Saturday, 9 July 2016

ಹೆರಿಗೆ ಸಮಸ್ಯೆಗಳಿಂದ ದೇಶದಲ್ಲಿ ಪ್ರತಿ ಗಂಟೆಗೆ ಐದು ಮಹಿಳೆ ಸಾವು: ವಿಶ್ವ ಆರೋಗ್ಯ ಸಂಸ್ಥೆ


ನವದೆಹಲಿ: ಹೆರಿಗೆ ಸಂದರ್ಭದಲ್ಲಿ ಸಮಸ್ಯೆಗಳುಂಟಾಗಿ ಪ್ರತಿ ಗಂಟೆಗೆ ಸುಮಾರು 5 ಮಂದಿ ಮಹಿಳೆಯರು ಭಾರತದಲ್ಲಿ ಸಾವನ್ನಪ್ಪುತ್ತಾರೆ. ಅದರಲ್ಲೂ ರಕ್ತಸ್ರಾವದಿಂದ ಸಾವನ್ನಪ್ಪುವ ಮಹಿಳೆಯರ ಸಂಖ್ಯೆ ಅಧಿಕ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.ಭಾರತದಲ್ಲಿ ಪ್ರತಿವರ್ಷ ಸುಮಾರು 45 ಸಾವಿರ ತಾಯಂದಿರು ಹೆರಿಗೆ ಸಂದರ್ಭದಲ್ಲಿ ಉಂಟಾಗುವ ತೊಂದರೆಯಿಂದ ಸಾವನ್ನಪ್ಪುತ್ತಿದ್ದಾರೆ. ಜಾಗತಿಕವಾಗಿ ಈ ಪ್ರಮಾಣ ಶೇಕಡಾ 17ರಷ್ಟಿದೆ ಎಂದು ಹೇಳಿದೆ.ಹೆರಿಗೆ ಸಂದರ್ಭದಲ್ಲಿ ರಕ್ತಸ್ರಾವ
ಸಾವಿಗೆ ಬಹುಮುಖ್ಯ ಕಾರಣವಾಗಿದೆ.ಮಗು ಹುಟ್ಟಿ 24 ಗಂಟೆಯೊಳಗೆ 500ರಿಂದ 1000 ಮಿಲಿ ಲೀಟರ್ ರಕ್ತ ದೇಹದಿಂದ ಹೋಗುವುದರಿಂದ ಮಹಿಳೆಯರು ಸಾವನ್ನಪ್ಪುತ್ತಾರೆ.
ಈ ವರ್ಷ ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶ ಪ್ರಕಾರ, ಭಾರತದಲ್ಲಿ ಹೆರಿಗೆಯಾಗುವ ಪ್ರತಿ ಲಕ್ಷ ಮಹಿಳೆಯರಲ್ಲಿ 174 ಮಹಿಳೆಯರು ಸಮಸ್ಯೆಗಳಿಂದ ಸಾವನ್ನಪ್ಪುತ್ತಾರೆ. ಸುಮಾರು 26 ದಶಲಕ್ಷ ಗರ್ಭಿಣಿ ಮಹಿಳೆಯರು ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದು, ಅವರಲ್ಲಿ ಸುಮಾರು 45 ಸಾವಿರ ಮಹಿಳೆಯರು ಸಾವನ್ನಪ್ಪುತ್ತಾರೆ. ಅಂದರೆ ಗಂಟೆಗೆ ಸುಮಾರು ಐವರು ಮಹಿಳೆಯರು ಮರಣ ಹೊಂದುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಭಾರತ ಕಚೇರಿಯ ವರದಿ ಹೇಳುತ್ತದೆ.

No comments:

Post a Comment