ಲಾಸ್ಏಂಜಲೀಸ್: ಜೀವನವೆಂದ ಮೇಲೆ ಒತ್ತಡವಿದ್ದದ್ದೇ. ಆದರೆ ಒತ್ತಡವು ಪುರುಷರಲ್ಲಿ ಮತ್ತು ಮಹಿಳೆಯರಲ್ಲಿ ಭಿನ್ನವಾಗಿರುತ್ತದೆ, ಅದಕ್ಕೆ ಮಿದುಳು ಭಿನ್ನ ಪ್ರತಿಕ್ರಿಯೆ ನೀಡುತ್ತದೆ ಎಂದು ನೂತನ ಸಂಶೋಧನೆ ತಿಳಿಸಿದೆ. ಒತ್ತಡಕ್ಕೆ ಮಿದುಳು ನೀಡುವ ಪ್ರತಿಕ್ರಿಯೆಯಲ್ಲಿ ಪುರುಷರ ಮತ್ತು ಮಹಿಳೆಯರ ಹೃದಯ ಬಡಿತ, ರಕ್ತದೊತ್ತಡ ಕೂಡಾ ಭಿನ್ನವಾಗಿರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಎಂಆರ್ಐ ಎಂಬ ಉಪಕರಣ ಬಳಸಿ ಮಿದುಳಿನ ಕಾರ್ಯಚಟುವಟಿಕೆಯನ್ನು ಅಧ್ಯಯನ ಮಾಡಿದ್ದು,
ಪುರುಷನ ಮತ್ತು ಮಹಿಳೆಯ ವಿವಿಧ ಚಟುವಟಿಕೆ, ಭಾವನೆಗೆ ಮಿದುಳು ಸ್ಪಂದಿಸುವ ರೀತಿ ಪರಸ್ಪರ ವಿರುದ್ಧವಾಗಿರುತ್ತದೆ ಎಂದು ತಿಳಿದುಬಂದಿದೆ. ಪುರುಷರ ಮಿದುಳು ಶೀಘ್ರ ಪ್ರತಿಕ್ರಿಯೆ ನೀಡಿದರೆ, ಮಹಿಳೆಯರ ಮಿದುಳು ಸ್ವಲ್ಪ ವಿಳಂಬ ಪ್ರತಿಕ್ರಿಯೆ ನೀಡುತ್ತದೆ ಎಂದು ಹೇಳಲಾಗಿದೆ. ಮಿದುಳನ್ನು ಎಡ ಮತ್ತು ಬಲ ಭಾಗವಾಗಿ ವಿಂಗಡಿಸಿ, ಅದನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡಲಾಗಿದೆ. ರಕ್ತದೊತ್ತಡದಲ್ಲಿನ ಏರುಪೇರು ಮಿದುಳಿನ ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ, ಅದು ಕ್ರಿಯೆಯನ್ನು ನಿಯಂತ್ರಿಸುತ್ತದೆ. ಅದರಲ್ಲಿ ಸಾಮಾನ್ಯ ರೀತಿಯ ಒತ್ತಡ ಮತ್ತು ತೀಕ್ಷ್ಣ ಒತ್ತಡ ಎಂಬ ಎರಡು ವಿಧವಿರುತ್ತದೆ ಎಂದು ಸಂಶೋಧನೆ ಹೇಳಿದೆ.Sunday, 17 July 2016
Subscribe to:
Post Comments (Atom)
No comments:
Post a Comment