Sunday, 17 July 2016

ಮ.ಪ್ರದೇಶದಲ್ಲಿ ದೇಶದಲ್ಲೇ ಮೊದಲ ಸಂತಸ ಇಲಾಖೆಭೋಪಾಲ್: ದೇಶದಲ್ಲೇ ಮೊದಲನೆಯದು ಎಂಬ ಹೆಗ್ಗಳಿಕೆಯ ಸಂತಸ ಇಲಾಖೆಗೆ ಮಧ್ಯಪ್ರದೇಶ ಸರ್ಕಾರ ಶುಕ್ರವಾರ ಚಾಲನೆ ನೀಡಿದೆ. ಭೂತಾನ್, ಅಮೆರಿಕ ಮಾದರಿ ಯಲ್ಲಿ ಸಂತಸ ಖಾತೆಯನ್ನು ಆರಂಭಿಸಲಾಗಿದೆ. ಇದಕ್ಕೆ ಸಚಿವಾಲಯ ಇರುವುದಿಲ್ಲ. ಈ ಖಾತೆಯ ಮೂಲಕ ಆಧ್ಯಾತ್ಮಿಕ ಮತ್ತು ಜ್ಞಾನದ ಸಂತಸವನ್ನು ಅಳೆಯಲಿದ್ದೇವೆ ಎಂದು ಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ. ಖಾತೆ ಆರಂಭ ಮಾಡಲು ಸಂಪುಟ ಅನುಮೋದನೆ ದೊರಕಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
, ಆರೋಗ್ಯ ಇಲಾಖೆ, ಕ್ರೀಡಾ ಇಲಾಖೆ ಮತ್ತಿತರ ಇಲಾಖೆಗಳ ಸಹಯೋಗದಲ್ಲಿ ಸಂತಸ ಇಲಾಖೆ ಕಾರ್ಯನಿರ್ವಹಿಸಲಿದೆ. ಆರಂಭಿಕ ಅನುದಾನವಾಗಿ 3.8 ಕೋಟಿ ರೂ. ನಿಗದಿ ಮಾಡಲಾಗಿದೆ. ಸಿಎಂ ಶಿವರಾಜ್​ಸಿಂಗ್ ಚೌಹಾಣ್ ಇಲಾಖೆಯ ಮುಖ್ಯಸ್ಥ ರಾಗಿರಲಿದ್ದಾರೆ ಎಂದು ಮಿಶ್ರಾ ತಿಳಿಸಿದ್ದಾರೆ. ಇಲಾಖೆ ನಿರ್ದೇಶಕರಿಗೆ ತಿಂಗಳಿಗೆ 1.50 ಲಕ್ಷ ರೂ. ಹಾಗೂ ಪ್ರಧಾನ ಕಾರ್ಯನಿರ್ವಹಣಾ ನಿರ್ದೇಶಕರಿಗೆ 1.25 ಲಕ್ಷ ರೂ. ಸಂಬಳ ನಿಗದಿ ಮಾಡಲಾಗಿದೆ.

1 comment: