Wednesday, 13 July 2016

20 ಲಕ್ಷ ಭಾರತೀಯರಿಗೆ ಗೂಗಲ್ ಮೊಬೈಲ್ ತರಬೇತಿ ಶಿಬಿರ


ನವದೆಹಲಿ: ತಂತ್ರಜ್ಞಾನ ದಿಗ್ಗಜ ಗೂಗಲ್​ನಿಂದ 20 ಲಕ್ಷ ಭಾರತೀಯ ಪ್ರತಿಭೆಗಳಿಗೆ ಮೊಬೈಲ್ ಅಭಿವೃದ್ಧಿ ಕಾರ್ಯಕ್ರಮವಾದ ‘ಆಂಡ್ರಾಯ್್ಡ ನೈಪುಣ್ಯತೆ ಮತ್ತು ಪ್ರಮಾಣ ಪತ್ರ’ ಎಂಬ ತರಬೇತಿ ಶಿಬಿರವನ್ನು ಸರ್ಕಾರಿ ಸಹಯೋಗದೊಂದಿಗೆ ನಡೆಸಲು ಗೂಗಲ್ ಮುಂದಾಗಿದೆ.ಈ ಕಾರ್ಯಕ್ರಮದಲ್ಲಿ 2 ಕೋಟಿ ಮೊಬೈಲ್ ಅಭಿವೃದ್ಧಿದಾರರಿಗೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ
ತಮ್ಮ ಕೌಶಲ್ಯಗಳ ಪ್ರದರ್ಶನದೊಂದಿಗೆ ಸ್ವ ಅಭಿವೃದ್ಧಿ ಹೊಂದಲು ಅವಕಾಶ ಲಭಿಸಲಿದೆ.

2018 ರ ವೇಳೆಗೆ ಜಾಗತಿಕವಾಗಿ ಭಾರತದಲ್ಲಿ 40 ಲಕ್ಷದಷ್ಟು ಜನ ಮೊಬೈಲ್ ತಂತ್ರಜ್ಞಾನ ಭಾಗವಾಗಿ ಶೇಕಡಾ 25ರಷ್ಟು ಮೊಬೈಲ್ ಉದ್ಯಮದಲ್ಲಿ ಪಾರುಪತ್ಯ ಸಾಧಿಸಲಿದ್ದಾರೆ ಎಂದು ಗೂಗಲ್​ನ ಪ್ರಾಡಕ್ಟ್ ಮ್ಯಾನೇಜರ್ ಉಪಾಧ್ಯಕ್ಷ ಸೀಸರ್ ಸೆನ್​ಗುಪ್ತ ಹೇಳಿದ್ದಾರೆ.

ಭಾರತದ ಕೆಲ ದಿಗ್ಗಜ ಕಂಪನಿಗಳೊಂದಿಗೆ ಮೊಬೈಲ್ ತರಬೇತಿ ಶಿಬಿರ ಪ್ರಾರಂಭಿಸಲಿರುವ ಗೂಗಲ್ ಜುಲೈ 18 ರಿಂದ ಕೆಲ ವಿಶ್ವವಿದ್ಯಾಲಯಗಳಲ್ಲಿ ಎಲ್​ಇಡಿ ಟ್ರೇನಿಂಗ್ ಕಾರ್ಯಕ್ರಮ ಕೂಡ ನಡೆಸಲು ಸಿದ್ಧತೆ ನಡೆಸಿದೆ.

ಎದುರೇಕಾ, ಮಣಿಪಾಲ್​ಗ್ಲೋಬಲ್, ಸಿಂಪ್ಲಿಲರ್ನ್ ಸೇರಿದಂತೆ ಹಲವು ಶಿಕ್ಷಣ ಪಾಲುದಾರಿಕೆ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಂಡ್ರಾಯ್್ಡ ಪ್ರಮಾಣ ಪತ್ರ ತರಬೇತಿ ಶಿಬಿರ ನಡೆಸಲಿದೆ.

No comments:

Post a Comment