Wednesday 13 July 2016

Exam-Oriented-Current-Affairs-Dated-13-07-2016-www.KICAonline.com-kannada

ಬೆಂಗಳೂರು: ಕೃಷಿ ತಂತ್ರಜ್ಞಾನದ ಬಗ್ಗೆ ಪ್ರಸಕ್ತ ವರ್ಷ 10,300 ರೈತರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ. ವಿಧಾನ ಪರಿಷತ್ತಿನಲ್ಲಿ ಸದಸ್ಯ ಬಸನಗೌಡ ಆರ್‌. ಪಾಟೀಲ್‌ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಕೃಷಿ ಸಚಿವ ಕೃಷ್ಣ ಬೈರೇಗೌಡ ಉತ್ತರಿಸಿದ್ದಾರೆ.ನೂತನ ಕೃಷಿ ತಂತ್ರಜ್ಞಾನಗಳ ಬಗ್ಗೆ ಕೃಷಿ ಇಲಾಖೆಯಿಂದ ತರಬೇತಿ, ಪ್ರವಾಸ, ಕೃಷಿ ಅಭಿಯಾನ, ಪ್ರಾತ್ಯಕ್ಷಿಕೆಗಳು, ಕೃಷಿ ಮೇಳ ಮುಖಾಂತರ ರೈತರಿಗೆ ಮಾಹಿತಿ ತಲುಪಿಸಲಾಗುತ್ತದೆ. ಭೂ ಸಮೃದ್ಧಿ ಯೋಜನೆಯಡಿ ಕಳೆದ


ಬೆಂಗಳೂರು: ಚಾವಣಿ ಸೌರವಿದ್ಯುತ್‌ ಯೋಜನೆಯಡಿ 2018ರೊಳಗೆ 400 ಮೆಗಾವಾಟ್‌ ಸಾಮರ್ಥ್ಯದ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ವಿಧಾನ ಪರಿಷತ್ತಿನಲ್ಲಿ ಸದಸ್ಯ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಲಿಖಿತ ಉತ್ತರ ನೀಡಿದ್ದಾರೆ.ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಚಿವಾಲಯದಿಂದ ಎಲ್ಲ ಸರ್ಕಾರಿ ಮತ್ತು ಅರೆ ಸರ್ಕಾರಿ ಕಟ್ಟಡಗಳ ಮೇಲೆ ಸೌರಶಕ್ತಿ ಚಾವಣಿ ಘಟಕಗಳನ್ನು

ಬೀಜಿಂಗ್ (ಪಿಟಿಐ): ದಕ್ಷಿಣ ಚೀನಾ ಸಮುದ್ರಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿ ನೀಡಿರುವ ತೀರ್ಪು ಅಲ್ಲಗಳೆದಿರುವ ಚೀನಾ, ತೀರ್ಪಿನ ವಿರುದ್ಧ ಶ್ವೇತಪತ್ರ ಹೊರಡಿಸಿದೆ.ದಕ್ಷಿಣ ಚೀನಾ ಸಮುದ್ರದ ಮೇಲಿನ ಚೀನಾದ ಹಕ್ಕು ಪ್ರತಿಪಾದನೆಗೆ ಕಾನೂನಿನ ಮಾನ್ಯತೆ ಇಲ್ಲ ಎಂದು ನ್ಯಾಯಮಂಡಳಿಯು ಮಂಗಳವಾರ ತೀರ್ಪು ನೀಡಿದೆ.ಚೀನಾ ಫಿಲಿಪ್ಪೀನ್ಸ್‌ನ ಸಾರ್ವಭೌಮ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತಿದ್ದು, ಸಮುದ್ರದಲ್ಲಿ ಕೃತಕ ದ್ವೀಪಗಳನ್ನು ನಿರ್ಮಿಸುವ

