Monday, 11 July 2016

ಚಿತ್ರದುರ್ಗದಲ್ಲಿ ರುಸ್ತುಮ್-2 ಪರೀಕ್ಷೆ


 ನವದೆಹಲಿ: ಭಾರತದ ಪ್ರಥಮ ಮಾನವರಹಿತ ದಾಳಿ ಸಾಮರ್ಥ್ಯದ ರುಸ್ತುಮ್-2 ವಿಮಾನವನ್ನು ಈ ತಿಂಗಳ ಅಂತ್ಯದಲ್ಲಿ ಚಿತ್ರದುರ್ಗ ವೈಮಾನಿಕ ಪರೀಕ್ಷಾ ವಲಯದಲ್ಲಿ ಪರೀಕ್ಷಾರ್ಥ ಹಾರಾಟ ನಡೆಸಲಾಗುತ್ತದೆ.ಈ ಮಾನವರಹಿತ ವಿಮಾನವನ್ನು ವೈಮಾನಿಕ ಅಭಿವೃದ್ಧಿ ಸಂಸ್ಥೆಯ ವಿಜ್ಞಾನಿಗಳು ಚಿತ್ರದುರ್ಗ ಜಿಲ್ಲೆಯ ಕುದಾಪುರ ಬಳಿಯ ಪರೀಕ್ಷಾ ವಲಯಕ್ಕೆ ಸದ್ಯದಲ್ಲಿ

ಒಯ್ಯಲಿದ್ದು, ಇದೇ 28ರಿಂದ ಆಗಸ್ಟ್ 2ರ ಒಳಗೆ ಪರೀಕ್ಷಾರ್ಥ ಹಾರಾಟ ನಡೆಯಲಿದೆ. ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹಾಜರಿರಲಿದ್ದಾರೆ.

No comments:

Post a Comment