Saturday 9 July 2016

ತುರ್ಕಮೇನಿಸ್ತಾನದಲ್ಲಿ ತಂಬಾಕಿಗೆ ಪೂರ್ಣ ನಿಷೇಧ

ತಂಬಾಕು ಉತ್ಪನ್ನಗಳ ಮಾರಾಟದ ಮೇಲೆ ತುರ್ಕಮೇನಿಸ್ತಾನ ಸಂಪೂರ್ಣವಾಗಿ ನಿಷೇಧ ಹೇರಿದೆ. ಈ ಸಂಬಂಧ ತಂಬಾಕು ವಿರೋಧಿ ಕಾನೂನನ್ನು ಜಾರಿಗೊಳಿಸಲಾಗಿದೆ.ಅಂಗಡಿಗಳು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಿದ್ದು ಕಂಡು ಬಂದರೆ ಒಂದು ಲಕ್ಷ ರೂ.ನಷ್ಟು ದಂಡ ವಿಧಿಸಲಾಗುವುದು . ಈ ಮೂಲಕ ತುರ್ಕಮೇನಿಸ್ತಾನ ತಂಬಾಕು ಉತ್ಪನ್ನಗಳ ಮೇಲೆ ಪರಿಣಾಮಕಾರಿಯಾಗಿ ನಿಷೇಧ ಹೇರಿದ ವಿಶ್ವದ ಮೊದಲ ದೇಶ ಎನಿಸಿಕೊಂಡಿದೆ.ವಿಶ್ವದಲ್ಲಿಯೇ ಅತಿ ಕಡಿಮೆ ಸಿಗರೇಟು
ಸೇದುವವರು ತುರ್ಕಮೇನಿಸ್ತಾನದಲ್ಲಿದ್ದಾರೆ ಎಂದು  ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿತ್ತು. ಅಲ್ಲಿ ಕೇವಲ ಶೇ.8ರಷ್ಟು ಮಂದಿ ಮಾತ್ರ ತಂಬಾಕು ಉತ್ಪನ್ನಗಳನ್ನು ಬಳಸುತ್ತಾರೆ ಎಂದು ಹೇಳಿತ್ತು.

2004ರಲ್ಲಿ ಭೂತಾನ್‌ ಎಲ್ಲಾ ರೀತಿಯ ತಂಬಾಕು ಉತ್ಪನ್ನಗಳನ್ನು ನಿಷೇಧಿಸಿದ ಮೊದಲ ದೇಶ ಎನಿಸಿಕೊಂಡಿತ್ತು. ಆದರೆ, ಅಲ್ಲಿ ನಿಷೇಧ ಕಟ್ಟುನಿಟ್ಟಾಗಿ ಜಾರಿಯಾಗಿರಲಿಲ್ಲ.

No comments:

Post a Comment