ಕಿಂಗ್ಸ್‌ಟನ್‌ (ಪಿಟಿಐ):  ವೆಸ್ಟ್‌ ಇಂಡೀಸ್‌ ತಂಡದ ವೇಗಿ ಜೆರೋಮ್‌ ಟೇಲರ್‌ ಅವರು ಮಂಗಳವಾರ ಟೆಸ್ಟ್‌ ಕ್ರಿಕೆಟ್‌ ಬದುಕಿಗೆ ವಿದಾಯ ಹೇಳಿದ್ದಾರೆ. ಆದರೆ ಸೀಮಿತ ಓವರ್‌ಗಳ ಮಾದರಿ ಯಲ್ಲಿ ಅವರು ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.32 ವರ್ಷದ ಟೇಲರ್‌ ಅವರು 46 ಟೆಸ್ಟ್‌ ಪಂದ್ಯಗಳನ್ನಾಡಿದ್ದು 130 ವಿಕೆಟ್‌ ಉರುಳಿಸಿದ್ದಾರೆ. 2003ರಲ್ಲಿ ಶ್ರೀಲಂಕಾ ವಿರುದ್ಧ ಆಡುವ

 -ನನಗೆ ತುರ್ತಾಗಿ ಹಣ ಬೇಕಾಗಿದೆ. ಹೆಂಡತಿಯನ್ನು ಹೆರಿಗೆ ಆಸ್ಪತ್ರೆಗೆ ಸೇರಿಸಿದ್ದೇನೆ. ಆಸ್ಪತ್ರೆಯವರು ಹಣ ಕೇಳುತ್ತಿದ್ದಾರೆ. ಹೇಗಾದರೂ ಹಣ ಹೊಂದಿಸಿಎನ್ನುವ ಮೊಬೈಲ್‌ ಕರೆಯೊಂದು  ಮಧ್ಯರಾತ್ರಿ 12 ಗಂಟೆ ಸುಮಾರಿಗೆ   ಬರುತ್ತಿದ್ದಂತೆ, ‘ಆಯ್ತು, ಚಿಂತಿತರಾಗಬೇಡಿ. ಮೊಬೈಲ್‌, ಆಧಾರ್‌ ಸ್ಕ್ಯಾನರ್‌ (ಬಯೊಮೆಟ್ರಿಕ್ಸ್‌ ಸಾಧನ) ಮತ್ತು  ನಗದು ತೆಗೆದುಕೊಂಡು ಆಸ್ಪತ್ರೆಗೇ

ಹೊಸದಿಲ್ಲಿ : ಕೇಂದ್ರ ಸರಕಾರಕ್ಕೆ ಭಾರೀ ದೊಡ್ಡ ಹಿನ್ನಡೆ ಎನಿಸುವ ರೀತಿಯಲ್ಲಿ ಸುಪ್ರೀಂ ಕೋರ್ಟ್‌ ಇಂದು ಬುಧವಾರ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಅರುಣಾಚಲ ಪ್ರದೇಶದಲ್ಲಿನ ಕಾಂಗ್ರೆಸ್‌ ಸರಕಾರದ ಪತನಕ್ಕೆ ಕಾರಣವಾಗುವಂತೆ ರಾಜ್ಯಪಾಲ ಜ್ಯೋತಿ ರಾಜಖೋವಾ ಅವರು ಹೊರಡಿಸಿದ್ದ ಎಲ್ಲ ಆದೇಶಗಳನ್ನು ರದ್ದುಪಡಿಸಿ, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಸರಕಾರವನ್ನು ಪುನರ್‌

ಧಾರವಾಡ: ರಾಜ್ಯದ ಮೊದಲ ಐಐಟಿಯು ಜು.31ಕ್ಕೆ ಉದ್ಘಾಟನೆಗೊಳ್ಳಲಿದ್ದು, ಆಗಸ್ಟ್‌ 1ರಿಂದ ತರಗತಿಗಳು ಆರಂಭವಾಗಲಿವೆ. ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ್‌ ಐಐಟಿಗೆ ಚಾಲನೆ ನೀಡಲಿದ್ದಾರೆ.ಧಾರವಾಡ ಹೈಕೋರ್ಟ್‌ ಸಮೀಪದಲ್ಲಿರುವ ವಾಲಿ¾ ಕಟ್ಟಡದಲ್ಲಿ ತಾತ್ಕಾಲಿಕ ಕ್ಯಾಂಪಸ್‌ ಕಾರ್ಯನಿರ್ವಹಿಸಲಿದೆ. ಆರಂಭದಲ್ಲಿ

