Sunday 17 July 2016

ದೇಹಬಲದಿಂದಲೇ ಪ್ರವಾಹ ತಡೆದ ಚೀನಾ ಸೈನಿಕರು!


 ಬೀಜಿಂಗ್: ಪುರಾಣದಲ್ಲಿ ಶಿವನು ಸಹಸ್ರಬಾಹುವಾಗಿ ಹರಿಯುವ ನದಿಗೆ ತನ್ನ ಕೈಗಳನ್ನು ಬಳಸಿ ತಡೆಯೊಡ್ಡಿದ್ದ ಎಂಬ ವಿಚಾರವನ್ನು ನಾವು ಕೇಳಿದ್ದೇವೆ. ಇದೀಗ ಚೀನಾದ ಸೈನಿಕರು ಕೂಡಾ ಪ್ರವಾಹಕ್ಕೆ ತಮ್ಮ ದೇಹವನ್ನೇ ಒಡ್ಡಿ ಸಾವಿರಾರು ಜನರು ಮತ್ತು ಬೆಳೆಯನ್ನು ರಕ್ಷಿಸಿದ್ದಾರೆ. ಆಗ್ನೇಯ ಚೀನಾದ ಜಿಯುಜಿಯಾಂಗ್ ಪ್ರಾಂತ್ಯದಲ್ಲಿ ಬೊಯಾಂಗ್ ಲೇಕ್​ನ ಅಣೆಕಟ್ಟಿನ ಪ್ರವಾಹದಿಂದ ಏಕಾಏಕಿ ಉಕ್ಕಿ ಹರಿದ ನೀರಿಗೆ 16 ಸೈನಿಕರು ತಮ್ಮ ದೇಹವನ್ನೇ ಒಡ್ಡಿ, ಕಾಲುವೆಯಲ್ಲಿ ನೀರು
ನುಗ್ಗುವುದನ್ನು ತಡೆದಿದ್ದಾರೆ. ಇದರಿಂದ 6000 ಗ್ರಾಮಸ್ಥರು ಮತ್ತು 5000 ಎಕರೆಯಲ್ಲಿ ಬೆಳೆದಿದ್ದ ಬೆಳೆ ಸುರಕ್ಷಿತವಾಗಿದ್ದು, ಪ್ರವಾಹಕ್ಕೆ ಸಿಲುಕಿ ಹಾನಿಯಾಗುವುದು ತಪ್ಪಿದೆ. ನೀರು ನುಗ್ಗುತ್ತಿರುವುದನ್ನು ಕಂಡ ಕೂಡಲೇ ತಡಮಾಡದೆ ಸೈನಿಕರು ಒತ್ತೊತ್ತಾಗಿ ನಿಂತು ಅಲ್ಲಿ ಮಾನವ ತಡೆಗೋಡೆ ನಿರ್ವಿುಸಿದ್ದಾರೆ. ಮರಳಿನ ಚೀಲವನ್ನು ಪೇರಿಸಿ ತಡೆ ನಿರ್ವಿುಸಿದ್ದರೂ, ಅದು ಸಾಲದಾದಾಗ ಸೈನಿಕರೇ ಅದನ್ನು ಒತ್ತಿ ಹಿಡಿದು ಗಟ್ಟಿಯಾಗಿ ಸುಮಾರು ಆರು ಗಂಟೆ ನಿಂತು ಪ್ರವಾಹದಿಂದ ಜನರನ್ನು ರಕ್ಷಿಸಿದ್ದಾರೆ. ಸೈನಿಕರ ಈ ಸಾಹಸಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಕಷ್ಟಪಟ್ಟು ಬೆಳೆಸಿದ್ದ ಬೆಳೆಯೂ ಉಳಿದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.





No comments:

Post a Comment