Thursday 7 July 2016

ಸೌರ ವಿದ್ಯುತ್ ಯೋಜನೆಗೆ ವಿಶ್ವ ಬ್ಯಾಂಕ್‌ನಿಂದ 1 ಬಿಲಿಯನ್ ಡಾಲರ್ ನೆರವು

 ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾರತದ ಸೌರ ವಿದ್ಯುತ್ ಯೋಜನೆಗೆ ವಿಶ್ವ ಬ್ಯಾಂಕ್ 1 ಬಿಲಿಯನ್ ಡಾಲರ್ ನೆರವು ನೀಡುವುದಾಗಿ ವಿಶ್ವ ಬ್ಯಾಂಕ್ ಹೇಳಿದೆ.ಚೀನಾದಂತೆ ಹೊರಸೂಸುವಿಕೆ ಕಡಿತ ನಡೆಸುವ ಬದಲು ವರ್ಷದ 365 ದಿನಗಳಿಗೂ ವಿದ್ಯುತ್ ಉತ್ಪಾದಿಸುವ ಯೋಜನೆ ಹಾಗೂ ಹವಾಮಾನ ವೈಪರೀತ್ಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ವಿಶ್ವದ ಪ್ರಮುಖ ಬ್ಯಾಂಕ್‌ಗಳಿಂದ ನಿಧಿ ಸಹಾಯವನ್ನು ಕೋರಿದ್ದಾರೆ.ಜಗತ್ತಿನ ಯಾವುದೇ ರಾಷ್ಟ್ರ ಸೌರ
ವಿದ್ಯುತ್ ಯೋಜನೆಗೆ ಪಡೆದ ಅತೀ ದೊಡ್ಡ ನೆರವು ಇದಾಗಿದ್ದು, ಭಾರತ 2020ರ ಒಳಗೆ ತನ್ನ ಸೌರ ಉತ್ಪಾದನೆ ಸಾಮರ್ಥ್ಯವನ್ನು 30 ಪಟ್ಟು ಹೆಚ್ಚಿಸಿ 100 ಗಿಗಾ ವ್ಯಾಟ್ ಸೌರ ಉತ್ಪಾದಿಸುವ ಗುರಿ ಹೊಂದಿದೆ. ಅಲ್ಲದೇ ಇದು ವಿಶ್ವದ ಉನ್ನತ ಕಂಪೆನಿಗಳು ಮತ್ತು ಸಂಸ್ಥೆಗಳು ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡುವ ತನ್ನ ಪ್ರಸ್ತಾಪದಲ್ಲಿ ಗಮನ ಸೆಳೆಯುತ್ತಿದೆ.

ಭಾರತ ವಿಶ್ವ ಬ್ಯಾಂಕ್‌ನ ಅತೀ ದೊಡ್ಡ ಗ್ರಾಹಕವಾಗಿದ್ದು, ಅದು 2015-16ರಲ್ಲಿ 4.8 ಬಿಲಿಯನ್ ಡಾಲರ್ ನೆರವು ನೀಡಿದೆ.

No comments:

Post a Comment