Friday, 8 July 2016

ಮೈಸೂರು ವಿವಿಯ ಹೆಮ್ಮೆಯ ವಿದ್ಯಾರ್ಥಿ ಭಾರತ ರತ್ನ ಪುರಸ್ಕೃತ ಸಿ ಎನ್ ಆರ್ ರಾವ್

ಮೈಸೂರು: 2013ರಲ್ಲಿ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ ಭಾರತ ರತ್ನ ಪುರಸ್ಕೃತ ಹಿರಿಯ ವಿಜ್ಞಾನಿ ಪ್ರೊ ಸಿ.ಎನ್.ಆರ್. ರಾವ್ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಎಂಬುದು ಹೆಮ್ಮೆಯ ವಿಷಯ.  ಮೈಸೂರು ವಿಶ್ವವಿದ್ಯಾಲಯದಲ್ಲಿ 1951ರಲ್ಲಿ ರಾವ್ ತಮ್ಮ ವಿಜ್ಞಾನ ಪದವಿ ಅಧ್ಯಯನವನ್ನು ಮುಗಿಸಿದರು.  ಜೂನ್ 30, 1934ರಲ್ಲಿ ಜನಿಸಿದ ಪ್ರೊ.ಸಿ.ಎನ್.ಆರ್. ರಾವ್ ಅವರ ಪೂರ್ಣ ಹೆಸರು ಚಿಂತಾಮಣಿ ನಾಗೇಶ ರಾಮಚಂದ್ರರಾವ್.  ಸಿ.ಎನ್.ಆರ್. ರಾವ್ ಅವರ ತಂದೆ ಹನುಮಂತ
ನಾಗೇಶ್ ರಾವ್, ತಾಯಿ ಹನುಂತಮ್ಮ ನಾಗಮ್ಮ ರಾವ್.

rao
ಮೈಸೂರು ವಿವಿಯಲ್ಲಿ ಅಧ್ಯಯನ ಮಾಡಿದ ಬಳಿಕ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಕಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಾಧ್ಯಪಕರಾಗಿ ರಾವ್ 1963ರಲ್ಲಿ ವೃತ್ತಿ ಜೀವನ ಆರಂಭಿಸಿದರು. ರಸಾಯನ ಶಾಸ್ತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಪ್ರೊ.ಸಿ.ಎನ್.ಆರ್. ರಾವ್ ಅವರು 1, 4000 ರಿಸರ್ಚ್ ಪೇಪರ್ ಮತ್ತು 45 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ರಾವ್ ಬೆಂಗಳೂರಿನಲ್ಲಿರುವ ಜವಾಹರ್ ಲಾಲ್ ನೆಹರು ತಾರಾಲಯದ ಸಂಸ್ಥಾಪಕ ಅಧ್ಯಕ್ಷರು ಹೌದು. ಪ್ರಾಧ್ಯಪಕರಾಗಿ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಾದ ಆಕ್ಸಫರ್ಡ್, ಕೇಂಬ್ರಿಡ್ಜ್ ಗಳಲ್ಲಿ ರಾವ್ ಉಪನ್ಯಾಸ ನೀಡಿದ್ದಾರೆ. ರಸಾಯನಶಾಸ್ತ್ರ ವಿಷಯಕ್ಕೆ ಸಿ.ಎನ್.ಆರ್.ರಾವ್ ಬಹಳಷ್ಟು ಕೊಡುಗೆ ನೀಡಿದ್ದಾರೆ. ಯು.ಎಸ್.ನ್ಯಾಷನಲ್ ಅಕಾಡಮೆ ಪ್ರಶಸ್ತಿ, ಅಮೆರಿಕಾ ಅಕಾಡಮಿಯ ವಿಜ್ಞಾನಿ ಪ್ರಶಸ್ತಿಯನ್ನು ರಾವ್ ಮುಡಿಗೇರಿಸಿಕೊಂಡಿದ್ದಾರೆ

