Wednesday 13 July 2016

ತೆಲಂಗಾಣದ ವಿದೇಶಾಂಗ ಸಚಿವರಾಗಿ ಸಿಎಂ ಪುತ್ರ



ಹೈದರಾಬಾದ್: ತೆಲಂಗಾಣ ರಾಜ್ಯದ ವಿದೇಶಾಂಗ ಸಚಿವರನ್ನಾಗಿ ಮಗ ತಾರಕರಾಮ ರಾವ್​ರನ್ನು ನೇಮಕ ಮಾಡಲು ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ನಿರ್ಧರಿಸಿದ್ದಾರೆ.ವಿದೇಶಗಳ ಜತೆ ರಾಜ್ಯದ ಸಂಬಂಧ ವೃದ್ಧಿಸುವುದು ಹಾಗೂ ಎನ್​ಆರ್​ಐ ವ್ಯವಹಾರಗಳ ಬಗ್ಗೆ ಮೇಲ್ವಿಚಾರಣೆಗೆ ದೇಶದಲ್ಲಿ ಇದೇ ಮೊದಲ ಬಾರಿಗೆ ರಾಜ್ಯವೊಂದು ವಿದೇಶಾಂಗ ಸಚಿವಾಲಯ ಹೊಂದಲಿದೆ. ರಾಮ್ ರಾವ್ ಈಗಾಗಲೇ ಐಟಿ, ಕೈಗಾರಿಕೆ ಮತ್ತು ವಾಣಿಜ್ಯ, ಮುನ್ಸಿಪಲ್ ಆಡಳಿತ ಮತ್ತು ಗ್ರಾಮೀಣ ಅಭಿವೃದ್ಧಿ
ಖಾತೆಗಳನ್ನು ಉತ್ತಮವಾಗಿ ನಿರ್ವಹಿಸುತ್ತಿರುವುದರಿಂದ ಹೆಚ್ಚುವರಿ ಖಾತೆಯನ್ನು ಅವರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ತೆಲಂಗಾಣ ಸರ್ಕಾರ ತನ್ನದೇ ಆದ ಎನ್​ಆರ್​ಐ ನೀತಿ ರಚನೆಗೆ ಸಹ ಚಿಂತನೆ ನಡೆಸಿದೆ.

No comments:

Post a Comment