Thursday 7 July 2016

ಸೋಲೋ ಫುಟ್​ಬಾಲ್​ನಲ್ಲಿ ರಮೇಶ್​ಬಾಬು ವಿಶ್ವದಾಖಲೆ

 ಬೆಂಗಳೂರು: ಲೋಹವಿಜ್ಞಾನಿ ಡಾ.ಎಸ್.ರಮೇಶ್ ಬಾಬು, ನಿರಂತರವಾಗಿ ಒಂದು ಗಂಟೆ ಸೊಲೊ ಫುಟ್​ಬಾಲ್ ಆಡುವ ಮೂಲಕ ವಿಶ್ವದಾಖಲೆ ನಿರ್ವಿುಸಿದ್ದಾರೆ. ಇದರಿಂದ ರಮೇಶ್​ಬಾಬು 53ನೇ ವಿಶ್ವದಾಖಲೆಯ ಒಡೆಯ ಎನಿಸಿಕೊಂಡಿದ್ದಾರೆ.ಒಂದು ಗೋಲ್ ಪೋಸ್ಟ್​ನಿಂದ ಮತ್ತೊಂದು ಗೋಲ್ ಪೋಸ್ಟ್​ಗೆ ಚೆಂಡನ್ನು ಒದೆಯುವುದೇ ಈ ಆಟ ನಿಯಮವಾಗಿತ್ತು. ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್​ನ (ಐಐಎಸ್​ಸಿ) ಫುಟ್​ಬಾಲ್ ಮೈದಾನದಲ್ಲಿ ಜೂನ್ 26 ರಂದು
ನಡೆದ ಸೊಲೊ ಫುಟ್​ಬಾಲ್​ನಲ್ಲಿ ರಮೇಶ್ ಬಾಬು ಈ ಸಾಧನೆ ಮಾಡಿದರು. 101 ಮೀಟರ್​ನ ಉದ್ದದ ಮೈದಾನದಲ್ಲಿ ಒಂದು ಗಂಟೆಯಲ್ಲಿ 70 ಬಾರಿ ಚೆಂಡನ್ನು ಗೋಲಾಗಿ ಪರಿವರ್ತಿಸುವ ಮೂಲಕ ರಮೇಶ್​ಬಾಬು ಈ ಸಾಧನೆ ಮಾಡಿದ್ದಾರೆ. ‘30 ದಿನಗಳ ನಿರಂತರ ಅಭ್ಯಾಸದ ಫಲವಾಗಿ ಈ ಸಾಧನೆ ಮಾಡಲು ಸಾಧ್ಯವಾಯಿತು. ಅಭ್ಯಾಸದ ವೇಳೆ 60 ರಿಂದ 66 ಬಾರಿ ಒಂದು ಪೋಸ್ಟ್​ನಿಂದ ಮತ್ತೊಂದು ಪೋಸ್ಟ್​ಗೆ ಚೆಂಡನ್ನು ಒದ್ದಿದ್ದೆ. ಆದರೆ, ವಿಶ್ವ ದಾಖಲೆಯ ವೇಳೆ 71 ಗೋಲು ಗಳಿಸಿದ್ದು ಖುಷಿ ನೀಡಿದೆ ಎಂದು 60 ವರ್ಷದ ರಮೇಶ್ ಬಾಬು ‘ವಿಜಯವಾಣಿ’ಯೊಂದಿಗೆ ಹರ್ಷ ವ್ಯಕ್ತಪಡಿಸಿದರು. ಮುಂದಿನ ತಿಂಗಳ ಅಂತ್ಯಕ್ಕೆ ‘ನಿರಂತರವಾಗಿ ಒಂದು ಗಂಟೆ ವಾಲಿಬಾಲ್ ಆಡುವ’ ಮೂಲಕ 54ನೇ ವಿಶ್ವ ದಾಖಲೆಗೆ ಸಜ್ಜಾಗುತ್ತಿರುವುದಾಗಿ ತಿಳಿಸಿದರು.


No comments:

Post a Comment