Friday 8 July 2016

ಹೈಕೋರ್ಟ್‌ಗಳಲ್ಲಿ 470 ಜಡ್ಜ್ ಹುದ್ದೆಗಳು ಖಾಲಿ : ಕರ್ನಾಟಕದಲ್ಲೂ ಖಾಲಿಯಿವೆ



ನವದೆಹಲಿ: ಕರ್ನಾಟಕವೂ ಸೇರಿದಂತೆ ದೇಶದ 24 ಹೈಕೋರ್ಟ್‌ಗಳಲ್ಲಿ ಬರೋಬ್ಬರಿ 470 ನ್ಯಾಯಾಧೀಶರ ಹುದ್ದೆಗಳು ಖಾಲಿಬಿದ್ದಿವೆ ಎಂದು ಕಾನೂನು ಸಚಿವಾಲಯದ ದತ್ತಾಂಶಗಳು ತಿಳಿಸಿವೆ. ಉನ್ನತ ನ್ಯಾಯಾಂಗಕ್ಕೆ ನ್ಯಾಯಾಧೀಶರ ನೇಮಕ ಕುರಿತು ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ ಭಿನ್ನಾಭಿಪ್ರಾಯಗಳು ಮುಂದುವರಿದಿರುವ ನಡುವೆಯೇ ಈ ವಿಚಾರ ಬೆಳಕಿಗೆ ಬಂದಿದೆ. ಪ್ರಸಕ್ತ ವರ್ಷದ ಆರಂಭದಲ್ಲಿ 443 ಜಡ್ಜ್ ಹುದ್ದೆಗಳು ಖಾಲಿಯಿದ್ದರೆ, 2014ರ ಅಂತ್ಯದಲ್ಲಿ ಈ ಸಂಖ್ಯೆ 232 ಆಗಿತ್ತು ಎನ್ನಲಾಗಿದೆ.
ಜುಲೈ 1ರ ವೇಳೆಗೆ 470 ಜಡ್ಜ್‌ಗಳ ಕೊರತೆ ಬಿದ್ದಿದ್ದು, ಈ ಪೈಕಿ ಅಲಹಾಬಾದ್ ಹೈಕೋರ್ಟ್‌ನಲ್ಲೇ ಅತಿಹೆಚ್ಚು ಅಂದರೆ 82 ಹುದ್ದೆಗಳು ಖಾಲಿಯಿವೆ. ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗಳಲ್ಲಿ 39, ಮದ್ರಾಸ್ 37, ಆಂಧ್ರಪ್ರದೇಶ/ತೆಲಂಗಾಣ 36 ಮತ್ತು ಕರ್ನಾಟಕದಲ್ಲಿ 35 ನ್ಯಾಯಾಧೀಶರ ಹುದ್ದೆಗಳು ಖಾಲಿಯಿವೆ. ಸುಪ್ರೀ ಹಾಗೂ ಹೈಕೋರ್ಟ್‌ಗಳಲ್ಲಿ ನ್ಯಾಯಾಧೀಶರ ನೇಮಕ ಕುರಿತು ಸರ್ಕಾರ ಮತ್ತು ನ್ಯಾಯಾಂಗದ ನಡುವೆ ಒಮ್ಮತ ಮೂಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಬುಧವಾರವಷ್ಟೇ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದರು.


 

 
 


No comments:

Post a Comment