Monday 11 July 2016

ಈಕ್ವೆಡಾರ್ನಲ್ಲಿ ಪ್ರಬಲ ಭೂಕಂಪ


ಕ್ವಿಟೊ (ಎಪಿ): ದಕ್ಷಿಣ ಅಮೆರಿಕದ ಈಕ್ವೆಡಾರ್ನ ವಾಯವ್ಯ ಕರಾವಳಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಹಾನಿ ಮತ್ತು ಸಾವು ಸಂಭವಿಸಿರುವ ಬಗ್ಗೆ ಇನ್ನು ತಿಳಿದು ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.5.9ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ದಕ್ಷಿಣ ಅಮೆರಿಕದಿಂದ 41 ಕಿ.ಮೀ ದೂರದಲ್ಲಿ ಹಾಗೂ ಭೂಮೇಲ್ಮೈನಿಂದ 35 ಕಿ.ಮೀ ಆಳದಲ್ಲಿ ಕಂಪನದ ಕೇಂದ್ರವಿತ್ತು ಎಂದು ಅಮೆರಿಕದ ಭೂವೈಜ್ಞಾನಿಕ ಸರ್ವೇಕ್ಷಣಾ ಕೇಂದ್ರವು ಹೇಳಿದೆ.ಆಗ್ನೇಯ ಭಾಗದಿಂದ
153 ಕಿ.ಮೀ ದೂರದಲ್ಲಿರುವ ಈಕ್ವೆಡಾರ್ನ ರಾಜಧಾನಿ ಕ್ವಿಟೊದಲ್ಲಿಯೂ ಲಘು ಕಂಪನ ಉಂಟಾಗಿದೆ ಎಂದು ಮೂಲಗಳು ಹೇಳಿವೆ.

No comments:

Post a Comment