ನವದೆಹಲಿ: ಸಂಪುಟ ಪುನಾರಚನೆಯಾದ ಒಂದೇ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಂತ್ರಿಮಂಡಲದಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಿದ್ದಾರೆ. ಅಲ್ಪಸಂಖ್ಯಾತ ವ್ಯವಹಾರಗಳ ಹೊಣೆ ಹೊತ್ತಿದ್ದ ಹಿರಿಯ ಸಚಿವೆ ನಜ್ಮಾ ಹೆಪು¤ಲ್ಲಾ ಮತ್ತು ಕರ್ನಾಟಕದ ದಾವಣಗೆರೆ ಸಂಸದರಾದ ಭಾರಿ ಕೈಗಾರಿಕಾ ಖಾತೆ ರಾಜ್ಯ ಮಂತ್ರಿ ಜಿ.ಎಂ. ಸಿದ್ದೇಶ್ವರ

 ಹೊಸದಿಲ್ಲಿ : ಕೇಂದ್ರ ಸಚಿವ ಸಂಪುಟ ಇಂದು ಬುಧವಾರ ಮಾದರಿ ಮಳಿಗೆ ಮತ್ತು ಸಂಸ್ಥೆ ಕಾಯಿದೆಗೆ ಅನುಮೋದನೆ ನೀಡಿದೆ. ಇದರ ಪರಿಣಾವಾಗಿ ಇನ್ನು  ಮಳಿಗೆಗಳು, ಚಿಲ್ಲರೆ ವ್ಯವಹಾರದ ಅಂಗಡಿಗಳು, ಮಾಲ್‌ಗ‌ಳು ವಾರದ ಏಳು ದಿನವೂ, ದಿನದ 24 ತಾಸುಗಳ ಕಾಲವೂ ತೆರೆದುಕೊಂಡಿರಬಹುದಾಗಿದೆ.ಈ ಮಾದರಿ ಕಾಯಿದೆಯಿಂದಾಗಿ ದೇಶಾದ್ಯಂತ ಎಲ್ಲ ರಾಜ್ಯಗಳಲ್ಲಿನ್ನು ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಏಕರೂಪದ ನೀತಿ - ನಿಮಯಗಳನ್ನು ಜಾರಿಗೆ ತರಬಹುದಾಗಿದೆ. ಈಗ ವಾಣಿಜ್ಯ

ನವದೆಹಲಿ: ರಾಷ್ಟ್ರೀಯ ಮೇಲ್ಮನವಿ ನ್ಯಾಯಾಲಯ (ನ್ಯಾಷನಲ್ ಕೋರ್ಟ್ ಆಫ್ ಅಪೀಲ್) ಸ್ಥಾಪನೆ ಸಂಬಂಧ ಸಲ್ಲಿಸಲಾದ ಮನವಿಯನ್ನು ಸುಪ್ರೀಂಕೋರ್ಟ್ ಬುಧವಾರ ಸಂವಿಧಾನ ಪೀಠಕ್ಕೆ ಒಪ್ಪಿಸಿತು.ಪ್ರಮುಖ ನಗರಗಳ ಪ್ರಾದೇಶಿಕ ಪೀಠಗಳ ಜೊತೆಗೆ ರಾಷ್ಟ್ರೀಯ ಮೇಲ್ಮನವಿ ನ್ಯಾಯಾಲಯ ಸ್ಥಾಪಿಸಲು ಕೋರಿದ ಮನವಿಯನ್ನು ಕೇಂದ್ರ ಸರ್ಕಾರವು ಪ್ರಬಲವಾಗಿ ವಿರೋಧಿಸಿತ್ತು. ಇದು ಫಲರಹಿತ ಪ್ರಯತ್ನ’, ವಿಚಾರಣಾ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ 2 ಕೋಟಿ ಪ್ರಕರಣಗಳ

ವಾಷಿಂಗ್ಟನ್: ಭಯೊತ್ಪಾದನೆ ವಿರುದ್ಧ ಹೋರಾಟ ನಡೆಸುವುದಾಗಿ ಅಮೆರಿಕದಿಂದ ಆರ್ಥಿಕ ಸಹಾಯ ಪಡೆದು ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಆರೋಪ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಧನ ಸಹಾಯ ಕಡಿತ ಮಾಡಬೇಕೆಂದು ಅಮೆರಿಕದಲ್ಲಿ ಒತ್ತಡ ಹೆಚ್ಚುತ್ತಿದೆ.ಭಯೋತ್ಪಾದನೆ ವಿರುದ್ಧ ಪಾಕಿಸ್ತಾನದ ಧೋರಣೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಸಹನೆ ಕಡಿಮೆಯಾಗುತ್ತಿದೆ. ಪಾಕಿಸ್ತಾನಕ್ಕೆ ಧನಸಹಾಯ ಕಡಿತಗೊಳಿಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಪಾಕ್

