Saturday 9 July 2016

ಟ್ಯೂಷನ್ ಹಾವಳಿ ತಪ್ಪಿಸಲು ಬಂದಿದೆ ಹೊಸ ಸಾಫ್ಟ್​ವೇರ್

ಸಿಇಟಿ ಹಾಗೂ ಜೆಇ ಪ್ರವೇಶ ಪರೀಕ್ಷೆಗಳ ವಿದ್ಯಾರ್ಥಿಗಳ ಟ್ಯೂಷನ್ ಹಾವಳಿ ತಪ್ಪಿಸುವ ಸಲುವಾಗಿ ಬೈಟ್ ಲಾಜಿಕ್ ಕಮ್ಯೂನಿಕೇಷನ್ ಸಂಸ್ಥೆ ಇ ಟೆಸ್ಟ್ ಝೋನ್ ಸಾಫ್ಟ್​ವೇರ್ ಸಂಶೋಧಿಸಿದ್ದು,  ಇ ಟೆಸ್ಟ್ ಝೋನ್ ವ್ಯವಸ್ಥಾಪಕ ನಿರ್ದೇಶಕ ಶೇಖರ್ ರೌತ್ ಚಾಲನೆ ನೀಡಿದರು.ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳು ಸಿಇಟಿ, ಜೆಇ ಪ್ರವೇಶ
ಪರೀಕ್ಷೆಗಳ ತರಬೇತಿಗಾಗಿ ಲಕ್ಷಾಂತರ ರೂ. ಖರ್ಚು ಮಾಡುವುದಲ್ಲದೆ, ಹಗಲು, ರಾತ್ರಿ ಕಷ್ಟಪಡುತ್ತಿದ್ದಾರೆ. ಸರ್ವರಿಗೂ ಸಮಾನ ಶಿಕ್ಷಣ, ಅವಕಾಶಗಳು ದೊರೆಯಬೇಕು ಎಂಬ ಕಾರಣದಿಂದ ಈ ತಂತ್ರಾಂಶ ಸಂಶೋಧಿಸಿದ್ದು, ವಾರ್ಷಿಕ ಕೇವಲ 1,600 ರೂ.ಗಳಿಗೆ ಕೈಗೆಟುಕುವ ದರದಲ್ಲಿ ನೀಡಲಾಗುತ್ತಿದೆ ಎಂದರು.

ಕಾಲೇಜಿನಲ್ಲಿ ಕಲಿತ ಸಿಇಟಿಯಲ್ಲಿ ಬರುವ ಪಿಸಿಎಂಬಿ ಹಾಗೂ ಜೆಇನಲ್ಲಿ ಬರುವ ಪಿಸಿಎಂ ವಿಷಯಗಳ ಕುರಿತು ಸಂಶಯಗಳಿದ್ದಲ್ಲಿ ಮನೆಯಲ್ಲಿ ಸಾಫ್ಟ್​ವೇರ್ ಮೂಲಕ ಉತ್ತರ ಪಡೆಯಬಹುದು. ಸ್ವಪರೀಕ್ಷೆಗೆ ಅವಕಾಶವಿದ್ದು, ಸಂಪೂರ್ಣ ಪಠ್ಯ, ಪ್ರಶ್ನೆ ಪತ್ರಿಕೆಗಳು, ಕಾಮೆಡ್​ಕೆ ಪ್ರಶ್ನೆಪತ್ರಿಕೆಗಳು ಲಭ್ಯ .


No comments:

Post a Comment