Friday, 8 July 2016

ಶಿವಮೊಗ್ಗ : ಹಾಡಿಗೆ ಶ್ರೇಷ್ಠಗಾಯಕಿ ಗಾಗಿ ನೀಡುವ ಫಿಲಂಫೇರ್ ಪ್ರಶ ಸ್ತಿಗೆ ಭಾಜನರಾಗಿರುವ ಇಂಚರ

ಶಿವಮೊಗ್ಗ (ವಿಶ್ವ ಕನ್ನಡಿಗ ನ್ಯೂಸ್) :ಇಂಚರ ರಾವ್. ಕನ್ನಡ ಚಿತ್ರರಂಗದಲ್ಲಿ ಗಾಯಕಿ ಯಾಗಿ ಮೆರೆಯುತ್ತಿರುವ ಹೆಸರು. `ರಂಗಿ ತರಂಗ’ ಚಿತ್ರದ ಕರೆ ಯೋಲೆ…’ ಹಾಡಿಗೆ ಶ್ರೇಷ್ಠಗಾಯಕಿ ಗಾಗಿ ನೀಡುವ ಫಿಲಂಫೇರ್ ಪ್ರಶ ಸ್ತಿಗೆ ಭಾಜನರಾಗಿರುವ `ಇಂಚರ’ ಶಿವಮೊಗ್ಗೆಯವಳು. ರೋಟರಿ ಶಾಲೆಯಲ್ಲಿ ವಿದ್ಯಾಭ್ಯಾಸ ಪೂರ್ಣ ಗೊಳಿಸಿರುವ ಈಕೆ, ಪ್ರಸ್ತುತ ಅದೇ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿರುವ ಕೆ.ವಿ.ವಿಶಾಲಾಕ್ಷಮ್ಮ ಮತ್ತು ಎನ್.ಜಿ.ರಮೇಶ್ ದಂಪತಿಗಳ ಪುತ್ರಿ.ಝಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ `ಸರಿಗಮಪ’ ಮೂಲಕ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡು, ನಂತರ ಕಸ್ತೂರಿ ವಾಹಿನಿಯ `ಕುಹು ಕುಹು ಕೋಗಿಲೆ’ ಕಾರ್ಯಕ್ರಮದಲ್ಲಿ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದವಳು. ಈವರೆಗೆ ಸುಮಾರು 40 ಚಲನ ಚಿತ್ರಗಳಿಗೆ ಹಿನ್ನಲೆ ಗಾಯಕಿಯಾಗಿ ಗುರುತಿಸಿಕೊಂಡಿರುವ ಇಂಚರ, ಸುಮಾರು 200ಕ್ಕೂ ಹೆಚ್ಚು ವೇದಿಕೆಗಳಲ್ಲಿ ತನ್ನ ಪ್ರತಿಭೆಯನ್ನು ಮೆರೆದಿದ್ದಾಳೆ. ಕನ್ನಡ ಪ್ರಸಿದ್ಧ ಸಂಗೀತ ನಿರ್ದೇಶಕರಾದ ರಾಜು ಅನಂತಸ್ವಾಮಿ, ವಿ. ಮನೋಹರ್, ಮನೋಮೂರ್ತಿ, ರಾಜೇಶ್ ಕೃಷ್ಣನ್, ವಿಜಯ ಪ್ರಕಾಶ್ ರಲ್ಲದೇ, ಭಾರತೀಯ ಚಿತ್ರ ರಂಗದ ದಿಗ್ಗಜ ರಾದ ಎ.ಆರ್. ರೆಹಮಾನ್, ಉದೀತ್ ನಾರಾಯ ಣನ್, ಕುಮಾರ್ ಸೋನು, `ಮಾಲ್ಗುಡಿ’ ಶುಭಾ ಸೇರಿ ದಂತೆ ಹಲವು ಸಂಗೀತ ನಿರ್ದೇಶಕರ ಗಮನ ಸೆಳೆದು ಭರವಸೆ ಮೂಡಿಸಿದ್ದಾರೆ. `ನನ್ನ ಸ್ಟೈಲು ಬೇ ರೇನೆ’ ಎಂಬ ಮೊದಲ ಗೀತೆಯೊಂದಿಗೆ ಸಂಗೀತ ಪಯಣವನ್ನು ಆರಂಭಿಸಿದ ಇಂಚರ, ಈ ಚೊಚ್ಚಲ ಗೀತೆಗೆ ಅನ್ವರ್ಥವಾಗುವಂತೆ, ತಮ್ಮದೇ ಆದ ಶೈಲಿಯನ್ನು ರೂಢಿಸಿಕೊಂಡು