ಬೀಜಿಂಗ್: ಗಂಟೆಗೆ 420 ಕಿ ಮೀ ವೇಗ ಕ್ರಮಿಸಬಲ್ಲ ಸಾಮರ್ಥ್ಯದ ಜಗತ್ತಿನ ಅತಿವೇಗದ ಬುಲೆಟ್ ರೈಲುಗಳನ್ನು ಅಭಿವೃದ್ಧಿಪಡಿಸಿರುವ ಚೀನಾ ಅವುಗಳ ಪರೀಕ್ಷಾರ್ಥ ಪ್ರಯೋಗವನ್ನು ಎರಡು ಬದಿಯಿಂದ ಯಶಸ್ವಿಯಾಗಿ ನಡೆಸಿತು.ಗೋಲ್ಡನ್ ಫೀನಿಕ್ಸ್ ಮತ್ತು ಡಾಲ್ಪಿನ್ ಬ್ಲೂ ಎಂಬ ಹೆಸರಿನ ಎರಡು ರೈಲುಗಳು ಜಿಂಗಜುವಾ ಮಧ್ಯ ಹೆನಾನ್ ಪ್ರಾಂತ್ಯದಿಂದ ಹಾಗೂ
ಕ್ಸುಜೊ ಪೂರ್ವ ಜಿಯಾಂಗ್ಸು ಪ್ರಾಂತ್ಯದಿಂದ ವಿರುದ್ಧ ದಿಕ್ಕಿನಲ್ಲಿ ಚಲಿಸಿದವು.
ಸಾರ್ವಜನಿಕ ಪ್ರಯಾಣದ ಅತಿ ವೇಗದ ರೈಲುಗಳು ಇವುಗಳಾಗಿದ್ದು ಸಂಪೂರ್ಣ ಚೀನಾ ನಿರ್ಮಿತ ತಂತ್ರಜ್ಞಾನ ಎಂದು ಚೀನಾ ಪ್ರಕಟಣೆಯಲ್ಲಿ ಹೇಳಿಕೊಂಡಿದೆ. ಸದ್ಯ ಚೀನಾದಲ್ಲಿ 16,000 ಕಿ ಮೀ ಪ್ರದೇಶಗಳನ್ನು ಸಂಪರ್ಕಿಸಲು ಬುಲೆಟ್ ಟ್ರೇನ್ ಬಳಕೆ ಮಾಡಲಾಗುತ್ತಿದೆ. ಈ ತಂತ್ರಜ್ಞಾನವನ್ನು ಭಾರತ ಸೇರಿದಂತೆ ಹಲವು ದೇಶಗಳಿಗೆ ವಿಸ್ತರಿಸಲು ಚೀನಾ ಚಿಂತನೆ ನಡೆಸಿದೆ
No comments:
Post a Comment