Friday 8 July 2016

ಭಾರತೀಯ ವಾಯುಪಡೆಗೆ ಹೊಸ ಗರಿ – ಮಿಂಚಲಿದ್ದಾರೆ ಮೂವರು ಮಹಿಳಾ ಪೈಲಟ್ ಗಳು

ಹೈದರಾಬಾದ್: ಭಾರತೀಯ ಸೇನೆಯಲ್ಲಿ ಇನ್ನು ಮುಂದಕ್ಕೆ ಅನಿರೀಕ್ಷಿತ ಬದಲಾವಣೆಯನ್ನು ಕಾಣಲಿದ್ದೇವೆ. ಭಾರತೀಯ ವಾಯುಪಡೆಯ ಐತಿಹಾಸಿಕ ದಿನಕ್ಕೆ ಶನಿವಾರ ಸಾಕ್ಷಿಯಾಗಲಿದೆ. ಮೂವರು ಮಹಿಳಾ ಯುದ್ಧ ಪೈಲಟ್ ಗಳು ಇಂದು ಅಧಿಕೃತವಾಗಿ ಭಾರತೀಯ ವಾಯುಪಡೆಯಲ್ಲಿ ಮಿಂಚಲಿದ್ದಾರೆ. ಭಾವನಾ ಕಾಂತ್‌, ಅವನಿ ಚತುರ್ವೇದಿ ಮತ್ತು ಮೋಹನಾ ಸಿಂಗ್‌ ಅವರು ಹೊಸದಾಗಿ ಸೇರ್ಪಡೆಗೊಂಡು ಇತಿಹಾಸ ಸೃಷ್ಟಿಸಲಿದ್ದಾರೆ. ಈ ಮೂವರೂ ಮಹಿಳಾ
ಪೈಲಟ್‌ಗಳು ಯುದ್ಧವಿಮಾನದ ಚಾಲನೆಯ ಪ್ರಾಥಮಿಕ ತರಬೇತಿಯನ್ನು ಕರ್ನಾಟಕದ ಬೀದರ್‌ ವಾಯುನೆಲೆಯಲ್ಲಿ ಪಡೆದಿದ್ದಾರೆ ಅನ್ನುವುದು ಮತ್ತೊಂದು ಹೆಮ್ಮೆಯ ವಿಚಾರ.
ಈ ಮೂವರು ಪೈಲಟ್ ಗಳು ಸೇರ್ಪಡೆಗೊಂಡ ಮುಂದಿನ 6 ತಿಂಗಳು ಬ್ರಿಟನ್‌ ನಿರ್ಮಿತ ಹಾಕ್‌ ಸೂಪರ್‌ ಸಾನಿಕ್‌ ಯುದ್ಧವಿಮಾನಗಳ ಚಾಲನೆ ತರಬೇತಿ ಪಡೆಯಲಿದ್ದಾರೆ. ಈಗಾಗಲೇ ವಾಯುಪಡೆ ಮುಖ್ಯಸ್ಥ ಆರೂಪ್‌ ರಾಹ ಅವರು ಸ್ಪಷ್ಟಪಡಿಸಿದಂತೆ ಮಹಿಳಾ ಪೈಲಟ್‌ಗಳಿಗೆ ‘ಮಹಿಳೆಯರು’ ಎಂಬ ಯಾವುದೇ ವಿನಾಯಿತಿ ನೀಡುವುದಿಲ್ಲ. ಅಗತ್ಯವಿದ್ದ ಎಲ್ಲಾ ಕಡೆ ಅವರನ್ನು ನಿಯೋಜಿಸಲಾಗುತ್ತದೆ ಎಂದು ಹೇಳಿದ್ದಾರೆ

No comments:

Post a Comment