ನವದೆಹಲಿ: ಮಹದಾಯಿ ಜಲವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಒಂದು ವಾರ ಮುಂದೂಡಬೇಕು ಎಂಬ ಗೋವಾ ಬೇಡಿಕೆಗೆ ನ್ಯಾಯಾಧಿಕರಣದ ನ್ಯಾ. ಜೆ.ಎಸ್. ಪಾಂಚಾಲ್ ನೇತೃತ್ವದ ತ್ರಿಸದಸ್ಯ ಪೀಠ ಅಸಮಾಧಾನ ವ್ಯಕ್ತಪಡಿಸಿದ್ದು, ನಾವು ವಿಚಾರಣೆ ಮುಂದೂಡಲೇ ಇಲ್ಲಿ ಕುಳಿತಿದ್ದೇವೆ ಎಂದು ನೀವು ಭಾವಿಸಿದಂತಿದೆ ಎಂದು ಕಟುವಾಗಿ

ವಾಷಿಂಗ್ಟನ್: ಭಾರತದ ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರಕ್ಕೆ ಸಹಸ್ರ ಕೋಟಿ ರೂ. ಬಂಡವಾಳದ ಅಗತ್ಯವಿದ್ದು, ಉದ್ಯಮಿಗಳು ಹೂಡಿಕೆ ಮಾಡಲು ಇದು ಸುವರ್ಣ ಅವಕಾಶ ಎಂದು ಸಾರಿಗೆ, ಹೆದ್ದಾರಿ ಮತ್ತು ಜಲಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ
ಅಮೆರಿಕ-ಭಾರತ ವಹಿವಾಟು ಮಂಡಳಿ (ಯುಎಸ್​ಐಬಿಎಸ್) ಸಭೆಯಲ್ಲಿ ಮಾತನಾಡಿದ ಅವರು, ಅಮೆರಿಕದ ಉದ್ಯಮಿಗಳಿಗೆ

ನವದೆಹಲಿ: ಪೂರ್ವಾನ್ವಯವಾಗಿ ತೆರಿಗೆ ವಸೂಲಿಗಾಗಿ ಭಾರತ ಸರ್ಕಾರದಿಂದ 5.6 ಬಿಲಿಯನ್ (560 ಕೋಟಿ) (ಅಂದರೆ 37,615 ಕೋಟಿ ರೂಪಾಯಿಗಳು) ಅಮೆರಿಕನ್ ಡಾಲರ್​ಪರಿಹಾರವನ್ನು ಇಂಗ್ಲೆಂಡಿನ ಕೈರ್ನ್ ಎನರ್ಜಿ ಕೋರಿದೆ.ಪೂರ್ವಾನ್ವಯ ತೆರಿಗೆ ಕಾನೂನನ್ನು ಬಳಸಿ ತನ್ನ ಮೇಲೆ 10,247 ಕೋಟಿ ರೂಪಾಯಿ ತೆರಿಗೆಯನ್ನು


ನವದೆಹಲಿ: ತಂತ್ರಜ್ಞಾನ ದಿಗ್ಗಜ ಗೂಗಲ್​ನಿಂದ 20 ಲಕ್ಷ ಭಾರತೀಯ ಪ್ರತಿಭೆಗಳಿಗೆ ಮೊಬೈಲ್ ಅಭಿವೃದ್ಧಿ ಕಾರ್ಯಕ್ರಮವಾದ ಆಂಡ್ರಾಯ್್ಡ ನೈಪುಣ್ಯತೆ ಮತ್ತು ಪ್ರಮಾಣ ಪತ್ರಎಂಬ ತರಬೇತಿ ಶಿಬಿರವನ್ನು ಸರ್ಕಾರಿ ಸಹಯೋಗದೊಂದಿಗೆ ನಡೆಸಲು ಗೂಗಲ್ ಮುಂದಾಗಿದೆ.ಈ ಕಾರ್ಯಕ್ರಮದಲ್ಲಿ 2 ಕೋಟಿ ಮೊಬೈಲ್ ಅಭಿವೃದ್ಧಿದಾರರಿಗೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ

