Saturday 9 July 2016

ಖಂಡಾಂತರ ಕ್ಷಿಪಣಿಯನ್ನು ಪರೀಕ್ಷಿಸಿದ ಉತ್ತರ ಕೊರಿಯಾ

 ಸಿಯೋಲ್: ಜಲಾಂತರ್ಗಾಮಿ ನೌಕೆಯ ಮೂಲಕ ಉಡಾಯಿಸಬಹುದಾದ ಖಂಡಾಂತರ ಕ್ಷಿಪಣಿಯನ್ನು ಉತ್ತರ ಕೊರಿಯಾ ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ದಕ್ಷಿಣ ಕೊರಿಯಾದ ಅಧಿಕಾರಿಗಳು ತಿಳಿಸಿದ್ದಾರೆ.ಉತ್ತರ ಕೊರಿಯಾದ ಪೂರ್ವ ಕರಾವಳಿಯಲ್ಲಿ ಕ್ಷಿಪಣಿಯ ಪರೀಕ್ಷೆ ನಡೆಸಲಾಗಿದೆ. ಆದರೆ ಕ್ಷಿಪಣಿ ಎಷ್ಟು ದೂರ ಹಾರಿದೆ ಮತ್ತು ಎಲ್ಲಿ ಗುರಿ ಮುಟ್ಟಿದೆ ಎಂಬ ಕುರಿತು ಸ್ಪಷ್ಟವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು ದಕ್ಷಿಣ ಕೊರಿಯಾದ ರಕ್ಷಣಾ ಸಚಿವಾಲಯದ ಅಧಿಕಾರಿಗಳು
ಳಿಸಿದ್ದಾರೆ.

ಉತ್ತರ ಕೊರಿಯಾ ಜಲಾಂತರ್ಗಾಮಿ ನೌಕೆಯ ಮೂಲಕ ಉಡಾಯಿಸಬಹುದಾದ ಕ್ಷಿಪಣಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವುದು ಚಿಂತಿಸಬೇಕಾದ ವಿಷಯ. ಇದರಿಂದ ನೆರೆಹೊರೆಯ ರಾಷ್ಟ್ರಗಳ ಭದ್ರತೆಗೆ ಭಾರೀ ಧಕ್ಕೆಯಾಗಲಿದೆ. ನೀರಿನೊಳಗೆ ಸಂಚರಿಸುವ ಜಲಾಂತರ್ಗಾಮಿ ನೌಕೆಗಳನ್ನು ಪತ್ತೆ ಹಚ್ಚುವುದು ಸುಲಭದ ಕೆಲಸವಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕ ದಕ್ಷಿಣ ಕೊರಿಯಾದಲ್ಲಿ ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಸ್ಥಾಪಿಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ನಡೆಸಿದೆ. ಇದೊಂದು ಮಹತ್ವದ ಬೆಳವಣಿಗೆಯಾಗಿದ್ದು, ಉತ್ತರ ಕೊರಿಯಾದ ವಿದ್ಯಮಾನಗಳ ಕುರಿತು ನಿಗಾ ವಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

No comments:

Post a Comment