Saturday 9 July 2016

400 ವರ್ಷಗಳ ಬಳಿಕ ಮಹಿಳೆ, ದಲಿತರಿಗೆ ಪರಶುರಾಮ ದರ್ಶನ!




ಬರೋಬ್ಬರಿ 400 ವರ್ಷಗಳ ಬಳಿಕ ಈ ದೇವಸ್ಥಾನದಲ್ಲಿ ಈಗ ದಲಿತರು ಮತ್ತು ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ!ಉತ್ತರಾಖಂಡ್​ನ ಜಾನ್ಸರ್ ಬವಾರ್ ವಲಯದಲ್ಲಿರುವ ಗಡವಾಲ್​ನ ಪರಶುರಾಮ ದೇವಸ್ಥಾನದಲ್ಲಿ ಇಷ್ಟು ದಿನ ದಲಿತರು ಮತ್ತು ಮಹಿಳೆಯರಿಗೆ ಪ್ರವೇಶವೇ ಇರಲಿಲ್ಲ. ಸಂಪ್ರದಾಯದಂತೆ ಇದನ್ನು ಕಟ್ಟುನಿಟ್ಟಾಗಿ ಕಾಪಾಡಿಕೊಂಡು ಬರಲಾಗಿತ್ತು. ಆದರೆ ಈಗ ಆಡಳಿತ ಮಂಡಳಿ ನಿಷೇಧಕ್ಕೆ ಕಡಿವಾಣ ಹಾಕಿ, ಮುಂಬರುವ ದಿನಗಳಲ್ಲಿ ಎಲ್ಲರಿಗೂ ಸಮನಾದ
ಪ್ರವೇಶಾವಕಾಶ ಇರುವುದಾಗಿ ಪ್ರಕಟಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಆಡಳಿತ ಮಂಡಳಿ ಚೇರ್ಮನ್ ಜವಾಹರ್ ಸಿಂಗ್ ಚೌಹಾಣ್, ಇಲ್ಲಿಯ ಜನರು ಕಳೆದ ಕೆಲವು ತಿಂಗಳಿಂದ ಬದಲಾವಣೆ ಬಯಸಿದ್ದರು. ಅಲ್ಲದೆ ದಲಿತ ಸಂಘಟನೆ ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಬಹುವರ್ಷಗಳಿಂದ ಇದ್ದ ನಿಷೇಧ ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.

ದಲಿತ ಸಂಘಟನೆಯ ನಾಯಕರು ಪ್ರತಿಕ್ರಿಯಿಸಿ, ನಮ್ಮ ಹೋರಾಟಕ್ಕೆ ಸಂದ ಜಯ ಇದಾಗಿದೆ. ಇನ್ನೂ 339 ದೇವಾಲಯಗಳಲ್ಲಿ ಮಹಿಳೆಯರು ಮತ್ತು ದಲಿತರ ಪ್ರವೇಶಕ್ಕೆ ನಿಷೇಧವಿದ್ದು, ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದಿದ್ದಾರೆ.

No comments:

Post a Comment