪ್ರಧಾನಿ ಮೋದಿ, ಆಫ್ರಿಕಾ ಹಾಗೂ ಇತರ ಸ್ನೇಹಿ ರಾಷ್ಟ್ರಗಳ ಸಕ್ರಿಯ ಸಮರ್ಥನೆಯನ್ನು ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.




No comments:

Post a Comment