ಮೆಲ್ಬೋರ್ನ್: ಕೃತಕ ಸಕ್ಕರೆ ಬಳಸಿ ತಯಾರಿಸುವ ತಿನಿಸಿನಿಂದ ಹಸಿವು ಹೆಚ್ಚಳವಾಗುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ. ಪ್ರಾಣಿಗಳ ಮೇಲೆ ಈ ಕುರಿತು ಸಂಶೋಧನೆ ನಡೆದಿದ್ದು, ಇದರಿಂದ ಹೆಚ್ಚಿನ ಪ್ರಮಾಣದ ಕ್ಯಾಲೊರಿ ದೇಹದಲ್ಲಿ ಸೇರುವುದರಿಂದ ಬೊಜ್ಜಿನ ಸಮಸ್ಯೆ ಜನರನ್ನು ಬಾಧಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ. ಕೆಲವರು ಕೃತಕ ಸಕ್ಕರೆಯ ಸಿಹಿತಿನಿಸನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಆ ತಿನಿಸಿನಲ್ಲಿ ಹಸಿವು ಹೆಚ್ಚಳಕ್ಕೆ ಕಾರಣವಾಗುವ ಅಂಶಗಳಿರುತ್ತವೆ.
ಮತ್ತಷ್ಟು ತಿನ್ನುವಂತೆ ಅವು ಪ್ರೇರೇಪಿಸುವುದರಿಂದ ಜನರು ಅವರಿಗರಿವಿಲ್ಲದಂತೆಯೇ ದೇಹದಲ್ಲಿ ಕೊಬ್ಬು ಶೇಖರಣೆಗೆ ಅವಕಾಶ ಮಾಡಿಕೊಡುತ್ತಾರೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಸಿಡ್ನಿ ವಿವಿಯ ಗ್ರೆಗ್ ನೀಲಿಯ ಪ್ರಕಾರ, ಕೃತಕ ಸಿಹಿ ಸುಕ್ರೋಸ್ ಬಳಸಿ ತಯಾರಿಸಿದ ತಿಂಡಿಗಳ ಸೇವನೆಯು ಹಾನಿಕಾರಕವಂತೆ. ಅದು ಮೆದುಳಿನ ಮೇಲೆ ಪರಿಣಾಮ ಬೀರಿ ಮತ್ತಷ್ಟು ಸಿಹಿಗೆ ಬೇಡಿಕೆ ಇಡುವುದರಿಂದ ಸಹಜವಾಗಿ ಹಸಿವು ಹೆಚ್ಚಾಗುತ್ತದೆ. ಮಕ್ಕಳು ಕೂಡಾ ಇದರಿಂದ ತೊಂದರೆಗೊಳಗಾಗುವ ಸಾಧ್ಯತೆಗಳಿವೆ ಎಂದಿದ್ದಾರೆ. ದೇಹಕ್ಕೆ ಅಗತ್ಯವಾದ ಸಾಕಷ್ಟು ಕ್ಯಾಲೊರಿ ಇದ್ದರೂ, ಮತ್ತೆ ಮತ್ತೆ ಸಿಹಿಗೆ ಬೇಡಿಕೆಯಿಡುವುದರಿಂದ ಹೆಚ್ಚು ಆಹಾರ ಬೇಕಾಗುತ್ತದೆ. -ಏಜೆನ್ಸೀಸ್Sunday, 17 July 2016
Subscribe to:
Post Comments (Atom)
No comments:
Post a Comment