Saturday, 9 July 2016

ಮಹಾತ್ಮ ಗಾಂಧೀಜಿ ಹತ್ತಿದ ಟ್ರೇನ್‌ನಲ್ಲಿ ಮೋದಿ ಸುತ್ತಾಟ


 ಡರ್ಬನ್, ಜುಲೈ, 09: ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದಾರೆ. ಶನಿವಾರ ಮೋದಿ ದಕ್ಷಿಣ ಆಫ್ರಿಕಾದ ಲೋಕಲ್ ಟ್ರೇನ್ ನಲ್ಲಿ ಸುತ್ತಾಟ ಮಾಡಿದ್ದಾರೆ. ಪೆನ್‌ಟ್ರಿಚ್ ನಿಂದ ಪೀಟರ್ ಮಾರಿಟ್ಜಬರ್ಗ್ ವರೆಗೆ ಮೋದಿ ರೈಲ್ವೆಯಲ್ಲಿ ಪ್ರಯಾಣ ಮಾಡಿದ್ದಾರೆ.1893 ರಲ್ಲಿ ಮಹಾತ್ಮ ಗಾಂಧಿ ಅವರನ್ನು ಇದೇ ಟ್ರೇನ್ ನಿಂದ ಹೊರಕ್ಕೆ ನೂಕಲಾಗಿತ್ತು. ವರ್ಣಬೇಧ ನೀತಿಯ ವಿರುದ್ಧದ ಹೋರಾಟ ಆರಂಭವಾಗಿದ್ದೆ ಅಲ್ಲಿಂದ.[ಮೋದಿ ತವರಿಗೆ ಕೇಜ್ರಿವಾಲ್, ಮಾಧ್ಯಮಗಳಿಗೆ ಪ್ರವೇಶ
ನಿಷಿದ್ಧ"ನಾನು ಒಂದು ಪುಣ್ಯಕ್ಷೇತ್ರದಲ್ಲಿ ಪ್ರವಾಸ ಮಾಡಿದ ಅನುಭವ ಪಡೆದಿದ್ದೇನೆ. ಯಾವ ಕ್ಷೇತ್ರದಲ್ಲಿ ಒಬ್ಬ ಸಾಮಾನ್ಯ ಮನುಷ್ಯನ ಪ್ರಯಾಣ ಮುಗಿದು ಒಬ್ಬ ಮಹಾತ್ಮನ ಪ್ರಯಾಣ ಆರಂಭವಾಗಿತ್ತೋ ಅಲ್ಲಿಗೆ ಭೇಟಿ ನೀಡಿದ ಸಾರ್ಥಕತೆ ನನ್ನಲ್ಲಿ ಮನೆ ಮಾಡಿದೆ" ಎಂದು ಮೋದಿ ಪ್ರಯಾಣದ ನಂತರ ಹೇಳಿದರು.[ಮೋದಿ ಸಂಪುಟದಲ್ಲಿ ಯಾರಿಗೆ, ಯಾವ ಖಾತೆ?]
ದಕ್ಷಿಣ ಆಫ್ರಿಕದಲ್ಲಿ ಮೋದಿ ಮೂರು ದಿನಗಳ ಪ್ರವಾಸ ಮಾಡುತ್ತಿದ್ದಾರೆ. ಡರ್ಬನ್ ಮತ್ತು ಜೋಹಾನ್ಸ್ ಬರ್ಗ್ ನ ವಿಶೇಷ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಇಂಡಿಯನ್ ಹೈ ಕಮಿಷನರ್ ಕಚೇರಿ ಮತ್ತು ಡರ್ಬನ್ ಆಡಳಿತ ಮೋದಿ ಅವರಿಗೆ ವಿಶೇಷ ಚಹಾ ಕೂಟ ಆಯೋಜಿಸಿದೆ.
No comments:

Post a Comment