ಲಖನೌ: ಒಂದೇ ದಿನ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 5 ಕೋಟಿ ಸಸಿಗಳನ್ನು ನೆಡುವ ಮೂಲಕ ಉತ್ತರ ಪ್ರದೇಶ ಸರ್ಕಾರವು ಸೋಮವಾರ ವಿಶ್ವದಾಖಲೆ ನಿರ್ಮಾಣಕ್ಕೆ ಸಜ್ಜಾಗಿದೆ.ವಿಶ್ವದಲ್ಲೇ ಇದು ದಾಖಲೆ. ಭೂಮಿಯ ಮೇಲೆ ಎಲ್ಲೂ ಒಂದೇ ದಿನ ಇಷ್ಟೊಂದು ಸಸಿಗಳನ್ನು ನೆಟ್ಟ ದಾಖಲೆ ಇಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಪ್ರತಿಪಾದಿಸಿದೆ.

ಮೇಡನ್​ಹೆಡ್​ನ ಸಂಸದೆ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ | 26 ವರ್ಷಗಳ ಬಳಿಕ ಮಹಿಳೆಗೆ ಪ್ರಧಾನಮಂತ್ರಿ ಪಟ್ಟ
ಲಂಡನ್: ಬ್ರಿಟನ್​ನ ನೂತನ ಪ್ರಧಾನಿಯಾಗಿ ಕನ್ಸರ್ವೆಟಿವ್ ಪಕ್ಷದ ತೆರೇಸಾ ಮೇ ಬುಧವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಮೂಲಕ 26 ವರ್ಷಗಳ ಬಳಿಕ ಮಹಿಳೆಯ ಕೈಗೆ ದೇಶದ ಆಡಳಿತಸೂತ್ರ ಸಿಕ್ಕಂತಾಗಲಿದೆ. ಮಾರ್ಗರೇಟ್ ಥ್ಯಾಚರ್ ಬಳಿಕ ಪ್ರಧಾನಿ ಹುದ್ದೆಗೇರಲಿರುವ ಎರಡನೇ ಮಹಿಳೆ ಎಂಬ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ. ಕಳೆದ ಆರು ವರ್ಷಗಳಿಂದ

 ಬ್ರೆಸಿಲ್: ಅಗಸ್ಟ್ 5ರಿಂದ ಆರಂಭವಾಗಲಿರುವ ರಿಯೊ ಒಲಿಂಪಿಕ್ ಕ್ರೀಡಾಕೂಟಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ಬ್ರೆಜಿಲಿಯಾ ನಗರಕ್ಕೆ ಆದರದ ಸ್ವಾಗತ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧಿಕೃತವಾಗಿ ಘೋಷಿಸಿದೆ.ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷೆ ನಾವಲ್ ಇಲ್ ಮೌತವಾಕೆಲ್ ಪ್ರತಿಕ್ರಿಯಿಸಿ, ಪ್ರವಾಸಿಗರು ಹಾಗೂ ಕ್ರೀಡಾಳುಗಳ ಸ್ವಾಗತಕ್ಕೆ ನಗರಗಳು ಸಿದ್ಧವಾಗಿವೆ. ಈಗಾಗಲೇ ಸ್ಥಳೀಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ನಿರ್ಧರಿತ ಸಮಯದಲ್ಲಿ ಪಂದ್ಯಗಳ

 ಲಂಡನ್: ಬ್ರಿಟನ್ ಜನರ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ ವಿಶ್ವ ನಂ.2 ಆಂಡಿ ಮರ್ರೆ ವಿಂಬಲ್ಡನ್ ಚಾಂಪಿಯನ್ ಆಗಿದ್ದಾರೆ. ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಆಂಡಿ ಮರ್ರೆ, ಮೊದಲ ಬಾರಿಗೆ ಗ್ರಾಂಡ್ ಸ್ಲಾಂ ಫೈನಲ್​ಗೇರಿದ್ದ ಕೆನಡದ ಮಿಲೋಸ್ ರಾವೊನಿಕ್​ರನ್ನು ನೇರ ಸೆಟ್​ಗಳಲ್ಲಿ ಮಣಿಸಿದರು. ಈ ಮೂಲಕ ವೃತ್ತಿಜೀವನದ ಮೂರನೇ ಹಾಗೂ 2013ರ ಬಳಿಕ ಮೊದಲ ಬಾರಿಗೆ ಗ್ರಾಂಡ್ ಸ್ಲಾಂ ಟ್ರೋಫಿಗೆ ಮುತ್ತಿಟ್ಟರು.ಆಲ್ ಇಂಗ್ಲೆಂಡ್

