Saturday 9 July 2016

ಚೆಕ್ ಬೌನ್ಸ್ ಪ್ರಕರಣಗಳನ್ನು ನಿಭಾಯಿಸಲು ಸರ್ಕಾರದಿಂದ ಹೊಸ ನಿಯಮ


ಕೇಂದ್ರ ಸರ್ಕಾರ ವರ್ಗಾವಣೆಯ ಲಿಖಿತಗಳ ಅಧಿನಿಯಮ (ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಮಸೂದೆ) (ತಿದ್ದುಪಡಿ), 2015ಕ್ಕೆ ಅಧಿಸೂಚನೆ ಹೊರಡಿಸಿದ್ದು, ಈ ಪ್ರಕಾರ ಚೆಕ್ ಬೌನ್ಸ್ ಪ್ರಕರಣದಲ್ಲಿ ಚೆಕ್ ಪಡೆದುಕೊಳ್ಳುವ ವ್ಯಕ್ತಿ ಚೆಕ್ ನಗದಾಗುವ ಸ್ಥಳದಲ್ಲಿಯೇ ಮೊಕದ್ದಮೆ ಹೂಡಬಹುದು. ಚೆಕ್ ಬ್ಯಾಂಕಿನಲ್ಲಿ ಹಾಕಿದ ವ್ಯಕ್ತಿಯ ಸ್ಥಳಕ್ಕೇ ಹುಡುಕಿಕೊಂಡು ಹೋಗಿ ಅಲ್ಲಿ ಕೇಸು ಹಾಕುವ ತ್ರಾಸ ಇನ್ನು ಮುಂದೆ ಇರುವುದಿಲ್ಲ.ಈ ಮಸೂದೆಯನ್ನು ಜೂನ್ 15, 2015ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ತರಲಾಗಿದೆ. 1881ರ ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಗೆ ತಿದ್ದುಪಡಿ ತಂದು ಘೋಷಿಸಲಾಗಿದ.ಪ್ರಸ್ತುತ ದೇಶಾದ್ಯಂತ
ಸುಮಾರು 18 ಲಕ್ಷ ಚೆಕ್ ಬೌನ್ಸ್ ಪ್ರಕರಣಗಳಿವೆ. ಅವುಗಳಲ್ಲಿ 38 ಸಾವಿರ ಪ್ರಕರಣಗಳು ವಿವಿಧ ಹೈಕೋರ್ಟ್ ಗಳಲ್ಲಿ ಇತ್ಯರ್ಥವಾಗದೆ ಉಳಿದಿವೆ. ಚೆಕ್ ಬೌನ್ಸ್ ಆದರೆ ಕೆಲವು ಕಕ್ಷಿಗಾರರು ಚೆಕ್ ಎಲ್ಲಿಂದ ಬಂದಿದೆಯೋ ಅಲ್ಲಿಯೇ ಪ್ರಕರಣ ದಾಖಲಿಸಿ ಅಲ್ಲಿ ವ್ಯಾಜ್ಯ ನಡೆಸಬೇಕಾಗುತ್ತಿತ್ತು. ಈ ತೊಂದರೆಯನ್ನು ನಿವಾರಿಸಲು ಈ ತಿದ್ದುಪಡಿ ಕಾಯ್ದೆ ಜಾರಿಗೆ ತರಲಾಗಿದೆ. ಇದರಿಂದ ಪ್ರಕರಣವನ್ನು ಬೇಗನೆ, ನ್ಯಾಯಬದ್ಧವಾಗಿ ಇತ್ಯರ್ಥಪಡಿಸಬಹುದು.
ನೆಗೋಶಿಯೇಬಲ್ ಇನ್ಸ್ರ್ಟುಮೆಂಟ್ಸ್ ಕಾಯ್ದೆ 1881ರ ಪ್ರಕಾರ ಚೆಕ್ ನೀಡಿದ ವ್ಯಕ್ತಿಯ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದಿದ್ದರೆ, ಚೆಕ್ ಬೌನ್ಸ್ ಆದರೆ ಅದು ಕಾನೂನು ರೀತ್ಯಾ ಅಪರಾಧವಾಗುತ್ತದೆ.



No comments:

Post a Comment