Wednesday 13 July 2016

ಇನ್ನು ಮಾಲ್‌,ಥಿಯೇಟರ್, ಮಳಿಗೆಗಳು 24 x 7 ಓಪನ್‌; ಕೇಂದ್ರ ಕಾಯಿದೆ


 ಹೊಸದಿಲ್ಲಿ : ಕೇಂದ್ರ ಸಚಿವ ಸಂಪುಟ ಇಂದು ಬುಧವಾರ ಮಾದರಿ ಮಳಿಗೆ ಮತ್ತು ಸಂಸ್ಥೆ ಕಾಯಿದೆಗೆ ಅನುಮೋದನೆ ನೀಡಿದೆ. ಇದರ ಪರಿಣಾವಾಗಿ ಇನ್ನು  ಮಳಿಗೆಗಳು, ಚಿಲ್ಲರೆ ವ್ಯವಹಾರದ ಅಂಗಡಿಗಳು, ಮಾಲ್‌ಗ‌ಳು ವಾರದ ಏಳು ದಿನವೂ, ದಿನದ 24 ತಾಸುಗಳ ಕಾಲವೂ ತೆರೆದುಕೊಂಡಿರಬಹುದಾಗಿದೆ.ಈ ಮಾದರಿ ಕಾಯಿದೆಯಿಂದಾಗಿ ದೇಶಾದ್ಯಂತ ಎಲ್ಲ ರಾಜ್ಯಗಳಲ್ಲಿನ್ನು ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಏಕರೂಪದ ನೀತಿ - ನಿಮಯಗಳನ್ನು ಜಾರಿಗೆ ತರಬಹುದಾಗಿದೆ. ಈಗ ವಾಣಿಜ್ಯ
ವ್ಯಾಪಾರ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಅವುಗಳನ್ನು ದಿನದ ಹೊತ್ತಿನಲ್ಲಿ ತೆರೆಯುವ, ಮುಚ್ಚುವ, ರಜೆ ಘೋಷಿಸುವ, ಕೆಲಸದ ಪಾಳಿಗಳನ್ನು ನಿಗದಿಸುವುದಕ್ಕೆ ಆಯಾ ರಾಜ್ಯಗಳಲ್ಲಿ ಪ್ರತ್ಯೇಕ ನಿಯಮಗಳಿವೆ. ರಾಜ್ಯ ಸರಕಾರಗಳು ಈ ಬಗ್ಗೆ ತಮ್ಮದೇ ಆದ ಶಾಸನಗಳನ್ನು ಹೊಂದಿವೆ. ವಾಣಿಜ್ಯ ವ್ಯವಹಾರದ ಸಂಸ್ಥೆಗಳನ್ನು ದಿನದ ನಿರ್ದಿಷ್ಟ ಹೊತ್ತಿನಲ್ಲಿ ತೆರೆಯುವ ಮತ್ತು ಮುಚ್ಚವುದಕ್ಕೆ ಸಂಬಂಧಿಸಿದಂತೆ ಕ್ಲಿಷ್ಟಕರ ಕಾಯಿದೆಗಳು ಇರುವುದನ್ನು ಕೇಂದ್ರ ಸರಕಾರವು ಗಮಿನಿಸಿದೆ.

ಮಾತ್ರವಲ್ಲದೆ ಮಹಿಳೆಯರನ್ನು ದುಡಿಸಿಕೊಳ್ಳುವ ವಿಷಯದಲ್ಲೂ ಏಕ ಪ್ರಕಾರದ ನೀತಿ - ನಿಯಮಗಳು ಇಲ್ಲದಿರುವುದು, ವಾರ್ಷಿಕ ವಾಣಿಜ್ಯ ಪರವಾನಿಗೆ ನೀಡುವಲ್ಲಿ ಏಕರೂಪತೆ ಇಲ್ಲದಿರುವುದು, ಶಾಸನಾತ್ಮಕ ದಾಖಲೆಗಳನ್ನು ಇರಿಸಿಕೊಳ್ಳುವಲ್ಲಿ ನಿರ್ದಿಷ್ಟತೆ ಇಲ್ಲದಿರುವುದನ್ನು ಕೂಡ ಕೇಂದ್ರ ಸರಕಾರ ಗಮಿನಿಸಿದೆ.

ಅಂತೆಯೇ ಈ ಎಲ್ಲ ವಿಷಯದಲ್ಲಿ ಏಕರೂಪತೆಯನ್ನು ತರುವ ಸಲುವಾಗಿ ಕೇಂದ್ರ ಸಚಿವ ಸಂಪುಟ ಇಂದು ಮಾದರಿ ವಾಣಿಜ್ಯ ಮಳಿಗೆ ಮತ್ತು ಸಂಸ್ಥೆಗಳ ಕಾಯಿದೆಗೆ ಅನುಮೋದನೆ ನೀಡಿದೆ.

No comments:

Post a Comment