Thursday 7 July 2016

ವಸ್ತುಗಳ ಗುರುತಿಸುವಿಕೆಗೆ ಫ್ರೆಂಚ್ ಸ್ಟಾರ್ಟ್‌ಅಪ್ ಮೂಡ್‌ಸ್ಟಾಕ್ಸ್ ಖರೀದಿಸಿದ ಗೂಗಲ್

  ಸ್ಯಾನ್ ಫ್ರಾನ್ಸಿಸ್ಕೋ: ಫ್ರೆಂಚ್ ಸ್ಟಾರ್ಟ್‌ಅಪ್ ಮೂಡ್‌ಸ್ಟಾಕ್ಸ್ ಖರೀದಿಸಲು ಒಪ್ಪಂದ ಮಾಡಿಕೊಂಡಿರುವುದಾಗಿ ಗೂಗಲ್ ಹೇಳಿದೆ. ಮೂಡ್‌ಸ್ಟಾಕ್ಸ್ ತಂತ್ರಜ್ಞಾನ ಕಂಪ್ಯೂಟರ್ ವಿಷನ್, ಯಂತ್ರ ಕಲಿಕೆ (Machine Learning ) ಹಾಗೂ ಸ್ಮಾರ್ಟ್‌ಫೋನ್‌ಗಳು ಮತ್ತು ಮೊಬೈಲ್ ಯಂತ್ರಗಳು ಚಿತ್ರಗಳು, ವಸ್ತುಗಳನ್ನು ಗುರುತಿಸಲು ಸಹಕರಿಸುತ್ತದೆ.ಜನರು ಪ್ರಪಂಚವನ್ನು ಅರ್ಥ ಮಾಡಿಕೊಳ್ಳುವಂತೆ ಕಂಪ್ಯೂಟರ್‌ಗಳು ಅರ್ಥ ಮಾಡುವ, ಗುರುತಿಸಿಕೊಳ್ಳುವ ತಂತ್ರಜ್ಞಾನ ಮತ್ತಿತರ
ವಿಧಾನಗಳನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ಗೂಗಲ್ ಹೂಡಿಕೆ ಮಾಡುತ್ತಿದೆ.ಗೂಗಲ್ ಭಾಷಾ ಅನುವಾದ, ವಿವಿಧ ಶ್ರೇಣಿಯ ಫೋಟೋಗಳನ್ನು ಒದಗಿಸುವ ಹಲವಾರು ಸೇವೆಗಳಿಗೆ ಕೊಡುಗೆಯನ್ನು ನೀಡುತ್ತಿದೆ.

ಮೂಡ್‌ಸ್ಟಾಕ್ಸ್ ತಂಡ, ಸಂಶೋಧಕರು ಮತ್ತು ಇಂಜಿನಿಯರ್‌ಗಳ ತಂಡವಾಗಿದ್ದು, ಪ್ಯಾರಿಸ್‌ನ ಗೂಗಲ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದಲ್ಲಿ ಕಂಪ್ಯೂಟರ್ ವಿಷನ್ ಕುರಿತು ಸಂಶೋಧನೆ ನಡೆಸಲಿದೆ.

ಗೂಗಲ್ ಮೇ ತಿಂಗಳಿನಲ್ಲಿ ನಡೆದ ಅಭಿವರ್ಧಕರ ಸಮ್ಮೇಳನದಲ್ಲಿ ವರ್ಚ್ಯುವಲ್ ಹೋಮ್ ಅಸಿಸ್ಟೆನ್ಸ್ ಅನಾವರಣಗೊಳಿಸಿದೆ. ಗೂಗಲ್ ಹೋಮ್ ಈ ವರ್ಷ ಮಾರುಕಟ್ಟೆಗೆ ಬರುವ ಸಾಧ್ಯತೆ ಇದ್ದು, ವರ್ಚ್ಯುವಲ್ ಅಸಿಸ್ಟೆನ್ಸ್ ಸಾಫ್ಟ್‌ವೇರ್‌ಗೆ ಅಳವಡಿಸಲಾಗುವುದು ಎಂದು ಹೇಳಲಾಗಿದೆ.

No comments:

Post a Comment