ಹಲವಾರು ದ್ವಿಮಿತೀಯ ಕೃತಕ ರಾಸಾಯನಿಕ ವಸ್ತುಗಳನ್ನು ಸಂಯೋಜಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ರಾವ್ ಅತಿವಾಹಕತೆ (ಸೂಪರ್ ಕಂಡಕ್ಟಿವಿಟಿ) ಹಾಗು ನ್ಯಾನೋವಿಜ್ನಾನ ಕ್ಷೇತ್ರದಲ್ಲಿ ಅಪಾರ ಸಂಶೋಧನೆ ನಡೆಸಿದ್ದಾರೆ. 42ಕ್ಕೂ ಹೆಚ್ಚು ವೈಜ್ನಾನಿಕ ಪುಸ್ತಕಗಳು ಹಾಗು ೧೫೦೦ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ರಾವ್ ಬರೆದಿದ್ದಾರೆ. ಇವರ ಜೊತೆ ಕೆಲಸ ಮಾಡಿದ 140ಕ್ಕೂ ಹೆಚ್ಚು ಜನ ಪಿಎಚ್.ಡಿ. ಪದವಿ ಗಳಿಸಿದ್ದಾರೆ. ಇವರ ಲೇಖನಗಳನ್ನು ಇದುವರೆಗೂ 40 ಸಾವಿರಕ್ಕೂ ಹೆಚ್ಚುಬಾರಿ ಪ್ರಸ್ತಾಪಿಸಲಾಗಿದೆ. ಇವರ ಸಂಶೋಧನಾ ಫಲಿತಾಂಶವನ್ನು ಆಧರಿಸಿ, ಅನೇಕ ರಾಷ್ಟ್ರಗಳು ಹಲವು ಕೈಗಾರಿಕಾ ಉತ್ಪನ್ನಗಳನ್ನು ಪಡೆಯುತ್ತಿವೆ. ರಾವ್ ಅವರು ತಮ್ಮ ಸಂಶೋಧನೆಗೆ ಸ್ವಾಮ್ಯ ಹಕ್ಕುಗಳನ್ನು (ಪೇಟೆಂಟ್)(Open source)ಪಡೆಯದೆ ಮುಕ್ತವಾಗಿಟ್ಟಿದ್ದಾರೆ.

ಕುಟುಂಬ

ಪ್ರೊ.ಸಿ.ಎನ್‌.ಆರ್‌ ರಾವ್‌ ಅವರದು ‘ವಿಜ್ಞಾನ ಕುಟುಂಬ’. ಅವರ ಪತ್ನಿ ಇಂದುಮತಿ ರಾವ್‌ ಈ ಹಿಂದೆ ನಗರದ ಎಂ.ಇ.ಎಸ್‌ ಕಾಲೇಜಿನಲ್ಲಿ ಶಿಕ್ಷಕಿಯಾಗಿದ್ದರು. ಪ್ರಸ್ತುತ ಅವರು ಜವಾಹರ್‌ಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಮಕ್ಕಳಿಗೆ ವಿಜ್ಞಾನ ಆಸಕ್ತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪುತ್ರ, ಸಂಜಯ್‌ ರಾವ್‌ ಕೂಡ ಜವಾಹರ್‌ಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪುತ್ರಿ, ಸುಚಿತ್ರಾ ರಾವ್‌ ಅವರ ಪತಿ, ಕೆ.ಎನ್‌. ಗಣೇಶ್‌ ಪುಣೆಯ ವಿಜ್ಞಾನ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕರು.

ಪ್ರಶಸ್ತಿಗಳು ಹಾಗೂ ಗೌರವಗಳು
ಭಾರತ ಸರಕಾರ 16ರಂದು ನವಂಬರ್ 2013ರಂದು ಇವರಿಗೆ ಭಾರತದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ಘೋಷಿಸಿತು. ಅಮೆರಿಕ ಸಂಯುಕ್ತ ಸಂಸ್ಥಾನ ದ ನ್ಯಾಶನಲ್ ಆಕಾಡೆಮಿ ಆಪ್ ಸೈನ್ಸ್ ಹಾಗು ಅಮೆರಿಕನ್ ಆಕಾಡೆಮಿ ಆಪ್ ಆರ್ಟ್ ಅಂಡ್ ಸೈನ್ಸ್ ನ ಸದಸ್ಯರಾಗದ್ದಾರೆ.

ಲಂಡನ್ನ ರಾಯಲ್ ಸೊಸೈಟಿಯ ಸದಸ್ಯರಾಗಿದ್ದಾರೆ.  ಫ್ರಾನ್ಸ್ ಸರಕಾರದ ಅತ್ಯುನ್ನತ ನಾಗರಿಕ ಪುರಸ್ಕಾರ ನೀಡಲಾಗಿದೆ. ಯುನೆಸ್ಕೊ, ಪ್ಯಾರಿಸ್ನಿಂದ ಕೊಡಲಾಗುವ ಆಲ್ಬರ್ಟ್_ಐನ್ಸ್ಟನ್ ಚಿನ್ನದ ಪದಕ ಪಡೆದಿದ್ದಾರೆ.
ಪದ್ಮಶ್ರೀ ಹಾಗೂ ಪದ್ಮವಿಭೂಷಣ ಪ್ರಶಸ್ತಿಗಳು ಇವರಿಗೆ ಸಂದಿದೆ.  ಕರ್ನಾಟಕ ಸರಕಾರ ಕರ್ನಾಟಕ ರತ್ನ ಪ್ರಶಸ್ತಿಯನ್ನಿತ್ತು ಗೌರವಿಸಿದೆ. ಇವರಿಗೆ ಈವರೆಗೆ 37 ಗೌರವ ಡಾಕ್ಟರೇಟ್ ನೀಡಲಾಗಿದೆ.


No comments:

Post a Comment