Thursday 7 July 2016

ಢಾಕಾ ಉಗ್ರರಿಗೆ ಸ್ಫೂರ್ತಿಯಾಗಿದ್ದ ಜಾಕಿರ್ ನಾಯಕ್ ಮೇಲೆ ಗುಪ್ತಚರ ಇಲಾಖೆ ನಿಗಾ

ನವದೆಹಲಿ: ಢಾಕಾದಲ್ಲಿ ದಾಳಿ ನಡೆಸಿದ್ದ ಉಗ್ರರಿಗೆ ಸ್ಫೂರ್ತಿಯಾಗಿದ್ದ ಮುಂಬೈ ನ ಇಸ್ಲಾಮ್ ಧರ್ಮ ಪ್ರಚಾರಕ ಜಾಕಿರ್ ನಾಯಕ್ ಮೇಲೆ ಗುಪ್ತಚರ ಇಲಾಖೆ ನಿಗಾ ವಹಿಸಿದೆ.ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ನ ಸ್ಥಾಪಕ ಡಾ.ಜಾಕಿರ್ ನಾಯಕ್ ಹಾಗೂ ಇಸಿಸ್ ಉಗ್ರ ಸಂಘಟನೆ ಬೆಂಬಲಿಗ ಮೆಹ್ದಿ ಮಸ್ರೂರ್ ಬಿಸ್ವಾಸ್ ಢಾಕಾ ಉಗ್ರರಿಗೆ ಸ್ಫೂರ್ತಿಯಾಗಿದ್ದರು ಎಂಬ ಮಾಹಿತಿ ಬಹಿರಂಗವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಗುಪ್ತಚರ ಇಲಾಖೆ, ಇಸ್ಲಾಮ್ ಧರ್ಮ ಪ್ರಚಾರಕ ಜಾಕಿರ್ ನಾಯಕ್ ಮೇಲೆ ಕಣ್ಣಿಟ್ಟಿದೆ.ಇಸ್ಲಾಮ್ ಭಯೋತ್ಪಾದನೆಯನ್ನು ಸಮರ್ಥಿಸಿಕೊಂಡಿದ್ದ ಜಾಕಿರ್ ನಾಯಕ್, ಒಸಾಮಾ ಬಿನ್ ಲ್ಯಾಡನ್ ನಂತಹವರು ಇಸ್ಲಾಮ್ ವಿರೋಧಿಗಳ ವಿರುದ್ಧ ಹೋರಾಡುತ್ತಿದ್ದಾರೆ ಒಸಾಮಾ ಬಿನ್ ಲ್ಯಾಡನ್ ಗೆ ಬೆಂಬಲಿಸುತ್ತೇನೆ ಎಂದು ಹೇಳಿದ್ದರು. ಇಷ್ಟೇ ಅಲ್ಲದೆ 2010 ರಲ್ಲಿ ಜಾಕಿರ್ ನಾಯಕ್ ಭಯೋತ್ಪಾದನೆ ಹಾಗೂ ಇಸ್ಲಾಮ್ ಬಗ್ಗೆ ಮಾತನಾಡುತ್ತಾ, ಪ್ರತಿಯೊಬ್ಬ ಮುಸ್ಲಿಮರು ಭಯೋತ್ಪಾದಕರಾಗಿರಬೇಕು "ಅಂದರೆ ಕಳ್ಳನೊಬ್ಬ ಪೊಲೀಸನನ್ನು ನೋಡಿದರೆ ಭಯಪಡುತ್ತಾನೆ, ಹಾಗಾಗಿ ಪೊಲೀಸ್ ಕಳ್ಳರಲ್ಲಿ ಭಯ ಮೂಡಿಸುತ್ತಾನೆ. ಹಾಗೆಯೇ ಕಳ್ಳರ ಪಾಲಿಗೆ ಮುಸ್ಲಿಮರೂ ಭಯೋತ್ಪಾದಕರಾಗಿರಬೇಕು ಎಂದು ಜಾಕಿರ್ ನಾಯ್ಕ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಜಾಕಿರ್ ನಾಯಕ್ ಭಾಷಣಗಳಿಂದ ಸ್ಫೂರ್ತಿ ಪಡೆದಿದ್ದ ಯುವಕರು ಢಾಕಾ ಉಗ್ರ ದಾಳಿಯಲ್ಲಿ ಭಾಗಿಯಾಗಿ 20 ಜನರನ್ನು ಹತ್ಯೆ ಮಾಡಿದ್ದರು. ಢಾಕಾ ಉಗ್ರರು ಮಾತ್ರವಲ್ಲದೆ ಹೈದರಾಬಾದ್ ನಲ್ಲಿ ಎನ್ ಐಎ ಬಂಧಿಸಿರುವ ಇಸೀಸ್ ಉಗ್ರ ಸಂಘಟನೆಯ ಶಂಕಿತ ಉಗ್ರರಿಗೂ ಜಾಕಿರ್ ನಾಯಕ್ ಸ್ಫೂರ್ತಿಯಾಗಿದ್ದರು ಎಂದು ತಿಳಿದುಬಂದಿದ್ದು ಈ ಹಿನ್ನೆಲೆಯಲ್ಲಿ  ಜಾಕಿರ್ ನಾಯಕ್ ಮೇಲೆ ಗುಪ್ತಚರ ಇಲಾಖೆ ನಿಗಾ ವಹಿಸಿದೆ.


No comments:

Post a Comment