ಪ್ಯಾರಿಸ್: ಕ್ರಿಸ್ಟಿಯಾನೋ ರೊನಾಲ್ಡೋ ಗಾಯಗೊಂಡು ನಿರ್ಗಮಿಸಿದ ಬಳಿಕವೂ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಪೋರ್ಚುಗಲ್ ತಂಡ ಹೆಚ್ಚುವರಿ ಸಮಯದಲ್ಲಿ ಎಡರ್ ಗಳಿಸಿದ ಆಕರ್ಷಕ ಏಕೈಕ ಗೋಲಿನ ನೆರವಿನಿಂದ ಪ್ರಸಕ್ತ ಸಾಲಿನ ಯುರೊ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.ಭಾನುವಾರ ರಾತ್ರಿ ನಡೆದ ರೋಚಕ ಪಂದ್ಯದಲ್ಲಿ ಆತಿಥೇಯ ಫ್ರಾನ್ಸ್ ತಂಡವನ್ನು ಪೋರ್ಚುಗಲ್ ತಂಡ 1-0 ಗೋಲುಗಳ ಅಂತರದಿಂದ ಮಣಿಸಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು.

  ದಾರ್-ಎಸ್-ಸಲಾಮ್ (ತಾಂಜಾನಿಯ): ಭಾರತದಿಂದ ತಾಂಜಾನಿಯಾದ ಝುಂಝಿಬಾರ್​ನಲ್ಲಿ ನೀರು ಸರಬರಾಜು ವ್ಯವಸ್ಥೆಗೆ 920 ಲಕ್ಷ ಡಾಲರ್ ನೆರವು ನೀಡಿಕೆ ಸೇರಿದಂತೆ ವಿವಿಧ ರಂಗಗಳಲ್ಲಿ ಪರಸ್ಪರ ಸಹಕರಿಸುವ ಐದು ಒಪ್ಪಂದಗಳಿಗೆ ಭಾರತ ಮತ್ತು ತಾಂಜಾನಿಯಾ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಸಹಿ ಹಾಕಿದವು.ತಾಂಜಾನಿಯ ಅಧ್ಯಕ್ಷ ಜಾನ್ ಮಗುಫುಲಿ ಅವರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತುಕತೆ ನಡೆಸಿದ ಬಳಿಕ ಉಭು ನಾಯಕರ

  ವಾಷಿಂಗ್ಟನ್: ಮಂಗಳನ ಮೇಲೆ ಕಾರ್ಬನ್ ಡೈಆಕ್ಸೈಡ್ ಘನೀಕೃತ ರೂಪದಲ್ಲಿರುವುದನ್ನು ನಾಸಾದ ನೌಕೆ ಕಂಡುಹಿಡಿದಿದೆ. ಕೆಂಪು ಗ್ರಹದ ಧೂಳಿನ ಭಾಗಗಳಲ್ಲಿ ಚಳಿಗಾಲದ ರಾತ್ರಿಗಳಲ್ಲಿ ಈ ಕಾರ್ಬನ್ ಡೈ ಆಕ್ಸೈಡ್ ತೆಳುವಾದ ಹಿಮದ ಪದರವಾಗಿ ರೂಪುಗೊಳ್ಳುತ್ತದೆ. ಬೆಳಗಾಗುವ ಹೊತ್ತಿಗೆ ಇವು ಆವಿಯಾಗುತ್ತದೆ. ಈ ಪ್ರದೇಶದಲ್ಲಿ ನಿತ್ಯದ ತಾಪಮಾನ ಭಾರಿ ಪ್ರಮಾಣದಲ್ಲಿ ಏರಿಳಿತವಾಗುತ್ತದೆ. ಅಲ್ಲದೆ ಉಷ್ಣತೆ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಈ ಭಾಗದಲ್ಲಿ ಕಡಿಮೆಯಿರುತ್ತದೆ. ಮಂಗಳನ ಥಾರ್ಸಿಸ್,

ನೈರೋಬಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಕೀನ್ಯಾ ಅಧ್ಯಕ್ಷ ಉಹುರು ಕೀನ್ಯಟ್ಟ ಅವರ ಸಮ್ಮುಖದಲ್ಲಿ ಭಾರತ ಮತ್ತು ಕೀನ್ಯಾ ಸೋಮವಾರ 7 ಮಹತ್ವದ ಒಪ್ಪಂದ/ ತಿಳುವಳಿಕೆ ಪತ್ರಗಳಿಗೆ ಸಹಿ ಮಾಡಿದವು.ಕೀನ್ಯಾ ಅಧ್ಯಕ್ಷ ಉಹುರು ಅವರ ಜೊತೆಗಿನ ಮಾತುಕತೆಗಳ ಬಳಿಕ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ರಕ್ಷಣೆ, ಸೈಬರ್ ಭದ್ರತೆ, ಮಾದಕ ದ್ರವ್ಯಗಳು ಹಾಗೂ ಮಾನವ ಕಳ್ಳಸಾಗಣೆ ಹಾವಳಿ ನಿವಾರಣೆ ನಿಟ್ಟಿನಲ್ಲಿ ರಕ್ಷಣಾ


 ನವದೆಹಲಿ: ಆರ್ಥಿಕ ಸಂಕಷ್ಟದಿಂದ ಎಂಟು ವರ್ಷದ ಹಿಂದೆ ಸ್ಥಗಿತಗೊಂಡಿದ್ದ ನ್ಯಾಷನಲ್ ಹೆರಾಲ್ಡ್ ಹಾಗೂ ಮತ್ತೆರಡು ಪತ್ರಿಕೆಗಳನ್ನು ಮರು ಪ್ರಕಾಶನಗೊಳಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಪತ್ರಿಕೆಗಳನ್ನು ರೀಲಾಂಚ್ ಮಾಡುವ ಪ್ರಕಟಣೆಯನ್ನು ಈ ವಾರ ಘೊಷಿಸಲಿದೆ. ಪಬ್ಲಿಕೇಷನ್ಸ್​ನಬೋರ್ಡ್ ಆಫ್ ಡೈರೆಕ್ಟರ್​ಗಳು ಈ ವಾರ ಸಭೆ ಸೇರಿ ಪತ್ರಿಕೆಯ ಹೊಸ ಸಂಪಾದಕರ ಹೆಸರನ್ನು ಸೂಚಿಸಲಿದ್ದಾರೆ ಎಂದು ಕಾಂಗ್ರೆಸ್​ನ ಖಜಾಂಚಿ ಮೋತಿಲಾಲ್ ವೋರಾ ತಿಳಿಸಿದ್ದಾರೆ. 1938ರಲ್ಲಿ ಲಖನೌದಲ್ಲಿ

ನವದೆಹಲಿ: ಹವಾಮಾನದಲ್ಲಿನ ವೈಪರೀತ್ಯದಿಂದಾಗಿ 2030ರ ವೇಳೆಗೆ ಎರಡು ಲಕ್ಷಕ್ಕೂ ಅಧಿಕ ಜನ ಪ್ರತಿವರ್ಷ ಸಾವನ್ನಪ್ಪಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜು ಮಾಡಿದೆ.ಈ ಅವಧಿಯಲ್ಲಿ ಇಷ್ಟೊಂದು ಮಂದಿ ಸಾವನ್ನಪ್ಪಲು ಮೂಲ ಕಾರಣ ಅಪೌಷ್ಟಿಕತೆ, ಮಲೇರಿಯಾ, ಅತಿಸಾರ ಹಾಗೂ ಅತಿಯಾದ ಸೂರ್ಯನ ಶಾಖವೇ ಕಾರಣ. ಮುಂಬರುವ ವರ್ಷಗಳಲ್ಲಿ ವಿಶ್ವದದಲ್ಲಿನ ವಾತಾವರಣ ಸಂಪೂರ್ಣ ಬದಲಾವಣೆ ಕಾಣಲಿದೆ. ಇದರಿಂದಾಗಿ ಸರಿಸುಮಾರು 2.50 ಲಕ್ಷ ಜನರು

