Saturday 9 July 2016

ಸಿಕ್ಕಿಂ ಸಂಪೂರ್ಣ ಸಾವಯವ ಕೃಷಿ ರಾಜ್ಯ

  

ಈಶಾನ್ಯ ಭಾರತದ ಪುಟ್ಟ ರಾಜ್ಯ ಸಿಕ್ಕಿಂ ದೇಶದ ಮೊದಲ `ಸಾವಯವ ರಾಜ್ಯ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

75 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸುಸ್ಥಿರ ಕೃಷಿ ಕೈಗೊಂಡು ಈ ಸಾಧನೆ ಮಾಡಿದೆ.

2003ರಲ್ಲಿ ಸರ್ಕಾರ ರಾಜ್ಯವನ್ನು ಸಂಪೂರ್ಣ ಸಾವಯವಗೊಳಿಸುವ ನಿರ್ಧಾರ ಕೈಗೊಂಡಿತು.

ನಂತರ ಕೃಷಿ ಜಮೀನುಗಳಲ್ಲಿ ರಾಸಾಯನಿಕ ಬಳಕೆಯನ್ನು ನಿರ್ಬಂಧಿಸಲಾಯಿತು. ಕೃಷಿಗೆ ಬಳಸುವ ರಾಸಾಯನಿಕಗಳ ಮಾರಾಟ ನಿಷೇಧಿಸಲಾಯಿತು.

ಹಾಗಾಗಿ ರೈತರಿಗೆ ಸಾವಯವ ಪದ್ಧತಿ ಅಳವಡಿಸಿಕೊಳ್ಳದೆ ಬೇರೆ ದಾರಿ ಇಲ್ಲದಂತಾಯಿತು.

ಹೀಗೆ ರಾಸಾಯನಿಕ ಗೊಬ್ಬರಗಳು, ಕೀಟ ನಾಶಕಗಳ ಬಳಕೆ ಇಲ್ಲದ ಪರಿಸರ ಪೂರಕ ಬೇಸಾಯ ಅಲ್ಲಿ ಸಾಧ್ಯವಾಯಿತು.

ಅನುಕೂಲಗಳು  :

ಈ ಮಾದರಿ ವ್ಯವಸಾಯವನ್ನು ಆದಾಯದ ಮೂಲವಾಗಿಸಿದೆ. ಜೈವಿಕ ವೈವಿಧ್ಯತೆ, ಮಣ್ಣಿನ ಫಲವತ್ತತೆ, ಮತ್ತು ಪರಿಸರ ರಕ್ಷಣೆ ಸಾಧ್ಯವಾಗಿದೆ. ಸಾವಯವ ಕೃಷಿಯಿಂದ ಉತ್ಪಾದನೆಯೂ ಹೆಚ್ಚಿದೆ.

ಹಿಮಾಲಯದ ತಪ್ಪಲಿನ ಈ ಸಣ್ಣ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೂ ಇದರಿಂದ ಪ್ರಯೋಜನವಾಗಿದೆ\



No comments:

Post a Comment