Sunday 17 July 2016

ನಳಂದಾ ವಿಶ್ವವಿದ್ಯಾಲಯದ ಮುಡಿಗೆ ಯುನೆಸ್ಕೋ ಗರಿ


 ಇಸ್ತಾಂಬುಲ್: ನಳಂದಾ ವಿಶ್ವವಿದ್ಯಾಲಯ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಂಡಿದೆ.
ಇಸ್ತಾಂಬುಲ್​ನಲ್ಲಿ ನಡೆದ ಯುನೆಸ್ಕೋದ 40ನೇ ಅಧಿವೇಶನದಲ್ಲಿ ಬಿಹಾರದ ನಳಂದಾ ಮಹಾವಿಹಾರ ಸೇರಿದಂತೆ ವಿಶ್ವದ ಒಟ್ಟು 9 ಹೊಸ ತಾಣಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಒಪ್ಪಿಗೆ ನೀಡಲಾಗಿದೆ. ಈ ವರ್ಷ ಒಟ್ಟು 27ನಾಮ ನಿರ್ದೇಶನಗಳು ಬಂದಿದ್ದು ಅವುಗಳಿಂದ ಭಾರತದ, ಚೀನಾ,ಇರಾನ್, ಮೈಕ್ರೋನೇಶ್ಯಾ, ಸ್ಪೈನ್, ಗ್ರೀಸ್, ಟರ್ಕಿ,
ಬ್ರಿಟನ್ ಹಾಗೂ ಜಂಟಿ ನಾಮ ನಿರ್ದೇಶನ ನೀಡಿದ ಬೋಸ್ನಿಯಾ ಮತ್ತು ಹೆರ್ಜೆಗೊವಿನಾ, ಕ್ರೊಟಿಯಾ, ಮೊಂಟೆನೆಗ್ರೊ ಮತ್ತು ಸರ್ಬಿಯಾದ 9 ತಾಣಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿಕೊಳ್ಳಲಾಗಿದೆ.

ವಿಶ್ವದ ಅತೀ ಹಳೇಯ ವಿಶ್ವವಿದ್ಯಾಲಯ ಎಂಬ ಕೀರ್ತಿ ಹೊಂದಿರುವ ನಳಂದಾ ವಿಶ್ವವಿದ್ಯಾಲಯದ ನಿರ್ಮಾಣಕಾರ್ಯ 5ನೇ ಶತಮಾನದಲ್ಲಿ ಗುಪ್ತರ ಕಾಲದಲ್ಲಿ ಆರಂಭಗೊಂಡು 12ನೇ ಶತಮಾನದಲ್ಲಿ ಪೂರ್ಣಗೊಂಡಿತು. 1193 ಎಡಿಯಲ್ಲಿ ಕಾಮಾಂಡರ್ ಬಕ್ಟಿಯಾರ್ ಕಿಲ್ಜಿ ನೇತೃತ್ವದಲ್ಲಿ ಟರ್ಕಿಶ್ ನೈನ್ಯ ನಡೆಸಿದ ಧಾಳಿಯಲ್ಲಿ ವಿಶ್ವವಿದ್ಯಾಲಯ ಪೂರ್ಣವಾಗಿ ನಾಶಗೊಂಡಿತ್ತು.



No comments:

Post a Comment