Thursday 7 July 2016

ಮೊದಲ ಪ್ರಯತ್ನದಲ್ಲೇ ಕೆಎಎಸ್ ಪಾಸ್ ಮಾಡಿದ್ದರು ಕಲ್ಲಪ್ಪ ಹಂಡಿಭಾಗ್


ಬೆಳಗಾವಿ: ಕುಗ್ರಾಮದಲ್ಲಿ ಹುಟ್ಟಿ ಬೆಳೆದಿದ್ದ ಕಲ್ಲಪ್ಪ ಹಂಡಿಭಾಗ್ ಅವರು ಮೊದಲ ಪ್ರಯತ್ನದಲ್ಲೇ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.ರಾಯಭಾಗ್ ತಾಲೂಕಿನ ಹಂಡಿಗುಂಡ್ ಎಂಬ ಗ್ರಾಮದಲ್ಲಿ ಕಲ್ಲಪ್ಪ ಅವರು ಜನಿಸಿದ್ದರು. ಬಡಕುಟುಂಬದಿಂದ ಮೇಲೆ ಬಂದಿದ್ದ ಕಪ್ಪಲ್ಲ ಅವರ ಪ್ರತಿಭೆ ಇಡೀ ರಾಜ್ಯದ ಜನತೆ ಗ್ರಾಮವನ್ನು ಗುರ್ತಿಸುವಂತೆ ಮಾಡಿತ್ತು.
ಬಿ.ಎಡ್ ಮಾಡಿದ್ದ ಕಲ್ಲಪ್ಪ ಅವರು 2006ರಲ್ಲಿ ಸರ್ಕಾರಿ ಶಿಕ್ಷಕನಾಗಿ ಆಯ್ಕೆಯಾಗಿದ್ದರು. 2010ರಲ್ಲಿ ಮೊದಲ ಪ್ರಯತ್ನದಲ್ಲೇ
ಕೆಎಎಸ್ ಉತ್ತೀರ್ಣರಾಗಿದ್ದ ಇವರು, ಶಿಕ್ಷಕ ಹುದ್ದೆಯನ್ನು ಬಿಟ್ಟು ಬೆಂಗಳೂರಿನಲ್ಲಿ ಮುಖ್ಯ ಚುನಾವಣಾಧಿಕಾರಿಯಾಗಿ ಕೆಲಸ ಮಾಡಲು ಆರಂಭಿಸಿದ್ದರು. ನಂತರ ಪ್ರಾಮಾಣಿಕ ಅಧಿಕಾರಿಯಾಗಿ ದೇಶಕ್ಕೆ ಸೇವೆ ಸಲ್ಲಿಸುವ ಉದ್ದೇಶದಿಂದ ಪೊಲೀಸ್ ಇಲಾಖೆಗೆ ಸೇರಿ ಸೇವೆ ಸಲ್ಲಿಸಲು ಆರಂಭಿಸಿದ್ದರು.
ಇದಾದ ಕೆಲ ವರ್ಷಗಳ ಬಳಿದ ಧಾರವಾಡದ ಡಿವೈಎಸ್ ಯಾಗಿ ನೇಮಕಗೊಂಡಿದ್ದರು. ನಂತರ ಚಿಕ್ಕಮಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಅಧಿಕಾರಿಯ ತಂದೆ ಕೂಡ ಸರ್ಕಾರಿ ಶಾಲೆಯ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದು, ಇದೀಗ ನಿವೃತ್ತಿ ಹೊಂದಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿ ಗ್ರಾಮಕ್ಕೆ ಉತ್ತಮ ಹೆಸರು ತಂದುಕೊಟ್ಟಿದ್ದ ಕಲ್ಲಪ್ಪ ಅವರ ಸಾವು, ಕುಟುಂಬಕ್ಕೆ ಅಷ್ಟೇ ಅಲ್ಲದೆ, ಗ್ರಾಮಸ್ಥರೂ ಕೂಡ ದಿಗ್ಭ್ರಾಂತಿಯಾಗುವಂತೆ ಮಾಡಿದೆ.
ಇದೀಗ ಕಲ್ಲಪ್ಪ ಅವರ ಕುಟುಂಬ ದುಃಖದ ಮಡುವಿನಲ್ಲಿ ಮುಳುಗಿದ್ದು, ವ್ಯವಸ್ಥೆ ವಿರುದ್ಧ ಕಿಡಿಕಾರುತ್ತಿದೆ. ಕಲ್ಲಪ್ಪ ಅವರ ಪತ್ನಿ ವಿದ್ಯಾ ಅವರು ತಮ್ಮ ಪತಿ ವಿರುದ್ಧ ಕೇಳಿ ಬಂದಿರುವ ಆರೋಪಗಳನ್ನು ತಳ್ಳಿಹಾಕಿದ್ದು, ನನ್ನ ಪತಿ ರಾಜ್ಯದಲ್ಲಿ ನಿರ್ಮಾಣವಾಗಿರುವ ಅವ್ಯವಸ್ಥೆಗೆ ಬಲಿಯಾಗಿದ್ದಾರೆಂದು ಹೇಳಿಕೊಂಡಿದ್ದಾರೆ

No comments:

Post a Comment