Thursday 7 July 2016

ಎನ್​ಎಸ್​ಜಿ ಸದಸ್ಯತ್ವ, ತನ್ನ ನಿಲುವನ್ನು ಸಮರ್ಥಿಸಿಕೊಂಡ ಚೀನಾ

 ಬೀಜಿಂಗ್: ಎನ್​ಎಸ್​ಜಿ ಸದಸ್ಯತ್ವ ಪಡೆಯಲು ಏನೆಲ್ಲಾ ಅರ್ಹತೆಗಳು ಇರಬೇಕು ಎಂಬುದನ್ನು ಭಾರತ ಮೊದಲು ತಿಳಿಯಲಿ. ಚೀನಾ ಕಾನೂನುಬದ್ಧವಾಗಿ ಭಾರತದ ಸದಸ್ಯತ್ವಕ್ಕೆ ವಿರೋಧ ವ್ಯಕ್ತಪಡಿಸಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ತಿಳಿಸಿದ್ದು, ಭಾರತದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದೆ.ಎನ್​ಎಸ್​ಜಿ ಸದಸ್ಯತ್ವ ಕೈತಪ್ಪಲು ಚೀನಾ ಕಾರಣ ಎಂದು ಭಾರತೀಯ ನಾಯಕರು ಆರೋಪಿಸಿರುವ ಹಿನ್ನೆಲೆಯಲ್ಲಿ ಚೀನಾದ ಗ್ಲೋಬಲ್ ಟೈಮ್್ಸ ಎಂಬ
ಅಂತಾರಾಷ್ಟ್ರೀಯ ವ್ಯವಹಾರಗಳಿಗೆ ಸಂಬಂಧಿಸಿದ ಪತ್ರಿಕೆಯೊಂದು ತನ್ನ ಸಂಪಾದಕೀಯದಲ್ಲಿ ಭಾರತ ಮತ್ತು ಭಾರತೀಯ ಮಾಧ್ಯಮಗಳ ವಿರುದ್ಧ ವಾಗ್ದಾಳಿ ನಡೆಸಿದೆ.

1975ರಲ್ಲಿ ಎನ್​ಎಸ್​ಜಿ ಸ್ಥಾಪನೆಯಾದ ನಂತರ ಪರಮಾಣು ಪ್ರಸರಣ ತಡೆ ಒಡಂಬಡಿಕೆಗೆ (ಎನ್​ಪಿಟಿ) ಸಹಿ ಹಾಕಿದವರನ್ನು ಮಾತ್ರ ಸಂಘಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಇದು ಸಂಘದ ಪ್ರಾಥಮಿಕ ನಿಯಮಗಳಲ್ಲಿ ಒಂದು. ಆದರೆ ಭಾರತ ಎನ್​ಪಿಟಿಗೆ ಸಹಿ ಹಾಕದೆ ಎನ್​ಎಸ್​ಜಿಗೆ ಸದಸ್ಯತ್ವ ಪಡೆಯಲು ಬಯಸುತ್ತಿದೆ. ಹಾಗಾಗಿ ಭಾರತದ ಸದಸ್ಯತ್ವನವನ್ನು ವಿರೋಧಿಸುವುದು ಚೀನಾ ಮತ್ತು ಇತರ ರಾಷ್ಟ್ರಗಳ ನೈತಿಕ ಕಾನೂನುಬದ್ಧ ಹಕ್ಕು. ಚೀನಾ ಸೇರಿದಂತೆ ಒಟ್ಟು 10 ರಾಷ್ಟ್ರಗಳು ಭಾರತಕ್ಕೆ ಸದಸ್ಯತ್ವ ನೀಡದಂತೆ ವಿರೋಧಿಸಿವೆ ಎಂದು ಗ್ಲೋಬಲ್ ಟೈಮ್್ಸ ಚೀನಾ ಪತ್ರಿಕೆ ತಿಳಿಸಿದೆ.

ಅಮೆರಿಕ ಬೆಂಬಲ ಸೂಚಿಸಿದ ಮಾತ್ರಕ್ಕೆ ಇಡೀ ವಿಶ್ವವೇ ಭಾರತಕ್ಕೆ ಬೆಂಬಲ ಸೂಚಿಸಿದಂತೆ ಆಗುವುದಿಲ್ಲ. ಅಮೆರಿಕವೊಂದೇ ಇಡೀ ವಿಶ್ವವಲ್ಲ. ಭಾರತ ಎಲ್ಲಾ ರಾಷ್ಟ್ರಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಮತ್ತು ಕಾನೂನುಬದ್ಧವಾಗಿ ಅರ್ಜಿ ಸಲ್ಲಿಸಬೇಕು ಎಂದು ಚೀನಾ ಪತ್ರಿಕೆ ತಿಳಿಸಿದೆ.

No comments:

Post a Comment