Thursday 7 July 2016

ನೇತಾಜಿ ಕಾರು ಚಾಲಕ ಈಗ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ..!

 ಅಜಂಗಡ: ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಗುಮ್ನಾಮಿ ಬಾಬಾ ಹೆಸರಿನಲ್ಲಿ ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಬದುಕಿದ್ದರು ಎಂಬ ಗುಮಾನಿಗಳ ಮಧ್ಯೆ ನೇತಾಜಿ ಅವರ ಕಾರು ಚಾಲಕ ಹಾಗೂ ಅಂಗರಕ್ಷಕರಾಗಿದ್ದ ಕರ್ನಲ್ ನಿಜಾಮುದ್ದೀನ್ ಮತ್ತೆ ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಗಿದ್ದಾರೆ. ಈಗ ಅವರು ಸುದ್ದಿಯಾಗಿರುವುದು ಏಕೆಂದರೆ ಅವರೀಗ ಈ ಭೂಮಿಯಲ್ಲಿ ಬದುಕಿರುವ ಅತ್ಯಂತ ಹಿರಿಯ ಮನುಷ್ಯ ಮತ್ತು 116ನೇ
ವಯಸ್ಸಿನಲ್ಲಿ ಬ್ಯಾಂಕ್ ಖಾತೆ ತೆರೆದಿದ್ದಾರೆ ಎಂಬ ಕಾರಣಕ್ಕಾಗಿ.

ಕರ್ನಲ್ ನಿಜಾಮುದ್ದೀನ್ ಯಾನೆ ಸೈಫುದ್ದೀನ್ ಅವರ ಮತದಾರ ಗುರುತಿನ ಚೀಟಿ ಮತ್ತು ಪಾಸ್​ಪೋರ್ಟ್ ಪ್ರಕಾರ ಅವರು 1900ರಲ್ಲಿ ಜನಿಸಿದ್ದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ತೆರೆಯುವ ಸಲುವಾಗಿ ಅವರು ಸಲ್ಲಿಸಿದ ಈ ದಾಖಲೆಗಳಿಂದ ಅವರ ವಯಸ್ಸು ಬೆಳಕಿಗೆ ಬಂದಿದೆ.

ಈ ವರ್ಷ ಫೆಬ್ರುವರಿಯಲ್ಲಿ ವಿಶ್ವದ ಅತ್ಯಂತ ವೃದ್ಧ ಎಂಬುದಾಗಿ ಭಾವಿಸಲಾಗಿದ್ದ ಜಪಾನಿನ ವ್ಯಕ್ತಿ ತಮ್ಮ 114ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಹೀಗಾಗಿ ಭಾನುವಾರ 116 ವರ್ಷ, 3 ತಿಂಗಳು, 14 ದಿನಗಳನ್ನು ಪೂರೈಸಿರುವ ನಿಜಾಮುದ್ದೀನ್ ಅವರು ಭೂಮಿಯ ಮೇಲೆ ಬದುಕಿರುವ ಅತ್ಯಂತ ಹಿರಿಯ ಮನುಷ್ಯ ಎಂಬುದು ಸ್ಪಷ್ಟವಾಗಿದೆ. ಇದೀಗ ನಿಜಾಮುದ್ದೀನ್ ಅವರು ತಮ್ಮ ಪತ್ನಿ ಅಜ್​ಬುನ್ನೀಸಾ (107) ಮತ್ತು ತಮ್ಮ ಹೆಸರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬ್ಯಾಂಕ್ ಖಾತೆ ತೆರೆದು ಇನ್ನೊಂದು ದಾಖಲೆ ನಿರ್ಮಿಸಿದ್ದಾರೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕಾರಿನ ಚಾಲಕ ಹಾಗೂ ಅಂಗರಕ್ಷಕರಾಗಿದ್ದ ಕರ್ನಲ್ ನಿಜಾಮುದ್ದೀನ್ ಅವರು 2006ರಲ್ಲೇ, ಸುಭಾಷ್ ಚಂದ್ರ ಬೋಸ್ ಅವರು 1945ರ ತೈಪೆ ವಿಮಾನ ಅಪಘಾತದಲ್ಲಿ ಮೃತರಾಗಿಲ್ಲ, ಏಕೆಂದರೆ ಅವರು ಆ ವಿಮಾನವನ್ನು ಹತ್ತಿರಲೇ ಇಲ, ಕೊನೆ ಕಣದಲ್ಲಿ ಮನಸ್ಸು ಬದಲಿಸಿದ್ದರು ಎಂದು ಖಂಡತುಂಡವಾಗಿ ಹೇಳಿದ್ದಲ್ಲದೆ, ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಅವರು ಫೈಜಾಬಾದಿನಲ್ಲಿ ಗುಮ್ನಾಮಿ ಬಾಬಾ ಹೆಸರಿನಲ್ಲಿ ಅಜ್ಞಾತರಾಗಿ ಜೀವಿಸಿ ಬಳಿಕ ಅದೇ ಹೆಸರಿನಲ್ಲಿ ನಿಧನರಾಗಿದ್ದರು ಎಂದು ಪ್ರತಿಪಾದಿಸಿದ್ದರು. ಇತ್ತೀಚೆಗೆ ಗುಮ್ನಾಮಿ ಬಾಬಾ ಅವರ ಬಳಿ ಇದ್ದ ಪೆಟ್ಟಿಗೆಯೊಂದರಲ್ಲಿ ನೇತಾಜಿ ಅವರ ಕುಟುಂಬ ಸದಸ್ಯರ ಭಾವಚಿತ್ರಗಳು ಪತ್ತೆಯಾಗಿದ್ದವು.

No comments:

Post a Comment