Friday 8 July 2016

ಏರ್ಪೋರ್ಟ್ ಗೆ ಮೆಟ್ರೋ ರೈಲು, ನಿಗಮದಿಂದ ಸರ್ಕಾರಕ್ಕೆ ಪ್ಲಾನ್ ನೀಡಿಕೆಗೆ ನಿರ್ಧಾರ


ಬೆಂಗಳೂರು : ಬೆಂಗಳೂರು ಮೆಟ್ರೋ ರೈಲು ನಿಗಮವು ನಗರದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಮೆಟ್ರೋದ ವಿವರವಾದ ಚಿತ್ರಣವನ್ನು ಸರ್ಕಾರಕ್ಕೆ ನೀಡಲು ನಿರ್ಧರಿಸಿದೆ. ಮೆಟ್ರೋ ಫೆಸ್ II ಯೋಜನೆಯಡಿ ನಾಗವಾರದಿಂದ ಏರ್ಪೋರ್ಟ್ ವರೆಗೂ ಮೆಟ್ರೋ ವಿಸ್ತರಿಸಲು ಯೋಜಿಸಲಾಗಿದೆ.5 ವರ್ಷಗಳ ಹಿಂದೆಯೇ ಏರ್ಪೋರ್ಟ್ ಸಂಪರ್ಕಿಸುವ ಮಾರ್ಗದ ಬಗ್ಗೆ ಪ್ರಸ್ತಾವನೆ ಮಾಡಲಾಗಿತ್ತು. ಈ ಹಿಂದಿನ ಸರಕಾರ ವಿಮಾನ ನಿಲ್ದಾಣಕ್ಕೆ ಹೈಸ್ಪೀಡ್ ರೈಲ್
ನಿರ್ಮಿಸಲು ಯೋಜಿಸಿತ್ತು. ಆದರೆ ಅದಕ್ಕೆ ಹೆಚ್ಚು ವೆಚ್ಚದ ಅವಶ್ಯಕತೆ ಮತ್ತು ಇನ್ನಿತರ ಕಾರಣಗಳಿಂದಾಗಿ ಆ ಯೋಜನೆ ನೆನೆಗುದಿಗೆ ಬಿದ್ದಿತು.

ಕಳೆದ ವರ್ಷ ಬಿಎಂಆರ್ಸಿಎಲ್ ರೈಟ್ಸ್ ಗೆ ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕೊಡುವಂತ ಯೋಜನೆಯ ವರದಿಯನ್ನು ನೀಡುವಂತೆ ತಿಳಿಸಿತ್ತು. ಅದರಂತೆ ಫೆಸ್ II ಯೋಜನೆಯಡಿ ಗೊಟ್ಟಿಗೆರೆ ಯಿಂದ ನಾಗವಾರದ ವರೆಗೂ 21.

25 ಕಿ.ಮೀ ದೂರ ಅದರಲ್ಲಿ 13.79 ಕಿ.ಮೀ ಸುರಂಗ ಮಾರ್ಗದ ಮೆಟ್ರೋ ದಾರಿಯನ್ನು ನಿರ್ಮಿಸಲು ಇಲಾಖೆ ಯೋಚಿಸಿದೆ.

ರೈಟ್ಸ್ ಮೆಟ್ರೋ ವನ್ನು ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಯೋಜನೆಯ ವರದಿಯನ್ನು ನೀಡಿದೆ. ಅವರು ಒಟ್ಟು 5 ಮಾರ್ಗಗಳನ್ನು ಸೂಚಿಸಿದ್ದಾರೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರವನ್ನು ಸರ್ಕಾರವೇ ತೆಗೆದುಕೊಳ್ಳಲಿದೆ ಎಂದು ಬಿಎಂಆರ್ಸಿಎಲ್ ಎಂಡಿ ಪ್ರದೀಪ್ ಸಿಂಗ್ ಕರೋಲ  ತಿಳಿಸಿದ್ದಾರೆ




No comments:

Post a Comment