Friday 8 July 2016

ಕಣ್ಣಿನ ಸನ್ನೆಯಲ್ಲೇ ಮೊಬೈಲ್ ಆಪರೇಟ್.. ಬಂದಿದೆ ಅತ್ಯಾಧುನಿಕ ಸಾಫ್ಟವೇರ್


ನ್ಯೂಯಾರ್ಕ್(ಜು.03): ಭಾರತ ಮೂಲದ ವಿದ್ಯಾರ್ಥಿಯನ್ನೂ ಒಳಗೊಂಡ ಅಂತಾರಾಷ್ಟ್ರೀಯ ಸಂಶೋಧಕರ ತಂಡವೊಂದು ಕಣ್ಣಿನ ಚಲನೆ ಮೂಲಕವೇ ಸ್ಮಾರ್ಟ್ ಫೋನ್ ಆಪರೇಟ್ ಮಾಡಬಲ್ಲ ಅತ್ಯಾಧುನಿಕ ಸಾಫ್ಟ್`ವೇರ್ ಸಂಶೋಧಿಸಿದೆ.ಅಮೆರಿಕದ ಜಾರ್ಜಿಯಾ ವಿವಿಯ ಮಸ್ಸಾಚುಸೆಟ್ಸ್`ನ ಎಂಐಟಿ ಮತ್ತು ಜರ್ಮನಿಯ ಮ್ಯಾಕ್ಸ್ ಪ್ಲ್ಯಾಂಕ್ ಇನ್ಸ್`ಟಿಟ್ಯೂಟ್ ಆಫ್ ಇರ್ಫಮೇಟಿಕ್ಸ್`ನ ತಂಡ ಈ ಸಾಫ್ಟ್`ವೇರನ್ನ ಅಭಿವೃದ್ಧಿಪಡಿಸಿದೆ. ಒಂದು ಸೆಂಟಿಮೀಟರ್`ನಷ್ಟು ಸ್ಪಷ್ಟವಾಗಿ
ನೋಡಬಹುದಾದಂತಹ ತಂತ್ರಜ್ಞಾನವನ್ನ ಮೊಬೈಲ್`ಗಾಗಿ ಮತ್ತು 1.7 ಸೆಂಟಿಮೀಟರ್`ನಷ್ಟು ಟ್ಯಾಬ್ಲೆಟ್ ತಂತ್ರಜ್ಞಾನವನ್ನ ಅಭಿವೃದ್ಧಿಪಡಿಸಿದ್ಧಾರೆ.

ಇದಕ್ಕಾಗಿ ಸಂಶೋಧಕರು ಗೇಜ್ ಕ್ಯಾಪ್ಚರ್ ಎಂಬ ಆಪ್ ಅನ್ನೂ ರೆಡಿಮಾಡಿದ್ದು, ನಾವು ನೋಡುವ ನೋಟಕ್ಕೆ ತಕ್ಕಂತೆ ದತ್ತಾಂಶವನ್ನ ಗ್ರಹಿಸುತ್ತದೆ.

No comments:

Post a Comment