Sunday, 17 July 2016

ಸಾನಿಯಾ ಆತ್ಮಚರಿತ್ರೆ ಬಿಡುಗಡೆ



ಹೈದರಾಬಾದ್: ಟೆನಿಸ್ ತಾರೆ ಸಾನಿಯಾ ಮಿರ್ಜಾ ಆತ್ಮಚರಿತ್ರೆ ಏಸ್ ಅಗೇನ್​ಸ್ ಆಡ್ಸ್ ಪುಸ್ತಕವನ್ನು ಬಾಲಿವುಡ್ ನಟ ಶಾರುಖ್ ಖಾನ್ ಬುಧವಾರ ಬಿಡುಗಡೆಗೊಳಿಸಿದರು. ಖಾಸಗಿ ಹೋಟೆಲ್​ನಲ್ಲಿ ನಡೆದ ಸಮಾರಂಭದಲ್ಲಿ ಸಾನಿಯಾ ಕುಟುಂಬದ ಎಲ್ಲರೂ ಭಾಗವಹಿಸಿದ್ದರೂ, ಪತಿ ಶೋಯೆಬ್ ಮಲಿಕ್ ಮಾತ್ರ ಹಾಜರಿರಲಿಲ್ಲ.


ಹಾರ್ಪರ್ ಕಾಲಿನ್ಸ್ ಪ್ರಕಾಶಕರಾಗಿರುವ ಪುಸ್ತಕವನ್ನು ಸಾನಿಯಾ ಮಿರ್ಜಾ ಹಾಗೂ ಕ್ರೀಡಾಪತ್ರಕರ್ತರೂ ಆಗಿರುವ ಅವರ ತಂದೆ ಇಮ್ರಾನ್ ಬರೆದಿದ್ದಾರೆ. ‘ಮಹಿಳೆಯರಿಗೆ ನಾವು ನೀಡುವ ಪ್ರೀತಿ ಗೌರವಗಳು ಹೆಚ್ಚಾದಲ್ಲಿ ಸಾನಿಯಾರಂಥ ಹಲವು ಸಾಧಕಿಯರನ್ನು ನೋಡಲು ಸಾಧ್ಯವಿದೆ. ಸಾನಿಯಾ ನಿಜಕ್ಕೂ ರಾಕೆಟ್ ರಾಣಿ’ ಎಂದು ಶಾರುಖ್ ಹೇಳಿದರು. ಪಿಟಿ ಉಷಾ, ಮೇರಿ ಕೋಮ್ ಹಾಗೂ ಸಾನಿಯಾರಂಥ ಸಾಧಕಿಯರು ಯುವ ಆಟಗಾರರು ವೃತ್ತಿಪರವಾಗಿ ಕ್ರೀಡೆಯನ್ನು ತೆಗೆದುಕೊಳ್ಳುವಂತೆ ಮಾಡಿದ್ದಾರೆ ಎಂದು ಹೊಗಳಿದರು. ಕೇವಲ ಒಂದೇ ಒಂದು ದೂರವಾಣಿ ಕರೆಗೆ ಸಮಾರಂಭಕ್ಕೆ ಬರಲು ಒಪ್ಪಿದ ಶಾರುಖ್​ರ ಸಹಾಯವನ್ನು ಸಾನಿಯಾ ನೆನೆಸಿಕೊಂಡರು





No comments:

Post a Comment