Saturday, 9 July 2016

ಈಜು-ದಾಮಿನಿ, ಮಯೂರಿ ರಾಷ್ಟ್ರೀಯ ದಾಖಲೆ


 ಬೆಂಗಳೂರು: ಕರ್ನಾಟಕದ ಈಜುಪಟುಗಳಾದ ದಾಮಿನಿ ಕೆ. ಗೌಡ ಹಾಗೂ ಮಯೂರಿ ಲಿಂಗರಾಜ್, 43ನೇ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್​ಷಿಪ್​ನಲ್ಲಿ ನೂತನ ರಾಷ್ಟ್ರೀಯ ದಾಖಲೆ ನಿರ್ವಿುಸಿದರು. ಗುರುವಾರ ಒಟ್ಟು ಮೂರು ರಾಷ್ಟ್ರೀಯ ದಾಖಲೆಗಳು ನಿರ್ವಣವಾದವು. ಕೂಟದ 3ನೇ ದಿನದಂತ್ಯಕ್ಕೆ 22 ಚಿನ್ನ, 15 ಬೆಳ್ಳಿ ಹಾಗೂ 12 ಕಂಚು ಸಹಿತ ಒಟ್ಟು 49 ಪದಕಗಳೊಂದಿಗೆ ಕರ್ನಾಟಕ ತಂಡ ಅಗ್ರಸ್ಥಾನ ಕಾಯ್ದುಕೊಂಡಿತು.ಬಸವನಗುಡಿ ಈಜುಕೊಳದಲ್ಲಿ ನಡೆಯುತ್ತಿರುವ
ಚಾಂಪಿಯನ್​ಷಿಪ್​ನಲ್ಲಿ ದಾಮಿನಿ ಗೌಡ ಸತತ ಮೂರನೇ ದಿನ ಸ್ವರ್ಣ ಜಯಿಸಿದರು. ಬಾಲಕಿಯರ 100 ಮೀಟರ್ ಬಟರ್​ಫ್ಲೈ ಮೊದಲ ಗುಂಪಿನ ಸ್ಪರ್ಧೆಯಲ್ಲಿ ದಾಮಿನಿ ಕೆ.ಗೌಡ, 1 ನಿಮಿಷ 4.66 ಸೆಕೆಂಡ್​ಗಳಲ್ಲಿ ಕ್ರಮಿಸುವ ಮೂಲಕ ರಾಷ್ಟ್ರೀಯ ದಾಖಲೆಯೊಂದಿಗೆ ಸ್ವರ್ಣ ಗೆದ್ದರು. ಇದೇ ವಿಭಾಗದ ಸ್ಪರ್ಧೆಯ 2ನೇ ಗುಂಪಿನಲ್ಲಿ ರಾಜ್ಯದ ಮಯೂರಿ ಲಿಂಗರಾಜ್, 1ನಿಮಿಷ 5.98 ಸೆಕೆಂಡ್​ಗಳಲ್ಲಿ ಗುರಿ ಮುಟ್ಟುವ ಮೂಲಕ ರಾಷ್ಟ್ರೀಯ ದಾಖಲೆ ಬರೆದರು. ಬಾಲಕರ 50 ಮೀಟರ್ ಬ್ಯಾಕ್​ಸ್ಟ್ರೋಕ್​ನಲ್ಲಿ ಗೋವಾದ ಕ್ಸೇವಿಯರ್ ಡಿ’ಸೋಜಾ ರಾಷ್ಟ್ರೀಯ ದಾಖಲೆ ಬರೆದರು.

ಪ್ರೇಕ್ಷಾ, ಕು

No comments:

Post a Comment