Thursday 7 July 2016

ಪ್ಲಾಸ್ಟಿಕ್ ತ್ಯಾಜ್ಯನ್ನು ಇಂಧನವಾಗಿ ಮಾರ್ಪಡಿಸುತ್ತಿದೆ ಪುಣೆ ಸಂಸ್ಥೆ

  ಪುಣೆ ಮೂಲದ ರುದ್ರ ಎನ್‌ವೈರ್ನ್‌ಮೆಂಟಲ್ ಸೊಲ್ಯೂಷನ್ಸ್ ಸಮಸ್ಥೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಪರಿಸರಕ್ಕೆ ಯಾವುದೇ ಹಾನಿ ಉಂಟಾಗದಂತೆ ಪಾಲಿ-ಇಂಧನವನ್ನಾಗಿ ಮಾರ್ಪಡಿಸುತ್ತಿದೆ.ರುದ್ರ ಸಂಸ್ಥೆಯ ಸಂಸ್ಥಾಪಕಿ ಮೇಧಾ ತಡ್ಪತ್ರಿಕರ್ ಮತ್ತು ಅವರ ತಂಡ ರುದ್ರ ಸ್ಥಾವರದಲ್ಲಿ ಪಾಲಿ ಇಂಧನ ಉತ್ಪಾದನಾ ಯಂತ್ರಗಳನ್ನು ಅಭಿವೃದ್ಧಿಪಡಿಸಿ ತಯಾರಿಸಿದ್ದಾರೆ. ಈ ಯಂತ್ರಗಳು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಿಸಿಯಲ್ಲಿ ಕರಗಿಸಿ ಪೈರೋಲಿಸಿಸ್ ಪ್ರಕ್ರಿಯೆ ಮೂಲಕ ಪಾಲಿ-ಇಂಧನವನ್ನಾಗಿ ಪರಿವರ್ತಿಸುತ್ತವೆ.ಈ
ಸಂಸ್ಥೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಪ್ಲಾಸ್ಟಿಕ್ ಕೈಚೀಲ, ಬಾಟಲ್‌ಗಳು, ಕೇಬಲ್ ಕವರ್‌ಗಳನ್ನು ಸಂಗ್ರಹಿಸಿ ಇಂಧನ, ಅನಿಲ ಮತ್ತು ಜಿಡ್ಡು ಮಣ್ಣನ್ನಾಗಿ ಪರಿವರ್ತಿಸಲಾಗುತ್ತದೆ.
ಸಂಸ್ಥೆಯ ಸಂಸ್ಥಾಪಕಿ ಮೇಧಾ ಅವರು ಮಹಾರಾಷ್ಟ್ರದ ಥಾಣೆಯಲ್ಲಿ ಪ್ಲಾಸ್ಟಿಕ್‌ಗಳನ್ನು ತಿಂದು ೨ ಜಿಂಕೆಗಳು ಮೃತಪಟ್ಟಿರುವುದದನ್ನು ಕಂಡಿದ್ದು, ಆ ಬಳಿಕ 2009ರಲ್ಲಿ ಈ ಯೋಜನೆ ಮೂಲಕ ಸಂಸ್ಥೆ ಸ್ಥಾಪಿಸಿದ್ದರು.

ಸಂಸ್ಥೆಯು ಜನರಿಗೆ ಮರುಬಳಕೆ ಪ್ಲಾಸ್ಟಿಕ್ ಚೀಲಗಳನ್ನು ನೀಡುತ್ತಿದ್ದು, ಗೃಹೋಪಯೋಗಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಶೇಖರಿಸಿಡಲು ಹೇಳಿದೆ. ಈ ತ್ಯಾಜ್ಯಗಳನ್ನು ನಿಯಮಿತ ಕಾಲಾವಧಿಯಲ್ಲಿ ಸಂಸ್ಥೆ ಸಂಗ್ರಹಿಸುತ್ತದೆ. ಈಗ ಈ ಸಂಸ್ಥೆ ಪುಣೆಯ ಸುಮಾರು 5,500 ಮನೆಗಳಿಂದ ಮಾಸಿಕ 5-6 ಟನ್‌ಗಳಷ್ಟು ತ್ಯಾಜ್ಯವನ್ನು ಸಂಗ್ರಹಿಸುತ್ತದೆ.

ಪಾಲಿ-ಇಂಧನ ಅತೀ ಹೆಚ್ಚು ಕ್ಯಾಲೋರಿ ಮೌಲ್ಯ ಹೊಂದಿದ್ದು, ಇದು ಡೀಸೆಲ್, ಪೆಟ್ರೋಲ್ ಮತ್ತು ಸೀಮೆ ಎಣ್ಣೆಯ ಮಿಶ್ರಣವಾಗಿದೆ. ಇದನ್ನು ಬಾಯ್ಲರ್, ಸ್ಟವ್‌ಗಳು, ಕೃಷಿ ಸಂಸ್ಥೆ, ಕುಲುಮೆಗಳಲ್ಲಿ ಬಳಸಬಹುದಾಗಿದೆ.

No comments:

Post a Comment