  ಚಂಡಿಗಡ (ಪಿಟಿಐ): ಹಸುಗಳ ಕ್ಷೇಮಾಭಿವೃದ್ಧಿಗಾಗಿ ಹರಿಯಾಣದ ಬಿಜೆಪಿ  ಸರ್ಕಾರ ಹಸು ಸೆಸ್‌ವಿಧಿಸಲು ಮುಂದಾಗಿದೆ.
ಪಂಜಾಬ್‌ನಲ್ಲಿ ಈಗಾಗಲೇ ಈ ವ್ಯವಸ್ಥೆ ಜಾರಿಯಲ್ಲಿದೆ. ಹರಿಯಾಣ ಗೋವು ಸೇವಾ ಆಯೋಗ ಹಸು ಸೆಸ್‌ಕುರಿತಾದ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿದೆ.ಬ್ಯಾಕ್ವೆಂಟ್‌ ಹಾಲ್‌ ಬುಕ್ಕಿಂಗ್‌ ಮೇಲೆ ₹2100, ಮನರಂಜನೆ ತೆರಿಗೆ ಸಂಗ್ರಹದ ಮೇಲೆ ಶೇಕಡ 5ರಷ್ಟು ಮತ್ತು  ಆಹಾರ ಧಾನ್ಯಗಳ ಪ್ರತಿ ಚೀಲದ ಮೇಲೆ ₹1  ಹಾಗೂ ಸರ್ಕಾರದ ನಿರ್ವಹಣೆಯಲ್ಲಿ ನಡೆಯುತ್ತಿರುವ ದೇವಸ್ಥಾನಗಳಿಂದ ಶೇಕಡ 50ರಷ್ಟು ಹಣ ಪಡೆದು ರಾಜ್ಯದಲ್ಲಿರುವ ಹಸುಗಳ ಅಭಿವೃದ್ಧಿಗೆ ಬಳಸಬಹುದು ಎಂದು ಅಯೋಗ

  ನವದೆಹಲಿ: ಭೂಮಿ ಒಡೆತನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ಮಸೂದೆಯನ್ನು ಸಿದ್ಧಪಡಿಸಿದೆ.ಹೊಸ ಕಾಯ್ದೆಯು, 2011ರಲ್ಲಿ ಯುಪಿಎ ಸರ್ಕಾರ ಭೂಮಿ ಒಡೆತನಕ್ಕೆ ಸಂಬಂಧಿಸಿದಂತೆ ತಂದಿರುವ ಕಾಯ್ದೆಯ ಸುಧಾರಿತ ಆವೃತ್ತಿ ಆಗಿರಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಮೂಲಗಳು ತಿಳಿಸಿದೆ.ಮಸೂದೆಯನ್ನು ಕಾನೂನು ಇಲಾಖೆಯ ಪರಿಶೀಲನೆಗೆ ಕಳುಹಿಸಿ, ಅಲ್ಲಿಂದ ಬಂದ ನಂತರ 18ರಂದು ಆರಂಭವಾಗಲಿರುವ ಸಂಸತ್‌ನ ಮುಂಗಾರು  ಅಧಿವೇಶನದಲ್ಲಿ

ಬಾಲ್ಯ ವಿವಾಹ ತಡೆ, ಹದಿಹರೆಯದಲ್ಲಿ ಗರ್ಭಧಾರಣೆ ತಡೆ ಮತ್ತು ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುವಂತೆ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ವಿಶ್ವಸಂಸ್ಥೆಯ ಗುರಿಹದಿಹರೆಯದ ಹೆಣ್ಣು ಮಕ್ಕಳ ಸಾಮಾಜಿಕ ಸಮಸ್ಯೆಗಳುಬಾಲ್ಯ ವಿವಾಹ ವ್ಯಾಪಕ: 9ರಲ್ಲಿ 1 ಹೆಣ್ಣು ಮಗುವಿಗೆ 15ರೊಳಗೆ ಮತ್ತು ಮೂರರಲ್ಲಿ ಒಂದು ಹೆಣ್ಣು ಮಗುವಿಗೆ 18ರೊಳಗೆ ಮದುವೆಯಾಗುತ್ತದೆ
ಹದಿಹರೆಯದಲ್ಲಿ ಗರ್ಭಧಾರಣೆ:  18ರೊಳಗಿನ ಹೆಣ್ಣು ಮಕ್ಕಳು ಪ್ರತಿ ವರ್ಷ 73 ಲಕ್ಷ ಮಕ್ಕಳಿಗೆ ಜನ್ಮ ನೀಡುತ್ತಾರೆಆರೋಗ್ಯ,

No comments:

Post a Comment