Saturday 9 July 2016

ಕೇಂದ್ರ ಸರ್ಕಾರಿ ನೌಕರರ ಆರಂಭಿಕ ವೇತನವನ್ನು 20 ಸಾವಿರ ನಿಗದಿಪಡಿಸುವ ಸಾಧ್ಯತೆ


ನವದೆಹಲಿ: ಏಳನೇ ವೇತನ ಆಯೋಗದ ಶಿಫಾರಸ್ಸುಗಳನ್ನು ನಿರಾಕರಿಸಿರುವ ಕೇಂದ್ರ ಸರ್ಕಾರಿ ನೌಕರರು ಆರಂಭಿಕ ವೇತನದಲ್ಲಿ ಮತ್ತು ಫಿಟ್ ಮೆಂಟ್ ಸೂತ್ರದಲ್ಲಿ ಮಾರ್ಪಾಡುಗಳನ್ನು ಮಾಡಲು ಒತ್ತಾಯಿಸಿದ್ದಾರೆ. ಈ ಸಂಬಂಧ ಸರ್ಕಾರಿ ನೌಕರರ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸಲು ಉನ್ನತ ಮಟ್ಟದ ಸಮಿತಿಗೆ ಸರ್ಕಾರ ಸೂಚಿಸಿದೆ.ಕೇಂದ್ರ ಸರ್ಕಾರಿ ನೌಕರರ ಒಕ್ಕೂಟ ಬೇಡಿಕೆಯಿಟ್ಟಿರುವ ನೌಕರರ ಕನಿಷ್ಠ ವೇತನ 26 ಸಾವಿರ ರೂಪಾಯಿಗಳನ್ನು ಈಡೇರಿಸಲು ಸಾಧ್ಯವಿಲ್ಲ. ಕನಿಷ್ಠ
ವೇತನವನ್ನು 20 ಸಾವಿರಕ್ಕೆ ಹೆಚ್ಚಿಸಬಹುದು ಎಂದು ಸರ್ಕಾರ ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಏಳನೇ ವೇತನ ಆಯೋಗದ ಶಿಫಾರಸ್ಸುಗಳ ಕುರಿತು ಅಂತಿಮ ನಿರ್ಧಾರಕ್ಕೆ ಬರುವ ಮುನ್ನ ನೌಕರರ ಒಕ್ಕೂಟಕ್ಕೆ ತಮ್ಮ ಬೇಡಿಕೆಯನ್ನು ಮಂಡಿಸಿ ಚರ್ಚಿಸಲು ಅವಕಾಶವನ್ನು ಸರ್ಕಾರ ನೀಡಿದೆ

No comments:

Post a Comment