Sunday, 17 July 2016

ಗುಜರಾತ್​ನಲ್ಲಿ 4.7 ತೀವ್ರತೆಯ ಲಘು ಭೂಕಂಪ

 ನವದೆಹಲಿ: ದಕ್ಷಿಣ ಗುಜರಾತ್ ಸೇರಿದಂತೆ ಹಲವು ಭಾಗಗಳಲ್ಲಿ ಲಘು ಭೂಕಂಪ ಸಂಭವಿಸಿದ್ದು, ಅದೃಷ್ಟವಶಾತ್ ಇಲ್ಲಿಯವರೆಗೆ ಯಾವುದೇ ಸಾವುನೋವಿನ ವರದಿಯಾಗಿಲ್ಲ.ಭಾನುವಾರ ಮುಂಜಾನೆ 9.24ರ ಸಮಯದಲ್ಲಿ ರಿಕ್ಟರ್ ಮಾಪಕದಲ್ಲಿ 4.7 ತೀವ್ರತೆಯ ಭೂಕಂಪ ದಾಖಲಾಗಿದೆ. ಹವಾಮಾನ ಇಲಾಖೆಯ ಪ್ರಕಾರ ಸೂರತ್​ನಿಂದ 14 ಕಿ.ಮೀ
ದೂರದಲ್ಲಿ ಭೂಮಿ ಕಂಪಿಸಿದೆ. ಅಮ್ರೇಲಿ, ಸವಾರಿಕುಂಡ್ಲ ಸೇರಿದಂತೆ ಹಲವು ನಗರದಲ್ಲಿ ಲಘು ಭೂಕಂಪವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2001ರಲ್ಲಿ ಗುಜರಾತ್​ನಲ್ಲಿ ನಡೆದ ಭೂಕಂಪಕ್ಕೆ ಇಡೀ ರಾಜ್ಯ ತತ್ತರಿಸಿಹೋಗಿತ್ತು. ಬರೋಬ್ಬರಿ 20 ಸಾವಿರ ಜನ ಭೂಕಂಪಕ್ಕೆ ಸಿಲುಕಿ ಸಾವನ್ನಪ್ಪಿದ್ದರು.

No comments:

Post a Comment