Sunday 17 July 2016

ವಿಜೇಂದರ್​ಗೆ ಏಷ್ಯನ್ ಬೆಲ್ಟ್, ವೃತ್ತಿ ಪರ ಬಾಕ್ಸಿಂಗ್​ನಲ್ಲಿ ಮೊದಲ ಪ್ರಶಸ್ತಿ


ನವದೆಹಲಿ: ವೃತ್ತಿಪರ ಬಾಕ್ಸಿಂಗ್​ನಲ್ಲಿ ಹೊಸ ಶಿಖರವೇರಿದ ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ವರ್ಲ್ಡ್ ಬಾಕ್ಸಿಂಗ್ ಅಸೋಸಿಯೇಷನ್​ನ (ಡಬ್ಲ್ಯುಬಿಒ)ಏಷ್ಯಾ ಪೆಸಿಪಿಕ್ ಸೂಪರ್ ಮಿಡಲ್​ವೇಟ್ ಪ್ರಶಸ್ತಿ ಜಯಿಸಿದ್ದಾರೆ. ಶನಿವಾರ ನಡೆದ ಪಂದ್ಯದಲ್ಲಿ ಮಾಜಿ ಡಬ್ಲ್ಯುಬಿಸಿ ಯುರೋಪಿಯನ್ ಚಾಂಪಿಯನ್ ಆಸ್ಟ್ರೇಲಿಯಾದ ಕೆರ್ರಿ ಹೋಪ್​ರನ್ನು ಸೋಲಿಸಿ ವೃತ್ತಿ ಪರ ಬಾಕ್ಸಿಂಗ್​ನಲ್ಲಿ ತಮ್ಮ ಮೊದಲ ಪ್ರಶಸ್ತಿ ಗೆದ್ದರು.ತ್ಯಾಗರಾಜ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ವಿಜೇಂದರ್ ಕೆರ್ರಿ
ಹೋಪ್​ರನ್ನು 10 ಸುತ್ತುಗಳ ಕಠಿಣ ಹೋರಾಟದಲ್ಲಿ ವೇಲ್ಸ್ ಮೂಲದ ಆಸೀಸ್ ಬಾಕ್ಸರ್​ರನ್ನು ಮಣಿಸಿದರು. ಕೇವಲ ಒಂದು ವರ್ಷದ ಅನುಭವಿ ವಿಜೇಂದರ್​ಗೆ ಇದು ಕಣದಲ್ಲಿ ಸತತ 7ನೇ ಗೆಲುವಾಗಿದೆ. ಹಿಂದಿನ ಆರು ಪಂದ್ಯಗಳಲ್ಲಿ ನಾಕೌಟ್ ಮೂಲಕ ಗೆಲುವು ಸಾಧಿಸಿದ್ದ ವಿಜಿ ಇದೇ ಮೊದಲ ಬಾರಿಗೆ ಅಂಪೈರ್​ಗಳ ಸರ್ವಾನುಮತದಿಂದ ಗೆಲುವನ್ನು ಒಲಿಸಿಕೊಂಡರು. ವಿಜೇಂದರ್ ಬಾಕ್ಸಿಂಗ್ ರಿಂಗ್​ನಲ್ಲಿ ಗರಿಷ್ಠ ಸಮಯ ಫೈಟ್ ಮಾಡಿದ ಪಂದ್ಯವೂ ಇದೆ. 6 ಫೀಟ್ ಎತ್ತರದ ಹರಿಯಾಣ ಬಾಕ್ಸರ್ 98-92, 98-92, 100-90 ರಿಂದ ಗೆಲುವಿನ ನಗು ಬೀರಿದರು. ಭಾರತದ ಪರ ಅಂತಾರಾಷ್ಟ್ರೀಯ ಬಾಕ್ಸಿಂಗ್​ನಲ್ಲಿ ಒಲಿಂಪಿಕ್ ಹಾಗೂ ವಿಶ್ವಚಾಂಪಿಯನ್​ಷಿಪ್ ಪದಕ ಗೆದ್ದ ಏಕೈಕ ಬಾಕ್ಸರ್ ಎನಿಸಿರುವ ವಿಜಿ, ಸಂಪೂರ್ಣ 10 ಸುತ್ತುಗಳಲ್ಲೂ ಕಾದಾಡಿದರು. ವಿಜೇಂದರ್ ಪ್ರತಿ ಬಾರಿ ಪಂಚ್ ಬಾರಿಸಿದಾಗಲೂ ತುಂಬಿದ ಕ್ರೀಡಾಂಗಣದಿಂದ ಕರತಾಡನದ ಬೆಂಬಲ ವ್ಯಕ್ತವಾಗುತ್ತಿತ್ತು. ಮೊದಲ 6 ಸುತ್ತುಗಳವರೆಗೂ ಉಭಯ ಬಾಕ್ಸರ್​ಗಳು ಉತ್ತಮ ರಕ್ಷಣಾ ತಂತ್ರ ಅನುಸರಿಸಿದರೆ, ಕೊನೆಯ ಸುತ್ತುಗಳಲ್ಲಿ ವಿಜೇಂದರ್ ತಮ್ಮ ಪಂಚ್​ಗಳ ರುಚಿ ತೋರಿಸಿದರು.-





No comments:

Post a Comment