Saturday, 9 July 2016

ವಿಂಬಲ್ಡನ್ ಪಂದ್ಯವೊಂದನ್ನು ನೇರ ಪ್ರಸಾರ ಮಾಡಿದ ಟ್ವೀಟರ್


ನ್ಯೂಯಾರ್ಕ್: ಮೈಕ್ರೋ-ಬ್ಲಾಗಿಂಗ್ ವೆಬ್ಸೈಟ್ ಟ್ವಿಟರ್ ವಿಂಬಲ್ಡನ್ ಟೂರ್ನಿಯ ಪಂದ್ಯವೊಂದನ್ನು ನೇರಪ್ರಸಾರ ಮಾಡಿದೆ.
ಬುಧವಾರ ಬೆಳಗ್ಗೆ ವಿಂಬಲ್ಡನ್ ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟೆನ್ನಿಸ್ ಪಂದ್ಯವೊಂದನ್ನು ನೇರಪ್ರಸಾರ ಮಾಡಿದೆ. ಈ ಮೂಲಕ ಕ್ರೀಡೆಯನ್ನು ಇನ್ನಷ್ಟು ವಿಶಾಲವಾಗಿ ವಿಸ್ತರಿಸುವ ಉದ್ದೇಶವನ್ನು ಟ್ವೀಟರ್ ಹೊಂದಿದೆ.
ನೇರಪ್ರಸಾರದ ವಿಡಿಯೋಗಳನ್ನು ಹುಡುಕಲು ಟ್ವೀಟರ್ ನಲ್ಲಿ ಜಾಗವನ್ನು ಇನ್ನಷ್ಟು ವಿಶಾಲವಾಗಿರಿಸಲಿದೆ. ಮೊದಲಿಗೆ ವಿಂಬಲ್ಡನ್ ಟೂರ್ನಿಯನ್ನು ನೇರಪ್ರಸಾರ ಮಾಡುವ ಮೂಲಕ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಆ ನಂತರ ನೇರ ಪ್ರಸಾರ ಮಾಡಲಾಗುವುದು ಎಂದು ಟ್ವೀಟರ್ ಪ್ರಕಟಣೆಯಲ್ಲಿ ತಿಳಿಸಿದೆ.
ವಿಂಬಲ್ಡನ್ ಟೂರ್ನಿಯ ನೇರಪ್ರಸಾರ ಹಕ್ಕನ್ನು ಇಎಸ್ಪಿಎನ್ ಸಂಸ್ಥೆ ಹೊಂದಿದ್ದು, ನೇರ ಸಂದರ್ಶನ, ವಿಶ್ಲೇಷಣೆ ಹಾಗೂ ಪಂದ್ಯದ ಮರುಪ್ರಸಾರವನ್ನು ಟ್ವೀಟರ್ ಮಾಡುತ್ತಿದೆ.

No comments:

Post a Comment