Sunday, 17 July 2016

ರಿಯೋಗೆ ಭಾರತ ಹಾಕಿ ತಂಡ ಪ್ರಕಟ; ಶ್ರೀಜೇಶ್, ಸುಶೀಲಾ ಕ್ಯಾಪ್ಟನ್


ನವದೆಹಲಿ: ಖ್ಯಾತ ಮಿಡ್​ಫೀಲ್ಡರ್ ಮತ್ತು ದೀರ್ಘಕಾಲ ನಾಯಕಿಯಾಗಿ ಗುರುತಿಸಿಕೊಂಡಿದ್ದ್ದ ರಿತು ರಾಣಿ ಅವರನ್ನು ಮುಂಬರುವ ರಿಯೋ ಒಲಿಂಪಿಕ್ಸ್​ಗಾಗಿ ಆಯ್ಕೆಯಾಗಿರುವ ಭಾರತೀಯ ಮಹಿಳಾ ಹಾಕಿ ತಂಡದಿಂದ ಮಂಗಳವಾರ ಕೈಬಿಡಲಾಗಿದ್ದು, ಸುಶೀಲಾ ಚಾನು ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ. ಅಂತೆಯೇ ಪುರುಷರ ತಂಡದ ನಾಯಕನನ್ನಾಗಿ ಸರ್ದಾರ್ ಸಿಂಗ್ ಬದಲು ಪಿ.ಆರ್.ಶ್ರೀಜೇಶ್ ಅವರನ್ನು ಆಯ್ಕೆ ಮಾಡಲಾಗಿದೆ.ರಿತು ಅವರು ಕಳೆದ
ಹಲವಾರು ವರ್ಷಗಳಿಂದ ರಾಷ್ಟ್ರೀಯ ಮಹಿಳಾ ಹಾಕಿ ತಂಡದ ಪ್ರಮುಖ ಸದಸ್ಯೆಯಾಗಿದ್ದು, 36 ವರ್ಷಗಳ ಅವಧಿಯಲ್ಲಿ ಮೊತ್ತ ಮೊದಲ ಬಾರಿಗೆ ಮಹಿಳಾ ಹಾಕಿ ತಂಡವನ್ನು ಒಲಿಂಪಿಕ್​ಗೆ ಅರ್ಹತೆ ಗಳಿಸುವಂತೆ ಮುನ್ನಡೆಸಿದ್ದರು. ಆದರೆ ಕಳಪೆ ಸಾಧನೆ ಮತ್ತು ಅಸಮಾಧಾನಕರ ವರ್ತನೆ ಕಾರಣಕ್ಕಾಗಿ ಹಾಕಿ ಇಂಡಿಯಾ ಅಧಿಕಾರಿಗಳು ಅವರನ್ನು ಕಳೆದ ವಾರ ರಾಷ್ಟ್ರೀಯ ತಂಡದಿಂದ ಹೊರಗುಳಿಸಿದ್ದರು.

ಸುಶೀಲಾ ಅವರು ರಿತು ಅವರ ಗೈರು ಹಾಜರಿಯಲ್ಲಿ ಈ ವರ್ಷದ ಆದಿಯಲ್ಲಿ ಆಸ್ಟ್ರೇಲಿಯಾ ಪ್ರವಾಸ ಕಾಲದಲ್ಲಿ ಮಹಿಳಾ ಹಾಕಿ ತಂಡದ ನಾಯಕತ್ವ ವಹಿಸಿದ್ದರು. ಜರ್ಮನಿಯಲ್ಲಿ ನಡೆದಿದ್ದ 2013ರ ಜ್ಯೂನಿಯರ್ ವಿಶ್ವಕಪ್ ಸ್ಪರ್ಧೆಯಲ್ಲಿ ಸುಶೀಲಾ ಅವರು ಭಾರತೀಯ ಜ್ಯೂನಿಯರ್ ಮಹಿಳಾ ತಂಡವನ್ನು ಮುನ್ನಡೆಸಿ ಕಂಚಿನ ಪದಕವನ್ನು ರಾಷ್ಟ್ರಕ್ಕೆ ತಂದು ಕೊಟ್ಟಿದ್ದರು.

No comments:

Post a Comment