Friday 8 July 2016

ಎಚ್‌ಐವಿ ರೋಗಿಗಳಿಗೆ ಚಿಕಿತ್ಸೆ ಪಡೆವ ಮಸೂದೆಗೆ ಮರುಜೀವ?

  ನವದೆಹಲಿ: ಯುಪಿಎ ಸರ್ಕಾರ ಜಾರಿಗೊಳಿಸಲುದ್ದೇಶಿಸಿದ್ದ, ಎಚ್‌ಐವಿ, ಏಯ್ಡ್ಸ್ ರೋಗಿಗಳಿಗೆ ಆ್ಯಂಟಿರೆಟ್ರೊವೈರಲ್ ಥೆರಪಿ ಪಡೆಯುವುದು ಕಾನೂನುಬದ್ಧ ಹಕ್ಕು ಎಂಬ ಅವಕಾಶವನ್ನು ನೀಡುವ ಎಚ್‌ಐವಿ/ಏಡ್ಸ್ (ತಡೆ ಮತ್ತು ನಿಯಂತ್ರಣ) ಮಸೂದೆ, 2014ನ್ನು ಕೇಂದ್ರ ಸರ್ಕಾರ ಮರು ಪರಿಶೀಲನೆ ನಡೆಸಿದೆ. ಈ ಬಗ್ಗೆ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದ್ದು, ಈ ಕುರಿತು ಸಂಸದೀಯ ಸ್ಥಾಯಿ ಸಮಿತಿ ಗುರುತಿಸಿರುವ ಅಂಶಗಳನ್ನು ಪರಿಶೀಲಿಸಲು ಹಣಕಾಸು ಸಚಿವ ಅರುಣ್ ಜೇಟ್ಲಿ ಅಧ್ಯಕ್ಷತೆಯಲ್ಲಿ
ನಡೆದ ಉನ್ನತಾಧಿಕಾರದ ಸಚಿವರ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ.

ಹೊಸ ಮಸೂದೆ ಜಾರಿಯಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆ್ಯಂಟಿರೆಟ್ರೋವೈರಲ್ ಚಿಕಿತ್ಸೆ ಪೂರೈಸಲು ಬದ್ಧವಾಗುತ್ತವೆ. ಸರ್ಕಾರಗಳು ಅಥವಾ ವ್ಯಕ್ತಿಗಳು ಎಚ್‌ಐವಿ ಪೀಡಿತರು ಮತ್ತು ಅವರೊಂದಿಗೆ ವಾಸಿಸುವವರ ವಿರುದ್ಧ ಯಾವುದೇ ತಾರತಮ್ಯ ಎಸಗುವುದನ್ನು ಈ ಮಸೂದೆ ನಿಷೇಧಿಸುತ್ತದೆ. ಆ್ಯಂಟಿರೆಟ್ರೊವೈರಲ್ ಔಷಧಗಳ ಸಂಯೋಜಿತ ಚಿಕಿತ್ಸಾ ವಿಧಾನವನ್ನು ಆ್ಯಂಟಿರೆಟ್ರೊವೈರಲ್ ಥೆರಪಿ ಎನ್ನುತ್ತಾರೆ. ಈ ಮೂಲಕ ಎಚ್‌ಐವಿ ವೈರಸ್‌ನ್ನು ಅತ್ಯಧಿಕ ಮಟ್ಟದಲ್ಲಿ ಹತ್ತಿಕ್ಕಬಹುದು ಮತ್ತು ಕಾಯಿಲೆಯ ಬೆಳವಣಿಗೆಯನ್ನು ತಡೆಯಬಹುದು.




No comments:

Post a Comment