Saturday, 9 July 2016

8 ವಾಣಿಜ್ಯ ಒಪ್ಪಂದಗಳಿಗೆ ಸಾಕ್ಷಿಯಾದ ಸಿಇಒ ಸಭೆ

 ಪ್ರಿಟೋರಿಯಾ (ದ.ಆಫ್ರಿಕಾ) : ಭಾರತ ಹಾಗೂ ದಕ್ಷಿಣ ಆಫ್ರಿಕಾ ದೇಶಗಳ ಭಾರಿ ಉದ್ಯಮಿಗಳು ಇಲ್ಲಿ ಆಯೋಜನೆಗೊಂಡಿದ್ದ ಸಿಇಒಗಳ ಸಭೆಯಲ್ಲಿ ಎಂಟು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಎರಡೂ ರಾಷ್ಟ್ರಗಳ ಸೌಹಾರ್ದ ಮತ್ತು ಸಹಕಾರ ಸಂಬಂಧ ವೃದ್ಧಿಗೆ ಈ ಒಪ್ಪಂದ ಮಹತ್ವದ ಮೈಲಿಗಲ್ಲಾಗಲಿದೆ.ಹಿಂದೂಸ್ಥಾನ್ ಜಿಂಕ್ ಲಿಮಿಟೆಡ್ ಮತ್ತು ಮಿನೋವಾ ಆಫ್ರಿಯಾ ಕಂಪೆನಿಗಳ ನಡುವೆ ಭಾರತದಲ್ಲಿ ಗಣಿಗಾರಿಕೆಗೆ ಸಂಬಂಧಿಸಿದಂತೆ 2 ಒಪ್ಪಂದ, ಆರೋಗ್ಯ ಮತ್ತು ವಿಮಾ ಕ್ಷೇತ್ರದಲ್ಲಿ ಎಂಎಂಐ
ಹೋಲ್ಡಿಂಗ್ಸ್ -ಆದಿತ್ಯಾ ಬಿರ್ಲಾ, ದೊಡ್ಡ ಪ್ರಮಾಣದ ನೀರು ಸರಬರಾಜು ನಿರ್ವಹಣೆ ಮತ್ತು ತ್ಯಾಜ್ಯ ಜಲ ಸಂಸ್ಕರಣಾ ಕ್ಷೇತ್ರ ಸೇರಿದಂತೆ ಭದ್ರತಾ ಉಪಕರಣ ಉತ್ಪಾದನೆ, ಔಷಧ ತಯಾರಿಕೆ, ಕೈಗಾರಿಕೆಗೆ ಸಂಬಂಧಿಸಿದಂತೆ ಭಾರತದ ಹಿರಿಯ ಖಾಸಗಿ ಕಂಪನಿಗಳು ಅಲ್ಲಿನ ಕಂಪನಿಗಳ ಜತೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದವು. ಒಡಂಬಡಿಕೆ ಅನ್ವಯ ಉದ್ದೇಶಿತ ಯೋಜನೆ ಪ್ರಗತಿ ಪರಿಶೀಲನೆಗೆ ಸಮಿತಿಯೊಂದು ರಚಿತವಾಗಿದ್ದು, ನಿಯಮಿತವಾಗಿ ಸಭೆ ಸೇರುವ ಮೂಲಕ ಕಾರ್ಯಕ್ಷಮತೆ ವರ್ಧನೆಗೆ ಸಹಕರಿಸಲಿದೆ.

ಆರ್ಥಿಕ, ರಾಜತಾಂತ್ರಿಕ, ಸಾಮಾಜಿಕ ಮತ್ತು ಅಂತಾರಾಷ್ಟ್ರೀಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈ ಒಪ್ಪಂದಗಳು ತಮ್ಮ ಪ್ರಿಟೋರಿಯಾ ಭೇಟಿಯ ಉದ್ದೇಶವನ್ನು ಸಾರ್ಥಕಗೊಳಿಸಿವೆ ಎಂದು ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.




No comments:

Post a Comment