Saturday 9 July 2016

ಉಗ್ರರ ಗುರುತಿಗೆ ಬ್ಲ್ಯಾಕ್​ಕಾರ್ನರ್ ನೋಟಿಸ್

 ಏನಿದು ಬ್ಲ್ಯಾಕ್ ಕಾರ್ನರ್ ನೋಟಿಸ್?: ಉಗ್ರರ ಶವಗಳ ಗುರುತು ಪತ್ತೆಗೆ ಬ್ಲ್ಯಾಕ್ ಕಾರ್ನರ್ ನೋಟಿಸು ಜಾರಿಮಾಡಲಾಗುತ್ತದೆ. ಸದಸ್ಯರಾಷ್ಟ್ರಗಳ ಬೇಡಿಕೆ ಮೇರೆಗೆ ಇಂಟರ್​ಪೋಲ್ ಬ್ಲ್ಯಾಕ್ ಕಾರ್ನರ್ ನೋಟಿಸ್ ಜಾರಿ ಮಾಡುತ್ತದೆ. ಇದರಿಂದ ಉಗ್ರ ಯಾವ ದೇಶಕ್ಕೆ ಸೇರಿದವ ಎಂಬುದು ಪತ್ತೆಯಾಗುತ್ತಿದ್ದಂತೆ ಆ ದೇಶ ಉಗ್ರನ ಬಗ್ಗೆ ಎಲ್ಲ ವಿವರಗಳನ್ನೂ ನೀಡಬೇಕಾಗುತ್ತದೆ.ಪಠಾಣ್​ಕೋಟ್ ಕಾರ್ಯಾಚರಣೆ ವೇಳೆ ಉಗ್ರರ ಮುಖಗಳು ಸುಟ್ಟು ಕರಕಲಾಗಿದೆ. ಅವರ
ಮುಖವನ್ನು ಕಂಪ್ಯೂಟರ್​ನಲ್ಲಿ ಮರುಸೃಷ್ಟಿಸಿ ನಂತರ ಅವುಗಳನ್ನು ವಿಶ್ವಾದ್ಯಂತ ಬಿಡುಗಡೆ ಮಾಡಲಾಗುತ್ತದೆ. ಅಂತಾರಾಷ್ಟ್ರೀಯ ತನಿಖಾ ದಳಗಳ ನೆರವು ಸಿಗುವುದರಿಂದ ಉಗ್ರರ ಗುರುತು ಪತ್ತೆ ಕಾರ್ಯ ಸುಲಭವಾಗುತ್ತದೆ.

ದೇಶದಿಂದ ತಪ್ಪಿಸಿಕೊಂಡ ಅಪರಾಧಿಗಳ ಸೆರೆಗೆ ರೆಡ್​ಕಾರ್ನರ್ ನೋಟಿಸು ಜಾರಿಗೊಳಿಸಿದರೆ, ಅಪರಾಧಿಗಳ ವಿರುದ್ಧ ಕ್ರಿಮಿನಲ್ ತನಿಖೆಗಾಗಿ ಬ್ಲೂ ಕಾರ್ನರ್ ನೋಟಿಸನ್ನು ಇಂಟರ್​ಪೋಲ್ ಜಾರಿ ಮಾಡುತ್ತದೆ.



No comments:

Post a Comment