Saturday, 9 July 2016

ಆಫ್ರಿಕಾ ಪ್ರವಾಸ ನನಗೆ ತೀರ್ಥ ಯಾತ್ರೆ ಇದ್ದಂತೆ: ಪ್ರಧಾನಿ ನರೇಂದ್ರ ಮೋದಿಪ್ರಿಟೋರಿಯ: ದಕ್ಷಿಣ ಆಫ್ರಿಕಾದ ಭೇಟಿಯ ಅಂತಿಮ ದಿನಗಳಲ್ಲಿ ಮಹಾತ್ಮಾ ಗಾಂಧಿ ರೈಲು ಸಂಚಾರ ಕೈಗೊಂಡಿದ್ದ ಮಾದರಿಯಲ್ಲೇ, ದಕ್ಷಿಣ ಆಫ್ರಿಕಾದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸಹ ಐತಿಹಾಸಿಕ ರೈಲು ಪ್ರಯಾಣ ನಡೆಸಿದ್ದಾರೆ.ಮಾನವನೊಬ್ಬನ ಜೀವಿತ ಮುಕ್ತಾಯಗೊಂಡು ಮಹಾತ್ಮನೊಬ್ಬನ ಜೀವನ ಪ್ರಾರಂಭವಾದ ಭೂಮಿ ದಕ್ಷಿಣ ಆಫ್ರಿಕಾ ಆಗಿದ್ದು, ಆಫ್ರಿಕಾ ಪ್ರವಾಸ ನನಗೆ ತೀರ್ಥಯಾತ್ರೆ ಇದ್ದಂತೆ ಎಂದು ಮೋದಿ ಹೇಳಿದ್ದಾರೆ.ದಕ್ಷಿಣ ಅಪಹರಿಕಾದಲ್ಲಿ
ಭಾರತದ ಇತಿಹಾಸ ಹಾಗೂ ಮಹಾತ್ಮಾ ಗಾಂಧಿ ಅವರ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ ಎಂದು ಪ್ರಧಾನಿ ಮೋದಿ ಪತ್ರಕರ್ತರಿಗೆ ಹೇಳಿದ್ದು ಪೀಟರ್ಮೆರಿಟ್ಜ್ಬರ್ ನ ರೈಲ್ವೆ ನಿಲ್ದಾಣದಲ್ಲಿ ಮಹಾತ್ಮಾ ಗಾಂಧಿ ಅವರ ಜೀವನಕ್ಕೆ ಸಂಬಂಧಿಸಿದ ಪ್ರದರ್ಶನಕ್ಕೆ ಮೋದಿ ಚಾಲನೆ ನೀಡಿದ್ದಾರೆ.

No comments:

Post a Comment