ಉದ್ಯಮದ ಗಮನಸೆಳೆದಿದ್ದಾರೆ. `ಗೆಳೆಯ’, `ಮೊಗ್ಗಿನ ಮನಸ್ಸು’, `ಮಳೆ ಬರಲಿ -ಮಂಜು ಇರಲಿ’, `ಶ್ರೀಹರಿಕಥೆ’, ಚಿತ್ರಗಳಲ್ಲದೇ ಸಂಗೀತ ನಿರ್ದೇಶಕ ವಿ. ಮನೋಹರ್‍ರವರ ಸಾರಥ್ಯದಲ್ಲಿನ `ಚಾಲಿಪೊಲಿಲೊ’, ತುಳು ಚಿತ್ರಗಳಿಗೂ ಹಾಡಿ ಗಮನ ಸೆಳೆದಿದ್ದಾಳೆ. ಈ ಚಿತ್ರ ಶತದಿನ ಪೂರೈಸಿರುವುದು ಗಮನಾರ್ಹ. ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ `ರಂಗಿ ತರಂಗ’ ಚಿತ್ರದ `ಕರೆಯೋಲೆ’ ಗೀತೆಗೆ ಧ್ವನಿಯಾಗಿರುವ ಇಂಚರ, ಈ ಹಾಡಿಗಾಗಿ 63ನೇ ಬ್ರಿಟಾನಿಯಾ ಫಿಲಂಫೇರ್ (ಸೌತ್) ಪ್ರಶಸ್ತಿಗೆ ಭಾಜನರಾಗಿದ್ದಾಳೆ. ಈಕೆಯ ಸುಮಧುರ ಧ್ವನಿ ಅನೇಕ ದೂರದರ್ಶನ ವಾಹಿನಿ, ರೇಡಿಯೋ ಕಾರ್ಯಕ್ರಮಗಳಿಗೆ ಬಳಕೆಯಾಗಿದೆ.
ಕೇವಲ ಗಾಯಕಿಯಾಗಿ ಅಷ್ಟೇ ಅಲ್ಲ, ಕಾಪೆರ್Çೀರೇಟ್ ಸಂಸ್ಥೆಗಳ ಕಾರ್ಯಕ್ರಮ ನಿರ್ವಾಹಕಿಯಾಗಿಯೂ ಗಮನಸೆಳೆದಿರುವ ಇಂಚರ, ಈವರೆಗೆ ಸರಿಸುಮಾರು 200ಕ್ಕೂ ಪ್ರತಿಷ್ಠಿತ ವೇದಿಕೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾಳೆ. ಸಂಗೀತ, ನೃತ್ಯ, ಭರಪೂರ ರಂಜನೆಯ ಈ ವೈವಿಧ್ಯಮಯ ಕಾರ್ಯಕ್ರಮಗಳು ಇಡೀ ಉದ್ಯಮದ ಗಮನ ಸೆಳೆದಿದೆ. ಇನ್ಫೋಸಿಸ್, ಆರ್ಕೆಡ್, ಹೆಚ್‍ಸಿಎಲ್, ಬಿರ್ಲಾ ಸಿಮೆಂಟ್, ಎಸಿಸಿ ಸಿಮೆಂಟ್, ಐಸಿಐಸಿಐ ಸೇರಿದಂತೆ ಹತ್ತು- ಹಲವು ಪ್ರತಿಷ್ಠಿತ ಕಂಪನಿಗಳು ಇಂಚರಳ ಕಾರ್ಯಕ್ರಮಗಳಿಗೆ ವೇದಿಕೆಯಾಗಿದೆ.
ಹಾಗೆಯೇ ಯುವ ಪೀಳಿಗೆಯ ಕೇಂದ್ರಬಿಂದುವಾಗಿರುವ ಇಂಚರ, ರಾಜಧಾನಿಯ ಹಲವು ಪ್ರತಿಷ್ಟಿತ ಕಾಲೇಜುಗಳಲ್ಲಿಯೂ ಕಾರ್ಯಕ್ರಮ ನೀಡಿ, ತನ್ನದೇ ಆದ ಛಾಪು ಮೂಡಿಸಿದ್ದಾಳೆ. ಜೊತೆಗೆ ಬೆಂಗಳೂರಿನ ಕ್ಲಬ್‍ಗಳಾದ ಗಾಲ್ಫ್ ಕ್ಲಬ್, ಬೆಂಗಳೂರಿನ ಕ್ಲಬ್, ಕೋರ ಮಂಗಲ ಕ್ಲಬ್, ಕಾಸ್ಮೋಕ್ಲಬ್, ಕಂಟ್ರಿಕ್ಲಬ್, ಇಂದಿರಾ ನಗರ ಕ್ಲಬ್, ಹೆಚ್. ಎಸ್. ಆರ್. ಕ್ಲಬ್ ಬೋರಿಂಗ್ ಕ್ಲಬ್‍ಗಳಲ್ಲಿ ಕಾರ್ಯ ಕ್ರಮ ನೀಡಿ ಗಮನ ಸೆಳೆದಿದ್ದಾಳೆ.


No comments:

Post a Comment