Friday, 8 July 2016

ಯೂರೋಪ್ ಸಂಪತ್ತು ಸೃಷ್ಟಿ ಕುಸಿತ : ಭಾರತದಲ್ಲಿ ಶೇ.400 ಹೆಚ್ಚಳ

 ನ್ಯೂಯಾರ್ಕ್: ಕಳೆದೊಂದು ದಶಕದಲ್ಲಿ ಯೂರೋಪ್ ಒಕ್ಕೂಟದ ಜನರ ಸರಾಸರಿ ಸಂಪತ್ತು ಶೇ.5ರಷ್ಟು ಕುಗ್ಗಿದೆ. ಅಂದರೆ, 2005-2015ರ ನಡುವೆ ಸಂಪತ್ತು ವೃದ್ದಿಯಾಗುವ ಬದಲು ಶೇ.5ರಷ್ಟು ಇಳಿದಿದೆ. ಇದೇ ವೇಳೆ ಭಾರತದ ಜನರ ಸರಾಸರಿ ಸಂಪತ್ತು ಶೇ.400ರಷ್ಟು ಏರಿಕೆ ಆಗಿದೆ.ನ್ಯೂ ವರ್ಲ್ಡ್ ವೆಲ್ತ್ ಸಮೀಕ್ಷೆ ಪ್ರಕಾರ ಯೂರೋಪ್ ಒಕ್ಕೂಟದ ಜನರ ಆಸ್ತಿ ಶೇ.5ರಷ್ಟು ಕುಗ್ಗಿದೆ. ಆಷ್ಟ್ರೇಲಿಯಾ ಶೇ.100ರಷ್ಟು ಕೆನಡಾ ಶೇ.50 ರಷ್ಟು ಹೆಚ್ಚಳವಾಗಿದೆ. ಯೂರೋಪ್ ಒಕ್ಕೂಟದ ಪೊಲಾಂಡ್, ಮಾಲ್ಟಾ
ದೇಶಗಳು ಸಂಪತ್ತು ಸೃಷ್ಟಿಯಲ್ಲಿ ಉತ್ತಮ ಸಾಧನೆ ಮಾಡಿವೆ. ಆದರೆ, ಪಶ್ಚಿಮ ಯೂರೋಪ್ ಮತ್ತು ದಕ್ಷಿಣ ಯೋರೋಪ್ ರಾಷ್ಟ್ರಗಳಾದ ಜರ್ಮನಿ, ಫ್ರಾನ್ಸ್, ಇಟಲಿ ಮತ್ತು ಸ್ಪೈನ್ ಹಿಂದೆ ಬಿದ್ದಿವೆ. ಯೂರೋಪ್ ಪ್ರಾಥಮಿಕ ಉದ್ಯೋಗ ವಲಯವು ಉದಯಿಸುತ್ತಿರುವ ರಾಷ್ಟ್ರಗಳಾದ ಭಾರತ, ಚೀನಾ, ಶ್ರೀಲಂಕಾ, ಫಿಲಿಫೈನ್ಸ್ ಸೇರಿದಂತೆ ಏಷಿಯಾ ಪಾಲಾಗುತ್ತಿದೆ ಎಂದು ವರದಿ ಹೇಳಿದೆ.

ಸಂಪತ್ತು ಕುಸಿಯಲು ಪ್ರಮುಖ ಕಾರಣ ಎಂದರೆ ಹೆಚ್ಚುತ್ತಿರುವ ಆದಾಯ ತೆರಿಗೆ, ನಗರ ಪ್ರದೇಶಗಳಲ್ಲಿ ಧಾರ್ಮಿಕ ಕ್ಷೋಭೆ ಮತ್ತು ಗ್ರೀಸ್ ಮಾದರಿಯಲ್ಲೇ ಹೆಚ್ಚುತ್ತಿರುವ ಪಿಂಚಣಿ ಹೊರೆಯನ್ನು ಸಮರ್ಥವಾಗಿ ನಿಭಾಯಿಸಲಾಗದೇ ಇರುವುದು. 2008ರಲ್ಲಾದ ಜಾಗತಿಕ ಆರ್ಥಿಕ ಹಿಂಜರಿತ ಮುಖ್ಯವಾಗಿ ವಸತಿ ವಲಯದಲ್ಲಾದ ಹಿಂಜರಿತದ ಪರಿಣಾಮದ ತೀವ್ರತೆ ಇನ್ನೂ ತಗ್ಗಿಲ್ಲ. ಇದೂ ಪ್ರಮುಖ ಕಾರಣ ಎಂದು ವರದಿ ಹೇಳಿದೆ. ಭಾರತ, ಚೀನಾ, ವಿಯೆಟ್ನಾಮ್ ರಾಷ್ಟ್ರಗಳ ನಾಗರಿಕರ ಸಂಪತ್ತು ಶೇ.400ರಷ್ಟು ಹೆಚ್ಚಳವಾಗಿದೆ. ಯೂರೋಪ್ ನಾಗರಿಕ ಸರಾಸರಿ ತಲಾ ಆದಾಯ 86000 ಡಾಲರ್ ಇದೆ.

No comments:

Post a Comment